'ನಟನೆಯ ಗೀಳಿನಿಂದ ಕಂಠದಾನಕ್ಕೆ ಬಂದೆ'

Monday, 23 Apr, 3.17 am

ನಟನೆಯ ಗೀಳಿನಿಂದ ಕಿರುತೆರೆಗೆ ಕಾಲಿಟ್ಟ ಕಲಾವಿದೆ ಶಿಲ್ಪಾ ಭಾಗವತರ್‌ಗೆ ಆಕಸ್ಮಿಕವಾಗಿ ಕಂಠದಾನ ಕಲಾವಿದೆಯಾಗುವ ಅವಕಾಶ ದೊರಕಿತು. ನಟನೆ, ಕಂಠದಾನದಲ್ಲಿ ಸಿಕ್ಕಿದ ಮೊದಲ ಅವಕಾಶದಲ್ಲಿಯೇ ಪ್ರತಿಭೆ ಪ್ರದರ್ಶಿಸಿ ಸೈ ಎನಿಸಿಕೊಂಡವರು. ಸಣ್ಣ ಅವಕಾಶಗಳನ್ನೇ ಸಮರ್ಥವಾಗಿ ಬಳಸಿಕೊಂಡಿದ್ದರಿಂದ ಈಗ ಅವರು ಉತ್ತಮ ನಟಿ, ಡಬ್ಬಿಂಗ್‌ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ.

ಶಿಲ್ಪಾ ಭಾವಗವತರ್‌ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಬಿ.ಎ ಸೈಕಾಲಜಿ ಓದುತ್ತಿದ್ದಾಗ ನಾಟಕಗಳಲ್ಲಿ ಅಭಿನಯಿಸುವ ಗೀಳು ಹತ್ತಿಸಿಕೊಂಡಿದ್ದರು. ಅಂತರಕಾಲೇಜು ನಾಟಕ ಸ್ಪರ್ಧೆಗಳಲ್ಲಿ ಶಿಲ್ಪಾ ಅವರ ತಂಡ ಇರಲೇಬೇಕಿತ್ತು. ನಟನೆಯ ಮೇಲಿನ ಇವರ ಆಸಕ್ತಿ ಕಂಡು ಶಿಕ್ಷಕಿ ದಾಕ್ಷಾಯಣಿ ಅವರು ಕಿರುತೆರೆ, ಹಿರಿತೆರೆಯಲ್ಲಿ ನಟಿಸುವಂತೆ ತಿಳಿಸಿದರು.