Saturday, 30 Jun, 9.00 am ಬಾಲ್ಕನಿ ನ್ಯೂಸ್

ಸುದ್ದಿಗಳು
ಪದಕ್ಕೆ ಜೀವ ತುಂಬಿ ಹಾಡುಗಳನ್ನು ಬರೆಯುವವರೆ 'ಜಯಂತ್ ಕಾಯ್ಕಿಣಿ'!

ಕುಣಿದು ಕುಣಿದು ಬಾರೆ.ಒಲಿದು ಒಲಿದು ಬಾರೆ. ಕುಣಿವ ನಿನ್ನ ಮೇಲೆ ಮಳೆಯ ಹನಿಯ ಮಾಲೆ ..ವಾವ್ ಕೇಳೊಕೆ‌ ಎಷ್ಟು ಇಂಪಾಗಿದೆ ಅಲ್ವಾ.. ಈ ಹಾಡನ್ನ ಕೇಳ್ತಾಯಿದ್ರೆ ಯಾರೆ ಆದ್ರೂ ಮೈ ಮರೆಯೊದು ಎಂತು ಪಕ್ಕಾ...ಯಾಕಂದ್ರೆ‌ ಈ ಹಾಡನ್ನ ಅಷ್ಟು ಸೋಗಸಾಗಿ ಬರೆಯಲಾಗಿದೆ .‌ಅಷ್ಟಕ್ಕೂ ಇಷ್ಟು ಸೊಗಸಾಗಿ ಹಾಡನ್ನು ಬರೆಯೊರು ಅಂದ್ರೆ ಯಾರು ಇರಬಹುದು ಹೇಳಿ ... ಅಯ್ಯೋ ಅಷ್ಟು ಗೊತ್ತಾಗಲಿಲ್ಲಾವ ಇಷ್ಟು ಸುಂದರವಾಗಿ ಪದಗಳನ್ನು ಜೋಡಿಸಿ ಪದಕ್ಕೆ‌ ಜೀವ ತುಂಬಿ ಹಾಡುಗಾಳನ್ನು ಬರೆಯುವವರೆ ಜಯಂತ್ ಕಾಯ್ಕಿಣಿ..

ಎಸ್ ಇದುವರೆಗೂ ಇವ್ರು ಬರೆದಿರೊ ಹಾಡುಗಳು ಸಾಕಷ್ಟು ಹಿಟ್ ಆಗಿದ್ದು ಜನ್ರ ಮನಸ್ಸಲ್ಲಿ ಅಚ್ಚಾಗಿ ಉಳಿದೆದೆ ಇದಕ್ಕೆ‌ಮುಖ್ಯ ಉದಾಹರಣೆ ಆಂದ್ರೆ‌ ಮುಂಗಾರು ಮಳೆ ಚಿತ್ರದ ಹಾಡುಗಳು ..ಈ ಚಿತ್ರ ತೆರೆ ಕಂಡು ಸಾಕಷ್ಟು‌ ವರ್ಷ ಕಳೆದರು ಜನ್ರು ಮಾತ್ರ‌ ಈ ಚಿತ್ರದ ಹಾಡುಗಳನ್ನು ಇನ್ನು ಕೂಡ ಮರೆತಿಲ್ಲಾ.. ಅಷ್ಟರ ಮಟ್ಟಿಗೆ ಜಯಂತ್ ಕಾಯ್ಕಿಣಿ ರವರ ಗೀತಾರಚನೆ‌ ಜನ್ರನ್ನ‌ ಹುಚ್ಚೆಬ್ಬಿಸಿದೆ ಅಂದ್ರೆ ತಪ್ಪಾಗಲಾದ್ರು...

ಜಯಂತ್ ಕಾಯ್ಕಿಣಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕಣ್ರದವರು..ಇವ್ರು ಜನವರಿ೨೪-೧೯೫೫ ರಲ್ಲಿ ಜನಿಸಿದ್ರು.ತಂದೆ‌ ಗೌರೀಶ್ ಕಾಯ್ಕಿಣಿ, ತಾಯಿ ಶಾಂತಾಕಾಯ್ಕಿಣಿ.. ಇವರ ತಂದೆ ಕೂಡ ಹೆಸರಾಂತ ಸಾಹಿತಿ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು..ತಾಯಿ ಕೂಡ ಶಿಕ್ಷಕಿಯಾಗಿದ್ದು ಸಮಾಜ ಸೇವೆ ಮಾಡುವುದರಲ್ಲಿ ಸದಾ ಮುಂದೆ ಇದ್ದರು..ಕಾಯ್ಕಿಣಿ ತಮ್ಮ ವಿದ್ಯಾಭ್ಯಾಸವನ್ನೆಲ್ಲಾ ತನ್ನ ಊರಿನಲ್ಲೆ ಮುಗಿಸಿ ಉನ್ನತ ಶಿಕ್ಷಣಕ್ಕೇಂದು ಧಾರವಾಡಕ್ಕೆ ಬಂದ್ರು.ಜಯಂತ್ ಕಾಯ್ಕಿಣಿ ಎಂ.ಎಸ್ಸಿ ಪದವಿಯ ನಂತರ ಮುಂಬಯಿಯಲ್ಲಿ ಫಾರ್ಮ್ ಪ್ರೋಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬಿಡುವಿನ‌ ಸಂದರ್ಭಗಳಲ್ಲಿ ಕನ್ನಡ ಸಾಹಿತ್ಯ ಸವಿಯನ್ನು ಮುಂದುವರೆಸುತ್ತಿದ್ದರು..

