Wednesday, 30 Jan, 7.30 am ಕನ್ನಡದುನಿಯಾ

ಹೋಮ್
ಕೇಬಲ್ - ಡಿಟಿಹೆಚ್ ಗ್ರಾಹಕರಿಗೆ ಇಲ್ಲಿದೆ 'ಮಹತ್ವ'ದ ಮಾಹಿತಿ

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಕೇಬಲ್ ಟಿವಿಗೆ ಹೊಸ ದರ ವ್ಯವಸ್ಥೆ ಜಾರಿಗೊಳಿಸಿದೆ. ನೂತನ ದರದ ನಿಯಮ ಫೆಬ್ರವರಿ 1 ರಿಂದ ಜಾರಿಗೆ ಬರಲಿದ್ದು, ಹೊಸ ದರ ನಿಯಂತ್ರಣ ವ್ಯವಸ್ಥೆಗೆ ವರ್ಗಾವಣೆಗೊಳ್ಳುವ ಹಾಲಿ ಗ್ರಾಹಕರಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಟ್ರಾಯ್ ಹೇಳಿದೆ.

ಈಗಾಗಲೇ ಸೆಟ್ ಟಾಪ್ ಬಾಕ್ಸ್ ನೊಂದಿಗೆ ಕೇಬಲ್ ಸೇವೆ ಪಡೆಯುತ್ತಿರುವ ಗ್ರಾಹಕರು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಹೊಸದಾಗಿ ಸಂಪರ್ಕ ಪಡೆಯುವ ಗ್ರಾಹಕರು 450 ರೂ. ಶುಲ್ಕ ಪಾವತಿಸಬೇಕಿದೆ ಎಂದು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.

ಚಾನೆಲ್ ಗಳ ನೂತನ ದರ ಪಟ್ಟಿಯನ್ನು ಟ್ರಾಯ್ ಈಗಾಗಲೇ ಪ್ರಕಟಿಸಿದ್ದು, ವೆಬ್ ಸೈಟ್ ಅಥವಾ ಆಪ್ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಡಿಟಿಹೆಚ್ ಸೇವಾ ಕಂಪನಿಗಳೂ ಸಹ ಈ ಕುರಿತು ಗ್ರಾಹಕರಿಗೆ ವಿವರ ನೀಡಿವೆ. ಫೆಬ್ರವರಿ 1 ರೊಳಗೆ ನೂತನ ದರ ವ್ಯವಸ್ಥೆಗೆ ಬದಲಾಗದಿದ್ದಲ್ಲಿ ಉಚಿತ ಚಾನೆಲ್ ಗಳನ್ನು ಹೊರತುಪಡಿಸಿ ಉಳಿದ ಚಾನೆಲ್ ಗಳ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

Dailyhunt
Top