Dailyhunt
ಎಲ್​ಐಸಿ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಇಲಾಖೆ

ಎಲ್​ಐಸಿ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಹಣಕಾಸು ಇಲಾಖೆ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಗಳಿಗೆ ಕೇಂದ್ರ ಹಣಕಾಸು ಇಲಾಖೆ ಸಿಹಿ ಸುದ್ದಿ ನೀಡಿದೆ. ಎಲ್​ಐಸಿ ಉದ್ಯೋಗಿಗಳಿಗೆ ಶೇ 16 ರಷ್ಟು ವೇತನ ಹೆಚ್ಚಳಕ್ಕೆ ಹಣಕಾಸು ಇಲಾಖೆಯ ಡಿಎಫ್​ಎಸ್ (Department of Financial Services) ವಿಭಾಗ ಸಮ್ಮತಿ ಸೂಚಿಸಿದೆ.

ಅಲ್ಲದೇ ಎಲ್​ಐಸಿ ಉದ್ಯೋಗಿಗಳಿಗೆ ಇನ್ಮುಂದೆ ವಾರದಲ್ಲಿ ಐದೇ ದಿನ ಕೆಲಸ ಮಾಡಲು ಸಮ್ಮತಿಸಿದೆ. ವಾರದಲ್ಲಿ ಐದು ದಿನ ಕೆಲಸ ಮಾತ್ರ ಎಂಬ ಬೇಡಿಕೆಯನ್ನು ಕಳೆದ ಐದು ವರ್ಷದಿಂದ ಎಲ್​ಐಸಿ ನೌಕರರ ಒಕ್ಕೂಟ ಮಂಡಿಸುತ್ತಾ ಬಂದಿತ್ತು.

ಎಲ್​ಐಸಿ ಷೇರು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ವೇತನ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಮಾತ್ರ ಎಲ್​​ಐಸಿಯಲ್ಲಿ ವೇತನ ಹೆಚ್ಚಳ ಆಗುತ್ತಿತ್ತು. ವೇತನ ಹೆಚ್ಚಳ ಹಾಗೂ ವಾರದಲ್ಲಿ ಐದು ದಿನ ಕೆಲಸದ ಆದೇಶವನ್ನು ಆದಷ್ಟು ಶೀಘ್ರ ಜಾರಿಗೊಳಿಸಬೇಕು ಎಂದು ನೌಕರರ ಕೂಟ ಆಗ್ರಹಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Vijayvani