Monday, 21 Nov, 7.34 am

ಲಹರಿ
ಹೀಗೇ ಒತ್ತಡದ ನಡುವೆ ಬರೆದದ್ದು..

(7 Feb) ನಾ ದಿವಾಕರ ( ನೋಟು ವಿನಿಮಯ ಮತ್ತು ಜನಸಾಮಾನ್ಯರ ಪರದಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕಪ್ಪು ಹಣ ಮತ್ತು ನೋಟು ಅಮಾನ್ಯೀಕರಣವನ್ನು ಕುರಿತು ಗಂಭೀರವಾಗಿ ಕುಳಿತು ಯೋಚಿಸುವ ವ್ಯವಧಾನವನ್ನೂ ಕಳೆದುಕೊಂಡಿದ್ದೆ. ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗಿನ ಬ್ಯಾಂಕ್ ಕೆಲಸದ ಒತ್ತಡಗಳ ನಡುವೆ ಆಗಾಗ್ಗೆ ತೋಚಿದ ಫೇಸ್ ಬುಕ್ ನಲ್ಲಿ ಗೀಚಿದ ಕೆಲವು ಸಾಲುಗಳು ಇಲ್ಲಿವೆ. ಇವು ನ್ಯಾನೋ ಕಥೆಗಳೋ, ಅನಿಸಿಕೆಗಳೋ, ಹೈರಾಣಾದ ಮನಸ್ಸಿನ ಹುಚ್ಚು ಕೋಡಿ ಮಾತುಗಳೋ. ಓದಿ ಆನಂದಿಸಿ ) ನೆಲ ಸಮ ಮಾಡಲು ಜೆಸಿಬಿ ಬಾಗಿಲ ಹೊರಗೆ ನಿಂತಿತ್ತು ನೆಲ ಗುಡಿಸುತ್ತಿದ್ದವ ಕೇಳಿದ, ಸಮ ಎಂದರೇನು ? ತಾನು ಹಾಕಿದ ಗಾಳಕ್ಕೆ ಸಹಸ್ರ ಮೀನುಗಳು ಸಿಲುಕುತ್ತಿರುವುದನ್ನು ಕಂಡು ಸಂಭ್ರಮಿಸುತ್ತಿದ್ದ ಮೀನುಗಾರನಿಗೆ ದೂರದಲ್ಲಿದ್ದ ತಿಮಿಂಗಿಲವೊಂದು ಹೇಳಿತು - ಮೊದಲು ನಾನು ಹಾಕುವ ಗಾಳದಿಂದ ತಪ್ಪಿಸಿಕೋ ನೋಡೋಣ ! ಕೊಳೆಗೇರಿಯೊಂದರ ಪಕ್ಕದಲ್ಲೇ ತನ್ನ ಬೃಹತ್ ಸೌಧ ನಿರ್ಮಿಸಲು ಗುದ್ದಲಿ ಪೂಜೆ ನಡೆಸುತ್ತಿದ್ದ ಧನಿಕನಿಗೆ ಗಂಟೆ ಜಾಗಟೆಗಳ ನಡುವೆಯೂ ಸಣ್ಣ ನಗುವೊಂದು ಕೇಳಿಸಿತು - ದೂರದಲ್ಲೊಂದು ತಲೆಬುರುಡೆ ಬಾಯ್ಬಿಟ್ಟು ಕುಳಿತಿತ್ತು ! ಅತ್ಯಂತ ಜನಪ್ರಿಯ ರಾಜಕೀಯ ನಾಯಕನೊಬ್ಬನನ್ನು ಮಾಧ್ಯಮ ಮಿತ್ರನೊಬ್ಬ ಕೇಳಿದ - ಸ್ವಾಮಿ ನಿಮಗೆ ಜನಸಾಮಾನ್ಯರ ನಾಡಿ ಮಿಡಿತ ಅರಿವಾಗುತ್ತದೆಯೇ ? ಥಟ್ಟನೆ ಜನನಾಯಕ ಕೇಳಿದ - ನಾಡಿ ಅಂದ್ರೇನಯ್ಯಾ ?' ಆರು ಗಂಟೆಗಳ ಕಾಲ ಬಿಸಿಲ ಝಳಪಿನಲ್ಲಿ ನಿಂತು ಹೈರಾಣಾಗಿ ಒಂದು ನೋಟು ಕೈಯ್ಯಲ್ಲಿ ಹಿಡಿದು ಮನೆಗೆ ಹಿಂದಿರುಗಿದವನನ್ನು ಅವನ ಮನೆಯ ಸಾಕು ನಾಯಿ ಕೇಳಿತು - ನಾನೆಂದಾದರೂ ಕ್ಯೂನಲ್ಲಿ ನಿಂತಿರುವುದನ್ನು ನೋಡಿದ್ಯಾ ? ಮೂರೇ ಜನರಿದ್ದ ತನ್ನ ಕುಟುಂಬಕ್ಕೆ ಮೂವತ್ತು ಅಂತಸ್ತಿನ ವೈಭವೋಪೇತ ಬಂಗಲೆಯನ್ನು ಕಟ್ಟಿಸಿದ ಧನಿಕ ಹರುಷ ಉಕ್ಕಿ ತನ್ನ ಬಿಎಂಡಬ್ಲ್ಯು ಕಾರನ್ನು ಏರಲು ಹೋಗಿ, ಪಂಚರ್ ಆಗಿದ್ದ ಕಾರಿನ ಟೈರ್ ನಲ್ಲಿ ಸಿಲುಕಿದ್ದ ಮೂಳೆಯ ತುಂಡನ್ನು ನೋಡುತ್ತಲೇ ನಿಂತುಬಿಟ್ಟ. ಹೃದಯ ಸಂಬಂಧಿಯೊಬ್ಬರ ಶವಸಂಸ್ಕಾರ ಮುಗಿಸಿ ಮಸಣದಿಂದ ಹೊರಬರುತ್ತಿದ್ದವನಿಗೆ ಕೀರಲು ದನಿಯೊಂದು ಕೇಳಿಸಿತು - ನಿನ್ನ ಮುಂದಿನ ಹಾದಿ ಯಾವುದಯ್ಯಾ ? ಅವನು ನಿರುತ್ತರನಾದ ! ತಾನು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎಂಬ ಭ್ರಮೆಯಲ್ಲಿರುವ ದೊರೆಗೆ ತನ್ನ ಅಂಗಾಂಗಗಳ ಪರಿವೆ ಇರಬೇಕಲ್ಲವೇ ? ಜೀವನವಿಡೀ ದೇವಸ್ಥಾನದ ಹೊರಗೆ ಬಿಡಿಗಾಸು ಭಿಕ್ಷೆಗಾಗಿ ಸಾಲಿನಲ್ಲಿ ನಿಂತು ಹೈರಾಣಾಗಿದ್ದ ವ್ಯಕ್ತಿಯೊಬ್ಬ ಹೇಳಿದ - ನನ್ನ ಭಾರತ ಬ್ಯಾಂಕುಗಳ ಮುಂದಿದೆ ನೋಡಾ ! ಶವಾಗಾರವನ್ನು ಪ್ರವೇಶಿಸಿದ ಹೊಸ ಮೃತಾತ್ಮವನ್ನು ಅಲ್ಲಿಯೇ ತಂಗಿದ್ದ ಮತ್ತೊಂದು ಆತ್ಮ ಪ್ರಶ್ನಿಸಿತು - ನಿನಗೆ ಎಷ್ಟು ನೋಟುಗಳು ಸಿಕ್ಕಿದವು ? ನೋಟು ವಿನಿಮಯದ ಭರಾಟೆಯಲ್ಲಿದ್ದ ಬ್ಯಾಂಕ್ ನೌಕರನೊಬ್ಬನ ಕಿವಿಯ ಬಳಿ ಕುಳಿತ ಸೊಳ್ಳೆಯೊಂದು ಕಚ್ಚಲು ಹಿಂಜರಿದು ಮೆಲ್ಲನೆ ಉಸುರಿತು - ನಿನ್ನಲ್ಲಿ ರಕ್ತವೇ ಇಲ್ವಲ್ಲೋ !!!! ಶ್ರೀಮಂತರ ಮನೆಯ ರಾಜವೈಭೋಗದ ಮದುವೆಯೊಂದರಲ್ಲಿ ಮಾಂಗಲ್ಯಂ ತಂತುನಾನೇನಾ ಎಂಬ ಮಂತ್ರವನ್ನಾಲಿಸಿದ ಶ್ರಮ ಜೀವಿಯೊಬ್ಬ ಪುರೋಹಿತರನ್ನು ಕೇಳಿದ, ಸ್ವಾಮಿ ಮಾಂಗಲ್ಯದ ತಂತು ನಾನೇನಾ ? ದಿನವಿಡೀ ಬೆವರು ಸುರಿಸಿ ಕೂಲಿನಾಲಿ ಮಾಡುತ್ತಾ ಹಸಿದು ಬೆಂದ ವ್ಯಕ್ತಿಯೊಬ್ಬ ಒಂದು ನೋಟಿಗಾಗಿ ಸಾಲಿನಲ್ಲಿ ನಿಂತಾಗ ಅವನ ನೋಟ ವೇಗದಿಂದ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರಿನ ಮೇಲಿತ್ತು. ಇನ್ನು ಮುಂದೆ ಮನೆಯಲ್ಲಿ ಸಾವು ಸಂಭವಿಸಿದರೆ ಆತಂಕ ಬೇಕಿಲ್ಲ. ಶವ ಸಾಗಿಸಲು ಯಾವುದೇ ಸಹಕಾರ ದೊರಕದೆ ಇದ್ದಲ್ಲಿ ಹತ್ತಿರದಲ್ಲಿರುವ ಯಾವುದೇ ಸಾರ್ವಜನಿಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ . ಕನಿಷ್ಠ ನಾಲ್ಕು ಸಿಬ್ಬಂದಿ ಇದ್ದೇ ಇರುತ್ತಾರೆ. ಜೈಲಿನಲ್ಲಿದ್ದ ಅಕ್ರಮ ಆಸ್ತಿಯ ಒಡೆಯನ ರಾಜವೈಭವದ ಭಾಜಾ ಭಜಂತ್ರಿಯ ನಡುವೆ ಪರಾರಿಯಾಗಿದ್ದ ವಂಚಕನೊಬ್ಬನಿಗೆ ರತ್ನಗಂಬಳಿಯ ಸ್ವಾಗತ - ಅಮಾನ್ಯೀಕರಣವಾದದ್ದು ಹಳೆಯ ನೋಟುಗಳೋ ನೈತಿಕ ಮೌಲ್ಯಗಳೋ ? ಕಿಂಗ್ ಫಿಷರ್ ಹಕ್ಕಿ ಸಂಕುಲದ ಒಡೆಯನ ಎದುರು ನಿಂತ ಸಾವಿರ ರೂ ಮೌಲ್ಯದ ಕರೆನ್ಸಿ ನೋಟ್ ಹೇಳಿತು - " ನೀನೇ ಅದೃಷ್ಟವಂತ ಕಣಯ್ಯಾ "! ಶವ ಸಾಗಿಸುತ್ತಿದ್ದ ವಾಹನವೊಂದು ಪ್ರಪಾತಕ್ಕೆ ಬಿದ್ದು ವಾಹನದಲ್ಲಿದ್ದವರೆಲ್ಲೂ ಶವಗಳಾದರು.
