Friday, 01 Feb, 7.37 am ಕನ್ನಡದುನಿಯಾ

ವಾಣಿಜ್ಯ
ಗುಡ್ ನ್ಯೂಸ್: ಎಂದಿನಂತೆ ಲಭ್ಯವಾಗುತ್ತಿದೆ ಡಿಟಿಎಚ್-ಕೇಬಲ್

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ, ಇಂದಿನಿಂದ ಹೊಸ ಕೇಬಲ್ ನೀತಿಯನ್ನು ಜಾರಿಗೊಳಿಸಿದ್ದು, ಗ್ರಾಹಕರು ತಾವು ಬಯಸುವ ಚಾನೆಲ್ ಗಳಿಗಷ್ಟೇ ಇನ್ನು ಮುಂದೆ ಹಣ ಪಾವತಿಸಬೇಕಾಗಿದೆ.

ಈ ಮೊದಲು ಇದನ್ನು ಜಾರಿಗೊಳಿಸಲು 2018 ರ ಡಿಸೆಂಬರ್ 31 ಅಂತಿಮ ದಿನವೆಂದು ಹೇಳಲಾಗಿತ್ತಾದರೂ ಆ ಬಳಿಕ ಟ್ರಾಯ್ 2019 ರ ಜನವರಿ 31ರ ವರೆಗೆ ಕಾಲಾವಕಾಶ ನೀಡಿತ್ತು.

ಈ ಅವಧಿ ಮುಗಿದ ನಂತರ ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲವೆಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಸ್ಪಷ್ಟಪಡಿಸಿದ್ದರ ಹಿನ್ನೆಲೆಯಲ್ಲಿ ಹೊಸ ಕೇಬಲ್ ನೀತಿಗೆ ಬದಲಾವಣೆಯಾಗದ ಗ್ರಾಹಕರಿಗೆ ಇಂದಿನಿಂದ ಉಚಿತ ಚಾನೆಲ್ ಗಳನ್ನು ಹೊರತುಪಡಿಸಿ ಇತರೆ ಚಾನೆಲ್ ಗಳು ಲಭ್ಯವಾಗುವುದಿಲ್ಲವೆಂದು ಭಾವಿಸಲಾಗಿತ್ತು.

ಚಾನೆಲ್ ಆಯ್ಕೆ ಕುರಿತಂತೆ ಗ್ರಾಹಕರಲ್ಲಿ ಇನ್ನೂ ಗೊಂದಲ ಮುಂದುವರೆದಿರುವ ಕಾರಣ ಈವರೆಗೆ ಶೇಕಡಾ 70ರಷ್ಟು ಮಂದಿ ಮಾತ್ರ ನೂತನ ವ್ಯವಸ್ಥೆಗೆ ಬದಲಾಗಿದ್ದಾರೆಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಹೊಸ ವ್ಯವಸ್ಥೆಗೆ ಬದಲಾಗುವವರೆಗೂ ಇನ್ನೂ ಕೆಲ ದಿನಗಳ ಕಾಲ ಚಾನೆಲ್ ಗಳ ಸೇವೆಯನ್ನು ಮುಂದುವರೆಸುವ ನಿರೀಕ್ಷೆಯಿದೆ.

Dailyhunt
Top