480 ಗ್ರಾಂ ಕೂದಲು, ರಬ್ಬರ್ ತಿಂದಿದ್ದ ಎರಡು ವರ್ಷದ ಮಗುವಿನ ಜೀವ ಉಳಿಸಿದ ಮೆಡಿಕವರ್ ವೈದ್ಯರು.
ಮಹದೇವಪುರ ಮೇ 16: ಮೆಡಿಕವರ್ ಹಾಸ್ಪಿಟಲ್ ವೈದ್ಯರು ಅಪರೂಪದ ಹಾಗೂ ಜೀವಕ್ಕೆ ಅಪಾಯಕಾರಿಯಾದ “ರಪುಂಜಲ್ ಸಿಂಡ್ರೋಮ್” ಸಮಸ್ಯೆಯಿಂದ ಬಳಲುತ್ತಿದ್ದ ಎರಡು ವರ್ಷದ ಬಾಲಕಿಯ ಜೀವವನ್ನು ಯಶಸ್ವಿಯಾಗಿ ಉಳಿಸಿದ್ದಾರೆ.
ಮಗು ಬಾಲ್ಯದಿಂದಲೇ ಕೂದಲು, ರಬ್ಬರ್ ಬ್ಯಾಂಡ್ಗಳು ಹಾಗೂ ಬಲೂನ್ ತುಂಡುಗಳಂತಹ ಆಹಾರವಲ್ಲದ ವಸ್ತುಗಳನ್ನು ತಿನ್ನುವ ವಿಚಿತ್ರ ಅಭ್ಯಾಸ ಹೊಂದಿತ್ತು. ಪರಿಣಾಮವಾಗಿ ಹೊಟ್ಟೆಯೊಳಗೆ ದೊಡ್ಡ ಪ್ರಮಾಣದ ಕೂದಲಿನ ಗುಡ್ಡೆ ರೂಪಗೊಂಡು, ಅದು ಹೊಟ್ಟೆಯಿಂದ ಸಣ್ಣ ಆಂತ್ರದವರೆಗೆ ವಿಸ್ತರಿಸಿತ್ತು. ಕೆಲವು ದಿನಗಳಿಂದ ಮಗುವಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಹಾಗೂ ಆಹಾರ ಸೇವನೆ ಕಡಿಮೆಯಾಗಿದ್ದರಿಂದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯಕೀಯ ತಪಾಸಣೆಯಲ್ಲಿ ಹೊಟ್ಟೆಯಿಂದ ಸಣ್ಣ ಆಂತ್ರದವರೆಗೆ ಹರಡಿರುವ ದೊಡ್ಡ ಕೂದಲಿನ ಗುಡ್ಡೆ ಆಹಾರ ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುತ್ತಿರುವುದು ಪತ್ತೆಯಾಯಿತು.
ಮೊದಲಿಗೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ರೂಪೇಶ್ ಕಲ್ಯಾಣ್ ಎಂಡೋಸ್ಕೋಪಿಯ ಮೂಲಕ ಗುಡ್ಡೆಯನ್ನು ತೆಗೆಯಲು ಪ್ರಯತ್ನಿಸಿದರು. ಆದರೆ ಅದರ ಗಾತ್ರ ಮತ್ತು ವ್ಯಾಪ್ತಿ ಹೆಚ್ಚಾಗಿದ್ದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು.
ನಂತರ ಮಕ್ಕಳ ತಜ್ಞೆ ಡಾ. ಲೀನತಾ ರೆಡ್ಡಿ ನೇತೃತ್ವದ ನಾಲ್ವರು ವೈದ್ಯರ ತಂಡ ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ನಡೆಸಿ ಸುಮಾರು 25 ಸೆಂ.ಮೀ ಉದ್ದ ಮತ್ತು 480 ಗ್ರಾಂ ತೂಕದ ಕೂದಲಿನ ಗುಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದರು.
ಪ್ರಸ್ತುತ ಮಗು ಆರೋಗ್ಯವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಡಾ. ಲೀನತಾ ರೆಡ್ಡಿ, “ಚಿಕ್ಕ ಮಕ್ಕಳಲ್ಲಿ ಪಿಕಾ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಕಡೆಗಣಿಸಬಾರದು. ಆಹಾರವಲ್ಲದ ವಸ್ತುಗಳನ್ನು ತಿನ್ನುವ ಅಭ್ಯಾಸ ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ,” ಎಂದು ತಿಳಿಸಿದ್ದಾರೆ.
ವೈದ್ಯರ ಪ್ರಕಾರ ಪಿಕಾ ಸಮಸ್ಯೆ ಸಾಮಾನ್ಯವಾಗಿ ಐರನ್ ಕೊರತೆ ಹಾಗೂ ಪೋಷಕಾಂಶಗಳ ಅಭಾವದೊಂದಿಗೆ ಸಂಬಂಧ ಹೊಂದಿರಬಹುದು. ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.