ಕಮರಿಯೊಳಗಿಂದ ಸಣ್ಣ ಕೇಕೆಯೊಂದು ಕೇಳಿಸಿತು. ತನ್ನ ಯಜಮಾನನ ಸೇವೆಯಲ್ಲಿ ದಿನವಿಡೀ ದುಡಿದು ದಣಿದು ಬೆವರಿಳಿಸಿ ಮುಸ್ಸಂಜೆಯ ವೇಳೆಗೆ ಉಸ್ಸಪ್ಪಾ ಎಂದು ವಿರಮಿಸಿದ ಕತ್ತೆಯ ಬೆನ್ನಮೇಲೆ ಯಜಮಾನ ಮತ್ತೊಂದು ಹೊರೆ ಹೊರಿಸಿದಾಗ ಕತ್ತೆ ಮನದಲ್ಲೇ ಹೇಳಿತು - ಕತ್ತೆ ನಾನಲ್ಲ ಅವನು ! ಔದಾರ್ಯದ ಭಾವದಲ್ಲಿ ಶ್ರೀಮಂತನೊಬ್ಬ ದಾನ ಮಾಡಿದ ಒಂದು ದಟ್ಟಿ ಪಂಚೆ ಈ ಹಿಂದೆ ತನ್ನಿಂದಲೇ ನಗ್ನರಾಗಿದ್ದವರ ಇತಿಹಾಸವನ್ನೇ ಮುಚ್ಚಿಹಾಕಿಬಿಟ್ಟಿತು. ಇತಿಹಾಸದ ಕಂದಕಗಳಲ್ಲಿ ಗುಲಾಬಿಯ ಸುಗಂಧ ಶೋಧಿಸುತ್ತಿದ್ದಾಗ ಕಾಲಿಗೆ ನೆಟ್ಟ ಮುಳ್ಳು ನೆನಪಿಸಿತು - ಎಲ್ಲಿರುವೆನೆಂದು ! ಹಾರಿ ಹೋಗುತ್ತಿದ್ದ ಪ್ರಾಣಪಕ್ಷಿಯನ್ನು ಹಿಡಿಯಲು ಹೋದವ ಮರಳಲೇ ಇಲ್ಲ ಪಕ್ಷಿಯೊಂದು ಕಾಯುತ್ತಲೇ ಇತ್ತು ! ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಮಾರಾಟದ ಕಡಲಿನಲಿ ಬಿಸಿಲು ಬೆಳದಿಂಗಳು ನದಿಗಳು ಬತ್ತಿಹೋಗುತ್ತಿವೆ ಬಿಸಿಲು ಝಳಪಿಸುತ್ತಿದೆ ಬೆಳದಿಂಗಳ ತಂಪಿನಲಿ ತೋಳಗಳು ಸಂಭ್ರಮಿಸುತ್ತಿವೆ. ಬೆವರಿನ ಗುಳ್ಳೆಯೊಂದು ಅದ್ಧೂರಿ ಮದುವೆಯ ಸುಗಂಧ ದ್ರವ್ಯಗಳ ನಡುವೆ ನುಸುಳಲು ಯತ್ನಿಸಿದಾಗ ಬೂಟುಗಾಲುಗಳಡಿ ಸಿಲುಕಿ ನಲುಗಿಹೋಯಿತು ಚೀತ್ಕಾರವನು ಕೇಳಿಸಿಕೊಂಡ ನೆತ್ತರಿನ ಬಿಂದು ಮತ್ತೊಂದು ಬದಿಯಿಂದ ಕೂಗಿ ಹೇಳಿತು ನೀ ನನ್ನೊಡನೆ ಬಾ, ನಾವಿಬ್ವರೂ ಒಂದಾಗೋಣ ! ಸೆಲ್ಫಿಗಳ ಭರಾಟೆಯಲಿ ಗಾಂಧರ್ವ ವಿವಾಹ ಗಮನಕ್ಕೇ ಬರದೆ ಹೋಯಿತು ! ನಾ ದಿವಾಕರ ( ನೋಟು ವಿನಿಮಯ ಮತ್ತು ಜನಸಾಮಾನ್ಯರ ಪರದಾಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಕಪ್ಪು ಹಣ ಮತ್ತು ನೋಟು ಅಮಾನ್ಯೀಕರಣವನ್ನು ಕುರಿತು ಗಂಭೀರವಾಗಿ ಕುಳಿತು ಯೋಚಿಸುವ ವ್ಯವಧಾನವನ್ನೂ ಕಳೆದುಕೊಂಡಿದ್ದೆ. ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗಿನ ಬ್ಯಾಂಕ್ ಕೆಲಸದ ಒತ್ತಡಗಳ ನಡುವೆ ಆಗಾಗ್ಗೆ ತೋಚಿದ ಫೇಸ್ ಬುಕ್ ನಲ್ಲಿ ಗೀಚಿದ ಕೆಲವು ಸಾಲುಗಳು ಇಲ್ಲಿವೆ. ಇವು ನ್ಯಾನೋ ಕಥೆಗಳೋ, ಅನಿಸಿಕೆಗಳೋ, ಹೈರಾಣಾದ ಮನಸ್ಸಿನ ಹುಚ್ಚು ಕೋಡಿ ಮಾತುಗಳೋ. ಓದಿ ಆನಂದಿಸಿ ) ನೆಲ ಸಮ ಮಾಡಲು ಜೆಸಿಬಿ ಬಾಗಿಲ ಹೊರಗೆ ನಿಂತಿತ್ತು ನೆಲ ಗುಡಿಸುತ್ತಿದ್ದವ ಕೇಳಿದ, ಸಮ ಎಂದರೇನು ? ತಾನು ಹಾಕಿದ ಗಾಳಕ್ಕೆ ಸಹಸ್ರ ಮೀನುಗಳು ಸಿಲುಕುತ್ತಿರುವುದನ್ನು ಕಂಡು ಸಂಭ್ರಮಿಸುತ್ತಿದ್ದ ಮೀನುಗಾರನಿಗೆ ದೂರದಲ್ಲಿದ್ದ ತಿಮಿಂಗಿಲವೊಂದು ಹೇಳಿತು - ಮೊದಲು ನಾನು ಹಾಕುವ ಗಾಳದಿಂದ ತಪ್ಪಿಸಿಕೋ ನೋಡೋಣ ! ಕೊಳೆಗೇರಿಯೊಂದರ ಪಕ್ಕದಲ್ಲೇ ತನ್ನ ಬೃಹತ್ ಸೌಧ ನಿರ್ಮಿಸಲು ಗುದ್ದಲಿ ಪೂಜೆ ನಡೆಸುತ್ತಿದ್ದ ಧನಿಕನಿಗೆ ಗಂಟೆ ಜಾಗಟೆಗಳ ನಡುವೆಯೂ ಸಣ್ಣ ನಗುವೊಂದು ಕೇಳಿಸಿತು - ದೂರದಲ್ಲೊಂದು ತಲೆಬುರುಡೆ ಬಾಯ್ಬಿಟ್ಟು ಕುಳಿತಿತ್ತು ! ಅತ್ಯಂತ ಜನಪ್ರಿಯ ರಾಜಕೀಯ ನಾಯಕನೊಬ್ಬನನ್ನು ಮಾಧ್ಯಮ ಮಿತ್ರನೊಬ್ಬ ಕೇಳಿದ - ಸ್ವಾಮಿ ನಿಮಗೆ ಜನಸಾಮಾನ್ಯರ ನಾಡಿ ಮಿಡಿತ ಅರಿವಾಗುತ್ತದೆಯೇ ? ಥಟ್ಟನೆ ಜನನಾಯಕ ಕೇಳಿದ - ನಾಡಿ ಅಂದ್ರೇನಯ್ಯಾ ?' ಆರು ಗಂಟೆಗಳ ಕಾಲ ಬಿಸಿಲ ಝಳಪಿನಲ್ಲಿ ನಿಂತು ಹೈರಾಣಾಗಿ ಒಂದು ನೋಟು ಕೈಯ್ಯಲ್ಲಿ ಹಿಡಿದು ಮನೆಗೆ ಹಿಂದಿರುಗಿದವನನ್ನು ಅವನ ಮನೆಯ ಸಾಕು ನಾಯಿ ಕೇಳಿತು - ನಾನೆಂದಾದರೂ ಕ್ಯೂನಲ್ಲಿ ನಿಂತಿರುವುದನ್ನು ನೋಡಿದ್ಯಾ ? ಮೂರೇ ಜನರಿದ್ದ ತನ್ನ ಕುಟುಂಬಕ್ಕೆ ಮೂವತ್ತು ಅಂತಸ್ತಿನ ವೈಭವೋಪೇತ ಬಂಗಲೆಯನ್ನು ಕಟ್ಟಿಸಿದ ಧನಿಕ ಹರುಷ ಉಕ್ಕಿ ತನ್ನ ಬಿಎಂಡಬ್ಲ್ಯು ಕಾರನ್ನು ಏರಲು ಹೋಗಿ, ಪಂಚರ್ ಆಗಿದ್ದ ಕಾರಿನ ಟೈರ್ ನಲ್ಲಿ ಸಿಲುಕಿದ್ದ ಮೂಳೆಯ ತುಂಡನ್ನು ನೋಡುತ್ತಲೇ ನಿಂತುಬಿಟ್ಟ. ಹೃದಯ ಸಂಬಂಧಿಯೊಬ್ಬರ ಶವಸಂಸ್ಕಾರ ಮುಗಿಸಿ ಮಸಣದಿಂದ ಹೊರಬರುತ್ತಿದ್ದವನಿಗೆ ಕೀರಲು ದನಿಯೊಂದು ಕೇಳಿಸಿತು - ನಿನ್ನ ಮುಂದಿನ ಹಾದಿ ಯಾವುದಯ್ಯಾ ? ಅವನು ನಿರುತ್ತರನಾದ ! ತಾನು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ಎಂಬ ಭ್ರಮೆಯಲ್ಲಿರುವ ದೊರೆಗೆ ತನ್ನ ಅಂಗಾಂಗಗಳ ಪರಿವೆ ಇರಬೇಕಲ್ಲವೇ ? ಜೀವನವಿಡೀ ದೇವಸ್ಥಾನದ ಹೊರಗೆ ಬಿಡಿಗಾಸು ಭಿಕ್ಷೆಗಾಗಿ ಸಾಲಿನಲ್ಲಿ ನಿಂತು ಹೈರಾಣಾಗಿದ್ದ ವ್ಯಕ್ತಿಯೊಬ್ಬ ಹೇಳಿದ - ನನ್ನ ಭಾರತ ಬ್ಯಾಂಕುಗಳ ಮುಂದಿದೆ ನೋಡಾ ! ಶವಾಗಾರವನ್ನು ಪ್ರವೇಶಿಸಿದ ಹೊಸ ಮೃತಾತ್ಮವನ್ನು ಅಲ್ಲಿಯೇ ತಂಗಿದ್ದ ಮತ್ತೊಂದು ಆತ್ಮ ಪ್ರಶ್ನಿಸಿತು - ನಿನಗೆ ಎಷ್ಟು ನೋಟುಗಳು ಸಿಕ್ಕಿದವು ? ನೋಟು ವಿನಿಮಯದ ಭರಾಟೆಯಲ್ಲಿದ್ದ ಬ್ಯಾಂಕ್ ನೌಕರನೊಬ್ಬನ ಕಿವಿಯ ಬಳಿ ಕುಳಿತ ಸೊಳ್ಳೆಯೊಂದು ಕಚ್ಚಲು ಹಿಂಜರಿದು ಮೆಲ್ಲನೆ ಉಸುರಿತು - ನಿನ್ನಲ್ಲಿ ರಕ್ತವೇ ಇಲ್ವಲ್ಲೋ !!!! ಶ್ರೀಮಂತರ ಮನೆಯ ರಾಜವೈಭೋಗದ ಮದುವೆಯೊಂದರಲ್ಲಿ ಮಾಂಗಲ್ಯಂ ತಂತುನಾನೇನಾ ಎಂಬ ಮಂತ್ರವನ್ನಾಲಿಸಿದ ಶ್ರಮ ಜೀವಿಯೊಬ್ಬ ಪುರೋಹಿತರನ್ನು ಕೇಳಿದ, ಸ್ವಾಮಿ ಮಾಂಗಲ್ಯದ ತಂತು ನಾನೇನಾ ? ದಿನವಿಡೀ ಬೆವರು ಸುರಿಸಿ ಕೂಲಿನಾಲಿ ಮಾಡುತ್ತಾ ಹಸಿದು ಬೆಂದ ವ್ಯಕ್ತಿಯೊಬ್ಬ ಒಂದು ನೋಟಿಗಾಗಿ ಸಾಲಿನಲ್ಲಿ ನಿಂತಾಗ ಅವನ ನೋಟ ವೇಗದಿಂದ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರಿನ ಮೇಲಿತ್ತು. ಇನ್ನು ಮುಂದೆ ಮನೆಯಲ್ಲಿ ಸಾವು ಸಂಭವಿಸಿದರೆ ಆತಂಕ ಬೇಕಿಲ್ಲ. ಶವ ಸಾಗಿಸಲು ಯಾವುದೇ ಸಹಕಾರ ದೊರಕದೆ ಇದ್ದಲ್ಲಿ ಹತ್ತಿರದಲ್ಲಿರುವ ಯಾವುದೇ ಸಾರ್ವಜನಿಕ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ . ಕನಿಷ್ಠ ನಾಲ್ಕು ಸಿಬ್ಬಂದಿ ಇದ್ದೇ ಇರುತ್ತಾರೆ. ಜೈಲಿನಲ್ಲಿದ್ದ ಅಕ್ರಮ ಆಸ್ತಿಯ ಒಡೆಯನ ರಾಜವೈಭವದ ಭಾಜಾ ಭಜಂತ್ರಿಯ ನಡುವೆ ಪರಾರಿಯಾಗಿದ್ದ ವಂಚಕನೊಬ್ಬನಿಗೆ ರತ್ನಗಂಬಳಿಯ ಸ್ವಾಗತ - ಅಮಾನ್ಯೀಕರಣವಾದದ್ದು ಹಳೆಯ ನೋಟುಗಳೋ ನೈತಿಕ ಮೌಲ್ಯಗಳೋ ? ಕಿಂಗ್ ಫಿಷರ್ ಹಕ್ಕಿ ಸಂಕುಲದ ಒಡೆಯನ ಎದುರು ನಿಂತ ಸಾವಿರ ರೂ ಮೌಲ್ಯದ ಕರೆನ್ಸಿ ನೋಟ್ ಹೇಳಿತು - " ನೀನೇ ಅದೃಷ್ಟವಂತ ಕಣಯ್ಯಾ "! ಶವ ಸಾಗಿಸುತ್ತಿದ್ದ ವಾಹನವೊಂದು ಪ್ರಪಾತಕ್ಕೆ ಬಿದ್ದು ವಾಹನದಲ್ಲಿದ್ದವರೆಲ್ಲೂ ಶವಗಳಾದರು. ಕಮರಿಯೊಳಗಿಂದ ಸಣ್ಣ ಕೇಕೆಯೊಂದು ಕೇಳಿಸಿತು. ತನ್ನ ಯಜಮಾನನ ಸೇವೆಯಲ್ಲಿ ದಿನವಿಡೀ ದುಡಿದು ದಣಿದು ಬೆವರಿಳಿಸಿ ಮುಸ್ಸಂಜೆಯ ವೇಳೆಗೆ ಉಸ್ಸಪ್ಪಾ ಎಂದು ವಿರಮಿಸಿದ ಕತ್ತೆಯ ಬೆನ್ನಮೇಲೆ ಯಜಮಾನ ಮತ್ತೊಂದು ಹೊರೆ ಹೊರಿಸಿದಾಗ ಕತ್ತೆ ಮನದಲ್ಲೇ ಹೇಳಿತು - ಕತ್ತೆ ನಾನಲ್ಲ ಅವನು ! ಔದಾರ್ಯದ ಭಾವದಲ್ಲಿ ಶ್ರೀಮಂತನೊಬ್ಬ ದಾನ ಮಾಡಿದ ಒಂದು ದಟ್ಟಿ ಪಂಚೆ ಈ ಹಿಂದೆ ತನ್ನಿಂದಲೇ ನಗ್ನರಾಗಿದ್ದವರ ಇತಿಹಾಸವನ್ನೇ ಮುಚ್ಚಿಹಾಕಿಬಿಟ್ಟಿತು. ಇತಿಹಾಸದ ಕಂದಕಗಳಲ್ಲಿ ಗುಲಾಬಿಯ ಸುಗಂಧ ಶೋಧಿಸುತ್ತಿದ್ದಾಗ ಕಾಲಿಗೆ ನೆಟ್ಟ ಮುಳ್ಳು ನೆನಪಿಸಿತು - ಎಲ್ಲಿರುವೆನೆಂದು ! ಹಾರಿ ಹೋಗುತ್ತಿದ್ದ ಪ್ರಾಣಪಕ್ಷಿಯನ್ನು ಹಿಡಿಯಲು ಹೋದವ ಮರಳಲೇ ಇಲ್ಲ ಪಕ್ಷಿಯೊಂದು ಕಾಯುತ್ತಲೇ ಇತ್ತು ! ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಮಾರಾಟದ ಕಡಲಿನಲಿ ಬಿಸಿಲು ಬೆಳದಿಂಗಳು ನದಿಗಳು ಬತ್ತಿಹೋಗುತ್ತಿವೆ ಬಿಸಿಲು ಝಳಪಿಸುತ್ತಿದೆ ಬೆಳದಿಂಗಳ ತಂಪಿನಲಿ ತೋಳಗಳು ಸಂಭ್ರಮಿಸುತ್ತಿವೆ. ಬೆವರಿನ ಗುಳ್ಳೆಯೊಂದು ಅದ್ಧೂರಿ ಮದುವೆಯ ಸುಗಂಧ ದ್ರವ್ಯಗಳ ನಡುವೆ ನುಸುಳಲು ಯತ್ನಿಸಿದಾಗ ಬೂಟುಗಾಲುಗಳಡಿ ಸಿಲುಕಿ ನಲುಗಿಹೋಯಿತು ಚೀತ್ಕಾರವನು ಕೇಳಿಸಿಕೊಂಡ ನೆತ್ತರಿನ ಬಿಂದು ಮತ್ತೊಂದು ಬದಿಯಿಂದ ಕೂಗಿ ಹೇಳಿತು ನೀ ನನ್ನೊಡನೆ ಬಾ, ನಾವಿಬ್ವರೂ ಒಂದಾಗೋಣ ! ಸೆಲ್ಫಿಗಳ ಭರಾಟೆಯಲಿ ಗಾಂಧರ್ವ ವಿವಾಹ ಗಮನಕ್ಕೇ ಬರದೆ ಹೋಯಿತು !
Dailyhunt
Top