Tuesday, 14 Jan, 11.51 am Promoted

Promoted
4 ಜನ ವಧುಗಳು ತಮ್ಮ #MyFirstEvara ಕ್ಷಣವನ್ನು ಹಂಚಿಕೊಂಡಿದ್ದಾರೆ

ತನ್ನ ಮದುವೆಯಲ್ಲಿ ಏನನ್ನು ಹೊಂದಿರಬೇಕೆಂದು ವ್ಯಾಖ್ಯಾನಿಸಲು ಮತ್ತು ತಿಳಿದುಕೊಳ್ಳಲು ಮದುವೆಯ ಹೆಣ್ಣು ಇಂದಿನ ದಿನಗಳಲ್ಲಿ ಬಹಳ ದೂರ ಸಾಗಿದ್ದಾಳೆ. ವಿದ್ಯಾವಂತೆಯಾಗಿರುವ, ಉದ್ಯೋಗದಲ್ಲಿರುವ ಮತ್ತು ಸ್ವಾತಂತ್ರ್ಯದಿಂದ ಶಕ್ತಗೊಂಡಿರುವ ಆಕೆಯು, ತನ್ನದೇ ಆದ ಆಯ್ಕೆ ಮತ್ತು ನಿರ್ಧಾರಗಳನ್ನು ಹೊಂದಿರುತ್ತಾಳೆ. ಸಂಪ್ರದಾಯಗಳು, ಆಚರಣೆಗಳು ಮತ್ತು ಅಸ್ತಿತ್ವದಲ್ಲಿರುವ ಅಭ್ಯಾಸವನ್ನು ಆಕೆ ಗೌರವಿಸುತ್ತಾಳೆ ಆದರೆ ಅವುಗಳನ್ನು ಕಣ್ಣು ಮುಚ್ಚಿಕೊಂಡು ನಂಬದಿರುವ ಮತ್ತು ಪ್ರಶ್ನಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ತನ್ನ ಸ್ವಂತ ಕುಟುಂಬ ಮತ್ತು ಬೆಂಬಲ ವ್ಯವಸ್ಥೆಯ ನಿಜವಾದ ಅರ್ಥದಲ್ಲಿ, ಅವಳು ತನ್ನ ಭಾವಿ ಸಂಗಾತಿಯಿಂದ ಸಮಾನ ಪಾಲುದಾರಿಕೆಯನ್ನು ಬಯಸುತ್ತಾಳೆ ಮತ್ತು ಬೆಂಬಲವನ್ನು ನೀಡುವ ಅತ್ತೆ-ಮಾವಂದಿರನ್ನು ನಿರೀಕ್ಷಿಸುತ್ತಾಳೆ.

ಆಕೆ ತನ್ನ ಗಂಡನೊಂದಿಗೆ ಮತ್ತು ಅತ್ತೆ ಮಾವಂದಿರೊಂದಿಗಿನ ಸಂಬಂಧವನ್ನು ಗಟ್ಟಿಗೊಳಿಸಲು ಮೊದಲ ಬಾರಿಗೆ ಎದುರಿಸಿದ ಅನುಭಗಳನ್ನು ಹೊಂದಿರುತ್ತಾಳೆ. ನಿಜ ಹೇಳಬೇಕೆಂದರೆ, ಈ ಅನುಭವಗಳು ಮುಂದೆ ಆಕೆಯ ಜೀವನ ಹೇಗೆ ವಿಸ್ತಾರಗೊಳ್ಳುತ್ತದೆ ಎಂಬುದನ್ನು ವಿವರಿಸುತ್ತವೆ. ಈ ಅಪರೂಪದ ಅಮೂಲ್ಯ ಕ್ಷಣಗಳನ್ನು ಪ್ಲಾಟಿನಂನಂತಯೇ ಅಪರೂಪದ ವಸ್ತುಗಳಿಗೆ ಹೋಲಿಸಬಹುದು.

Platinum Evara ದ ಇತ್ತೀಚಿನ ಸಂಗ್ರಹವು ಪ್ರಕೃತಿಯ ಹಲವು ಆಯಾಮಗಳಿಂದ ಸ್ಫೂರ್ತಿ ಪಡೆಯುತ್ತದೆ ಮತ್ತು ಆಕೆಯ ಅದ್ಭುತ ವೈವಿಧ್ಯಮಯ ಭವ್ಯತೆಯನ್ನು ಜೀವಂತಗೊಳಿಸುತ್ತದೆ. ಅಪರೂಪದ ಮತ್ತು ಅಮೂಲ್ಯವಾಗಿ ರಚಿಸಲಾದ ಈ ಸಂಗ್ರಹವನ್ನು ವಿಶೇಷವಾಗಿ ಹೊಸ ವಧುವಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದರಿಂದ ಆಕೆ ತನ್ನ ಅಪರೂಪದ ಮೈಲಿಗಲ್ಲುಗಳ ಕ್ಷಣಗಳನ್ನು ಎಂದಿಗೂ ಮರೆಯುವುದಿಲ್ಲ. ಹೇಗೆಂದರೆ ಅವಳು ತನ್ನ ಮೊದಲ Evara ವನ್ನು ಹೇಗೆ ಎಂದಿಗೂ ಮರೆಯುವುದಿಲ್ಲವೋ ಹಾಗೆ.

