Saturday, 24 Nov, 12.19 pm Uk Suddi

ಹೋಂ
100% ಉಚಿತ ಜಿಎಸ್‍ಟಿ ಸಾಫ್ಟ್‌ವೇರ್ ಬೇಕಾ..? ಹಾಗಾದ್ರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೆಂಗಳೂರು: ಎಸಿ ಟಚ್ ಭಾರತದ ಪ್ರಮುಖ ಕ್ಲೌಡ್ ಇ ಆರ್ ಪಿ (ಎಂಟರ್ ಪ್ರೈಸ್ ರಿಸೋರ್ಸ್ ಪ್ಲಾನಿಂಗ್) ಕಂಪನಿಗಳಲ್ಲಿ ಒಂದು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗಾಗಿ ಸಂಪೂರ್ಣ ಉಚಿತವಾದ ಕ್ಲೌಡ್ ಆಧಾರಿತ ಜಿಎಸ್‍ಟಿ ಸಾಫ್ಟ್‌ವೇರ್ ಅನ್ನು ಪರಿಚಯಿಸಿದೆ. ಗ್ರಾಹಕರು www.actouch.com ನಲ್ಲಿ ನೋಂದಣಿ ಮಾಡಿ ಜಿಎಸ್‍ಟಿ ವರದಿ ಸಿದ್ದಪಡಿಸಬಹುದಾಗಿದೆ.

ಬೆಂಗಳೂರಿನಲ್ಲಿ ನೆಲೆಯೂರಿರುವ ಎಸಿ ಟಚ್ ಸಂಸ್ಥೆಯನ್ನು ನಿತ್ಯಾನಂದ ರಾವ್ ಹಾಗೂ ಸುನಿಶ್ ಅಂಕೋಲೆಕರ್ ಜತೆಗೂಡಿ ಸ್ಥಾಪಿಸಿದ್ದಾರೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಸಣ್ಣ ವ್ಯಾಪಾರದ ಮಾಲೀಕರು ಹಾಗೂ ಸ್ವ ಉದ್ಯೋಗ ಮಾಡುವ ಸಲಹೆಗಾರರು, ಉಪಗುತ್ತಿಗೆದಾರರು, ಜಾಬ್ ವರ್ಕ್, ಪ್ರೀಲಾನ್ಸ್‍ರ್, ಬುಕ್ ಕೀಪರ್‍ಗಳು, ಸಣ್ಣ ಉದ್ದಿಮೆದಾರರು ಹಾಗೂ ಉತ್ಪಾದಕರಿಗೆ ಉಚಿತ ಜಿಎಸ್‍ಟಿ ಸಾಫ್ಟ್‍ವೇರ್ ಹೆಚ್ಚು ನೆರವಾಗಲಿದೆ.

ಸುಲಭವಾಗಿ ಉಪಯೋಗಿಸಬಹುದಾದ ಈ ಸಾಫ್ಟ್‌ವೇರ್ ನಿಂದ ಇನ್ವಾಯಿಸಿಂಗ್ ಬಿಲ್ಲಿಂಗ್, ಪೇಮೆಂಟ್ ಹಾಗೂ ರೆಸಿಪ್ಟ್ ಟ್ರಾಕಿಂಗ್‍ನ್ನು ಐದು ನಿಮಿಷದೊಳಗೆ ದೋಷ ಮುಕ್ತವಾಗಿ ಜಿಎಸ್‍ಟಿ ವರದಿಯನ್ನು ಉಚಿತವಾಗಿ ಪಡೆಯಬಹುದು. ಗ್ರಾಹಕರು ತಮ್ಮ ವ್ಯಾಪಾರದತ್ತ ನಿಶ್ಚಿಂತೆಯಿಂದ ಗಮನ ಹರಿಸಲು ಡಾಟಾ ಬ್ಯಾಕ-ಅಪ್ ಹಾಗೂ ಬ್ಯಾಂಕ್ ಲೆವೆಲ್ ಡಾಟಾ ಸುರಕ್ಷತೆಯ ಹೊಣಗಾರಿಕೆ ಎಸಿ ಟಚ್ ತೆಗೆದುಕೊಂಡಿದೆ.

Dailyhunt
Top