Dailyhunt
ಮಂಡ್ಯದಲ್ಲೂ ನೈತಿಕ ಪೊಲೀಸ್ ಗಿರಿ!? ಬೈಕ್​ ಅಡ್ಡಗಟ್ಟಿ ಯುವಕ-ಯುವತಿಯನ್ನು ಕೆಳಗಿಳಿಸಿ ವಾಗ್ವಾದ

ಮಂಡ್ಯದಲ್ಲೂ ನೈತಿಕ ಪೊಲೀಸ್ ಗಿರಿ!? ಬೈಕ್​ ಅಡ್ಡಗಟ್ಟಿ ಯುವಕ-ಯುವತಿಯನ್ನು ಕೆಳಗಿಳಿಸಿ ವಾಗ್ವಾದ

ಮಂಡ್ಯ: ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದ ನೈತಿಕ ಪೊಲೀಸ್​ ಗಿರಿ ಇದೀಗ ಸಕ್ಕರೆನಾಡು ಮಂಡ್ಯದಲ್ಲೂ ಕೇಳಿಬಂದಿದೆ. 4 ದಿನಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲೂ ನೈತಿಕ ಪೊಲೀಸ್​ ಗಿರಿ ನಡೆದಿದೆ ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅನ್ಯಕೋಮಿನ ಹುಡುಗ-ಹುಡುಗಿ ತೆರಳುತ್ತಿದ್ದ ಬೈಕ್​ ಅನ್ನು ತಡೆದು ನಿಲ್ಲಿಸಿ, ಇಬ್ಬರನ್ನು ಕೆಳಗಿಳಿಸಿ ನೈತಿಕ ಪೊಲೀಸ್ ಗಿರಿ ಮಾಡಲಾಗಿದೆ. ಸಂಘಟನೆಯೊಂದರ ಕಾರ್ಯಕರ್ತರಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಮಂಡ್ಯ ತಾಲೂಕಿನ ಸುಂಡಹಳ್ಳಿ ಬಳಿ 4 ದಿನದ ಹಿಂದೆ ಘಟನೆ ನಡೆದಿದೆ. ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆಗೂ ಯತ್ನ ನಡೆದಿದೆ.

ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಅನ್ಯಕೋಮಿನ ಯುವಕನ‌ ಜತೆ ಯುವತಿ ಹೋಗುತ್ತಿದ್ದಳು. ಇದನ್ನು ನೋಡಿದ ಕಾರ್ಯಕರ್ತರು ಶ್ರೀರಂಗಪಟ್ಟಣದಿಂದಲೂ ಬೈಕ್​ ಹಿಂಬಾಲಿಸಿಕೊಂಡು ಬಂದು ಬೈಕ್​ ಅಡ್ಡಗಟ್ಟಿದ್ದಾರೆ. ಕೆಲ ಕಾಲ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಯುವತಿಯನ್ನು ಕಾರ್ಯಕರ್ತರು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಯುವಕನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Dailyhunt
Disclaimer: This content has not been generated, created or edited by Dailyhunt. Publisher: Vijayvani