೧೯೮೨ ರಲ್ಲಿ ಕೋಟಿತೀಥ್ ಎಂಬಾ ಕವನ ಸಂಕಲನ, ೧೯೮೭ರಲ್ಲಿ ಶ್ರಾವಣ ಮಧ್ಯಾಹ್ನ,೧೯೮೯ ರಲ್ಲಿ ದಗ್ಡೂ ಪರಬನ ಅಶ್ವಮೇಧ ,೧೯೯೭ ರಲ್ಲಿ ನೀಲಿಮಳೆ ಎಂಬಾ ಹಲವಾರು ಕವನ ಸಂಕಲನಗಳನ್ನು ಕೂಡ ಜಯಂತ್ ಕಾಯ್ಕಿಣಿ ಪ್ರಕಟಿಸಿದ್ದಾರೆ.

೧೯೯೭ ರಿಂದ ೧೯೯೯ ರವರೆಗೆ ಈ ಟಿವಿ ಕನ್ನಡ ವಾಹಿನಿಯಲ್ಲಿ ಕಾರ್ಯ ಕ್ರಮ ಸಮಿತಿ ಸದಸ್ಯರಾಗಿ ,ರಾಮೋಜಿ ಫಿಲ್ಮ್ ಸಿಟಿ ಹೈದ್ರಾಬಾದ್ ನಲ್ಲಿ ತಮ್ಮ‌ ವೃತ್ತಿಯನ್ನು ಮುಂದುವರೆಸಿದರು.

ಕೆಲ ವರ್ಷಗಳ ನಂತರ ಕುಟುಂಬ ಸಮೇತರಾಗಿ ಬೆಂಗಳೂರಿಗೆ ಬಂದು ವಿಜಯಕರ್ನಾಟಕ ಪಬ್ಲಿಕೇಷನ್ ರವರು ನಡೆಸುತ್ತಿದ್ದ "ಭಾವನಾ ಎಂಬಾ ಕಲೆ ಸಾಹಿತ್ಯಕ್ಕೆ ಸಂಬಂದಿಸಿದ ಮಾಸಪತ್ರಿಕೆಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.

ನಂತರ‌ ೧೯೮೪ ನವೆಂಬರ್ ೧೨ ರಂದು ಸ್ಮಿತಾ ಎಂಬುವವರ ಜೊತೆ ವಿವಾಹವಾದರು. ಸ್ಮಿತ ರವರು ಬಹಳ ಸೌಮ್ಯ ಸ್ವಭಾವವುಳ್ಳವರು ಒಟ್ಟಿನಲ್ಲಿ ಹೇಳುವುದಾದರೆ ಸಹೃದಯಿ ಶ್ರೀಜಯಂತರವರಿಗೆ ಅನುರೂಪಾಳದ ಪತ್ನಿ ಅವರಿಗೆ ಸೃಜನ, ಎಂಬಾ ಮಗಳು ಋತ್ವಿಕ್ ಎಂಬಾ ಇಬ್ಬರು ಮಕ್ಕಳು ಇದ್ದಾರೆ. ೨೦೦೨ ರಿಂದ‌೨೦೦೨ ರ ತನಕ ಈಟಿವಿ ಕನ್ನಡ ವಾಹಿನಿಯಲ್ಲಿ ದಿನನಿತ್ಯ ಬೆಳಗ್ಗಿನ ಹೊತ್ತು ಪ್ರಸಾರವಾಗುತ್ತಿದ್ದ " ನಮಸ್ಕಾರ" ಎಂಬ ಕಾರ್ಯಕ್ರಮ ವನ್ನು ತಪ್ಪದೆ ವೀಕ್ಷಿಸುತ್ತಿದ್ದ ಕಾಯ್ಕಿಣಿ ಅವರ ಅಭಿಮಾನಿಗಳಿಗೆ ನೂರು ಪ್ರತಿಶತ ಖಂಡಿತವಾಗಿಯೂ ಅರ್ಥವಾದೀತು.ಈ ಕಾರ್ಯಕ್ರಮ ದಿಂದ‌ ಬಹಳಷ್ಟು ಅಭಿಮಾನಿಗಳನ್ನು ಕಾಯ್ಕಿಣಿ ಗಳಿಸಿದರು.

೨೦೦೫-೨೦೦೬ರವರೆಗೆ ಝೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ದ ಮುಖ್ಯಸ್ಥರಾಗಿ ತಮ್ಮ ವೃತ್ತಿಯನ್ನು ಮುಂದುವರೆಸಿದರು ..೨೦೦೪ ರಲ್ಲಿ ಎಡಕಲ್ಲು ಗುಡ್ಡದ ಮೇಲೆ ಎಂಬ ಪುಟ್ಟಣ್ಣನವರ ಪ್ರಖ್ಯಾತ ಕನ್ನಡ ಚಲನ‌ಚಿತ್ರದ‌ ನಟ "ಚಂದ್ರಶೇಖರ ರವರ ನಿರ್ದೇಶಿಸಿದ‌ ಪೊರ್ವಾಪರ ಎಂಬ ಕನ್ನಡ ಭಾಷೆಯ ಚಿತ್ರ ತೆರೆ‌ಕಂಡು ಸ್ವಲ್ಪ‌ ಮಟ್ಟಿಗೆ ಯಶಸ್ಸು ಕಂಡಿತು.ಈಚಿತ್ರಕ್ಕೆ ಮೊದಲ ಬಾರಿಗೆ ಕಾಯ್ಕಿಣಿ ಯವರು ಹಾಡಿನ‌ ಸಾಹಿತ್ಯ ಮತ್ತು ಸಂಭಾಷಣೆ ಯನ್ನು ಬರೆದಿದ್ದರು.

೨೦೦೪ ರಲ್ಲಿಆಕಾಶ ಬುಟ್ಟಿ ಎಂಬ ನಾಟಕ ಕೃತಿ ಪ್ರಕಟವಾಯಿತು.ಇದಕ್ಕಿಂತ ಮೊದಲು ಕಾಯ್ಕಿಣಿ ಹೆಸರಾಂತ ನಿರ್ದೇಶಕರಾದ ಗೀರಿಶ್ ಕಾಸರವಳ್ಳಿಯವರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಮೂರು ದಾರಿಗಳು ಎಂಬ ಸಿನಿಮಾದಲ್ಲಿ ಕೆಲಸ ಮಾಡಿದರು. ೧೯೯೦ ರಲ್ಲಿ ಬೆಟ್ಟದ ಜೀವ ಎಂಬ ಶಿವರಾಂ‌ ಕಾರಂತರ ಕಾದಂಬರಿ ಆಧಾರಿತ ಸಿನಿಮಾ‌ದಲ್ಲಿ ಕೆಲಸ ಮಾಡಿದರು ಕಾರಣಾಂತರಗಳಿಂದ ಈ ಚಿತ್ರ‌ ಅರ್ಧದಲ್ಲೆ ನಿಂತು ಹೋಯಿತು.ಇದಾದ ನಂತರ ೨೦೦೪ ರಲ್ಲಿ ಚಿಗುರಿದ ಕನಸು ಚಿತ್ರಕ್ಕೆ ಚಿತ್ರಕಥೆ,ಹಾಡು,ಸಂಭಾಷಣೆ, ಸಾಹಿತ್ಯವನ್ನು ಕಾಯ್ಕಿಣಿ ಯವರೆ ಬರೆದಿದ್ದು ಈ ಚಿತ್ರ ೨೦೦೪ ರಲ್ಲಿ ಪ್ರದರ್ಶನ ವಾಯಿತು.. ಈ ಚಿತ್ರಕ್ಕೆ ಕಾಯ್ಕಿಣಿಯವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು.

