Friday, 21 Dec, 7.43 am ಕನ್ನಡದುನಿಯಾ

ಹೋಮ್
'ಜಾವಾ' ಬೈಕ್ ಪ್ರಿಯ ಬೆಂಗಳೂರಿಗರಿಗೆ ಖುಷಿ ಸುದ್ದಿ

ರಾಯಲ್ ಎನ್‌ ಫೀಲ್ಡ್‌ಗೆ ಸರಿಸಾಟಿಯಾಗಿ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಜಾವಾ, ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಮೂರು ಡೀಲರ್‌ಶಿಪ್ ಗಳನ್ನು ಆರಂಭಿಸಿದೆ.

ದೇಶದಲ್ಲಿ ನೂರಕ್ಕೂ ಹೆಚ್ಚು ಶೋರೂಂಗಳನ್ನು ಆರಂಭಿಸಲು‌ ಉದ್ದೇಶಿಸಿರುವ ಜಾವಾ ಸಂಸ್ಥೆ, ಪುಣೆಯಲ್ಲಿ ಎರಡು ಡೀಲರ್‌ಶಿಪ್ ಆರಂಭಿಸಿತ್ತು. ಇದೀಗ ಬೆಂಗಳೂರಿನ ಬಸವನಗುಡಿ, ಕೋರಮಂಗಲ ಹಾಗೂ ರಾಜಾಜಿನಗರದಲ್ಲಿ ಆರಂಭಿಸುವ ಮೂಲಕ‌ ಒಟ್ಟು ಐದು ಡೀಲರ್‌ಶಿಪ್‌ಗಳನ್ನು ಆರಂಭಿಸಿದ್ದು, ಮುಂದಿನ 22ಕ್ಕೆ ದೆಹಲಿಯಲ್ಲಿ ಆರಂಭಿಸುವುದಾಗಿ ಹೇಳಿದೆ.

ಹಂತಹಂತವಾಗಿ ಡೀಲರ್‌ಗಳನ್ನು ವಿಸ್ತರಿಸಲು ನಿರ್ಧರಿಸಿರುವ ಸಂಸ್ಥೆ, ಈ ಶೋರೂಂಗಳಲ್ಲಿ ಟೆಸ್ಟ್ ಡ್ರೈವ್‌ ಗೆ ಅವಕಾಶ ನೀಡಿದ್ದು, ಐದು ಸಾವಿರ ಠೇವಣಿ ಮೂಲಕ ಆನ್‌ಲೈನ್ ಅಥವಾ ಡೀಲರ್ ಬಳಿ ಬುಕ್ ಬೈಕ್ ಮಾಡಬಹುದು.

ಈ ಬಗ್ಗೆ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಯ ಸಿಇಒ ಆಶೀಶ್ ಜೋಶಿ ಮಾತನಾಡಿದ್ದು, ಬೆಂಗಳೂರಲ್ಲಿ‌ ಜಾವಾ ಸಂಸ್ಥೆಗೆ ತನ್ನದೇಯಾದ ಬೇಡಿಕೆಯಿದ್ದು, ಅದಕ್ಕಾಗಿಯೇ ಮೂರು ಶೋರೂಂ ಆರಂಭಿಸಲಾಗಿದೆ. ಇದರೊಂದಿಗೆ ಮೈಸೂರು‌ ಹಾಗೂ ಜಾವಾ ಬೈಕ್‌ ಗಳಿಗೆ ಬಹು ಕಾಲದ ಒಡನಾಟವಿದೆ ಎಂದಿದ್ದಾರೆ.

Dailyhunt
Top