೨೦೦೪ ರಲ್ಲಿ ಕಾಯ್ಕಿಣಿಯವರಿಗೆ ಅದೃಷ್ಡದ‌ ಬಾಗಿಲು ತೆರೆದ ವರ್ಷ ಅಂದ್ರೆ ತಪ್ಪಾಗಲಾದ್ರು. ಯಾಕಾಂದ್ರೆ ೨೦೦೪ ರಲ್ಲಿ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ‌ ಬಂದಂತಹ‌ ಚಿತ್ರಕ್ಕೆ‌ ಹಾಡು,ಸಾಹಿತ್ಯ ಬರೆಯುವ‌ ಅದೃಷ್ಟ ಕಾಯ್ಕಿಣಿ ಅವರಿಗೆ ಒಲಿದು‌ ಬಂದಿತ್ತು.‌..ಇಷ್ಟು ದಿನ‌ ಎಲ್ಲರಿಗೂ ಚಿರಪರಿಚಿತರಾಗಿದ್ದ ಕಾಯ್ಕಿಣಿ ಈ ಚಿತ್ರದ ಹಾಡುಗಳಿಂದ‌ ಕಾಯ್ಕಿಣಿ ಯವರ ಹೆಸ್ರು ಕೇಳಿದರೆ ಅಬಾಲವೃದ್ಧರೆಲ್ಲರೂ ಮೊದಲು ನೆನಪಿಸಿ ಕೊಳ್ಳುವುದೆ ಜನಮನಗಳ ಮನದಲ್ಲಿ ಅಭಿಮಾನದ ಹೊಳೆಯನ್ನು ಹರಿಸಿದ ನಿರ್ದೇಶಕ ಯೋಗರಾಜ್ ಭಟ್ ರವರ ಸಿನಿಮಾ ಮುಂಗಾರು ಮಳೆ ಚಿತ್ರದ ಹಾಡುಗಳ ಸಾಹಿತ್ಯವನ್ನಾ.ವರ್ಷ ಕಳೆದರು ಆ ಚಿತ್ರದ ಹಾಡುಗಳು ಮಾತ್ರ‌ ಜನ್ರ‌ ಮನಸ್ಸಿನಲ್ಲಿ ಅಚ್ಚಾಗಿ ಇನ್ನೂ ಉಳಿದಿವೆ.

ಅನಿಸುತ್ತಿದೆ‌ ಯಾಕೊ‌ ಇಂದು ಎಂಬ ‌ಹಾಡು ಚಿತ್ರ ರಸಿಕರ ಮನಕ್ಕೆ ಈಗಲೂ ಕೂಡ ಹಾಕಿದೆ ..ಈ ಚಿತ್ರದಿಂದ ಕಾಯ್ಕಿಣಿಯವರಿಗೆ ಇನ್ನೂ ಹೆಚ್ಚಿನ‌ ಚಿತ್ರಗಾಳಿಗೆ ಸಾಹಿತ್ಯ ಬರೆಯುವ ಅವಕಾಶಗಳು ಕೂಡ ಒದಗಿಬಂದವು.. ಮುಂಗಾರು ಮಳೆ ಚಿತ್ರದ‌ ಅನಿಸುತ್ತಿದೆ ಯಾಕೊ ಇಂದು ಎಂಬ ಗೀತೆಗೆ ಉತ್ತಮ‌ ಸಾಹಿತ್ಯ ಎಂದು ೨೦೦೬ರಲ್ಲಿ ಕರ್ನಾಟಕ ರಾಜ್ಯಪ್ರಶಸ್ತಿಯು ದೊರಕಿತು. ಇದೆ ಹಾಡಿಗೆ ಪುನಃ ಈ ಟಿವಿ ವಾಹಿನಿಯಲ್ಲಿ ಉತ್ತಮ ಸಿನಿಮಾ ಸಾಹಿತಿ ಪ್ರಶಸ್ತಿಯು ದೊರೆಯಿತು . ಈ ಚಿತ್ರದ ನಂತರ ಸಾಕಷ್ಟು ಚಿತ್ರ ಗಳಿಗೆ ಸಾಹಿತ್ಯ ಬರೆಯೊದ್ರಲ್ಲಿ ಬ್ಯುಸಿಯಾಗಿರುವ ಕಾಯ್ಕಿಣಿ ಅವರು ಇನ್ನೂ ಉತ್ತಮವಾದಂತಹ ಚಿತ್ರಗಳಿಗೆ‌ ಸಾಹಿತ್ಯ ಸಂಭಾಷಣೆ, ಹಾಡು ಬರೆದು ಇನ್ನೂ ಸಾಕಷ್ಟು ಪ್ರಶಸ್ತಿಗಳನ್ನು‌ ತಮ್ನದಾಗಿಸಿಕೊಳ್ಳಬೇಕು ಎಂಬುದು ನಮ್ಮೇಲ್ಲರ ಆಶಯ...

ಇನ್ನೂ ಕಾಯ್ಕಿಣಿ ಅವರಿಗೆ ಅಣ್ಣಾಬಾಂಡ್ ಚಿತ್ರದ ಏನೆಂದು ಹೆಸರಿಡಲಿ ಹಾಡಿಗೆ ಹಾಗೂ ಗಾಳಿಪಟ ಚಿತ್ರದ ಮಿಂಚಾಗಿ ನೀನು ಬರಲು ಹಾಡಿಗೆ ಫಿಲ್ಮ್ ಫೇರ್ ಪ್ರಶಸ್ತಿ ಗಳನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Balkani News
Top