ಇಂದಿನ ವಧುಗಳ ಕೆಲವು ಸ್ಪೂರ್ತಿದಾಯಕ ಕಥೆಗಳು ಇಲ್ಲಿವೆ, ಅವರು ತಮ್ಮ ವಿವಾಹದ ನಂತರ ಅನುಭವಿಸಿದ ಅವರ ಅಪರೂಪದ ಮೊದಲ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

27 ವರ್ಷದ ಮೀರಾ, ತನ್ನ ಕನಸುಗಳನ್ನು ಮುಂದುವರೆಸಲು ಅವಳು ಕಾಲಿಟ್ಟ ದಿನವೇ ತನ್ನ ಅತ್ತಿಗೆಯ ಹೊಸ ಪಾತ್ರಕ್ಕೆ ಮೊದಲ ಬಾರಿಗೆ ಹೆಜ್ಜೆ ಹಾಕಿದಳು ಎಂದು ಆಕೆ ನಂಬಿದ್ದಾಳೆ. "ನನ್ನ ಅತ್ತಿಗೆ ನಿಜವಾಗಿಯೂ ಅಸಮಾಧಾನಗೊಂಡಿದ್ದನ್ನು ತಿಳಿದು ನಾನು ಒಂದು ದಿನ ಸಂಜೆ ಕೆಲಸದಿಂದ ಮನೆಗೆ ಬಂದೆ. ಹಲವು ಕಪ್ ಟೀ ಕುಡಿದು ಮಾತನಾಡಿದ ಮೇಲೆ, ಅನು ತನ್ನ ರಂಗಭೂಮಿಯ ಮೇಲಿನ ಪ್ರೀತಿಯನ್ನು ಮತ್ತಷ್ಟು ಹುಡುಕಲು ತನ್ನ ಸ್ಥಿರವಾದ ಬ್ಯಾಂಕಿಂಗ್ ಕೆಲಸವನ್ನು ಬಿಡಲು ಹಿಂಜರಿಯುತ್ತಿದ್ದಾಳೆ ಎಂದು ತಿಳಿಸಿದಳು. ಏಕೆಂದರೆ ಇದನ್ನು ನೋಡಿದ ಜನರು ಏನಂದುಕೊಳ್ಳುತ್ತಾರೆ ಎಂಬ ಚಿಂತೆ." ಹೊಸ ಆರಂಭಗಳನ್ನು ತಿಳಿಸಿದ ಮೀರಾ, ತನ್ನ ಆತಂಕವನ್ನು ಹೋಗಲಾಡಿಸುವುದಕ್ಕಾಗಿ ಅನುವನ್ನು ನಿಧಾನವಾಗಿ ಪ್ರೋತ್ಸಾಹಿಸಿದಳು ಮತ್ತು ಅನುವನ್ನು ತನ್ನ ಮೊದಲ ಆಡಿಷನ್‌ಗೆ ಕರೆದೊಯ್ಯುವ ಮೂಲಕ ಆ ಮೊದಲ ಹೆಜ್ಜೆ ಇಡಲು ಸಹಾಯ ಮಾಡಿದಳು. ಮೀರಾ "ಅನು ಆಡಿಷನ್ ಮಾಡಿ ಮುಗಿಸಿದಾಗ ಬಹುಷಃ ನಾನು ಜೋರಾಗಿ ಚಪ್ಪಾಳೆ ತಟ್ಟಿದ್ದೇನೆ ಮತ್ತು ಈಗ, ಅವಳು ಕೇವಲ ತಾರೆಯರಂತೆ ಪ್ರದರ್ಶನವನ್ನು ನೀಡುವುದು ಮಾತ್ರವಲ್ಲ, ಆಕೆ ರಂಗಭೂಮಿ ವಿಮರ್ಶಕರಿಂದ ತನ್ನ ನಟನೆಯ ಕುರಿತಾಗಿ ಅದ್ಭುತ ವಿಮರ್ಶೆಗಳನ್ನು ಗಳಿಸಿದ್ದಾಳೆ" ಎಂದು ಹೆಮ್ಮೆಯಿಂದ ಹೇಳಿದರು. ನಿಧಾನವಾಗಿ ಆಕೆಯ ನೆಕ್ಲೆಸ್ ಅನ್ನು ಮುಟ್ಟಿಕೊಳ್ಳುತ್ತಾ, "ನಂತರ, ನಾನು ಆಕೆಗೆ ಬೆಂಬಲವಾಗಿ ನಿಂತ ಕಾರಣದಿಂದಾಗಿ, ಅನು ನನಗೆ ಇದನ್ನು ಉಡುಗೊರೆಯಾಗಿ ನೀಡಿದಳು - #MyFirstEvara.  ಈ ನೆಕ್ಲೆಸ್ ನಾವು ಹೇಗೆ ನಿಜವಾಗಿಯೂ ಸಹೋದರಿಯರಾಗಿದ್ದೇವೆ ಎಂಬುದರ ಜ್ಞಾಪಕಾರ್ಥವಾಗಿದೆ.”

32 ವರ್ಷದ ಮಾಯಾ, ತನ್ನ ಸೊಗಸಾದ Platinum Evara ಸೆಟ್‌ನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾರೆ, ಇದು ಅವಳ ಮದುವೆಗಿಂತ ಎರಡು ದಿನಗಳ ಮುಂಚೆ ಅಕೆಯ ತಂದೆ ಪ್ರೀತಿಯಿಂದ ನೀಡಿದ ಆಕೆಯ #MyFirstEvara ಉಡುಗೊರೆಯಾಗಿದೆ ಕೂಡ. ಕಣ್ಣುಗಳಲ್ಲಿ ತನ್ನ ಭಾವನೆಗಳನ್ನು ಪ್ರತಿಬಿಂಬಿಸುತ್ತಾ, ಆಕೆ ಹೀಗೆ ಹೇಳುತ್ತಾರೆ: “ನನ್ನ ತಂದೆ ಇದನ್ನು ನನಗೆ ವಿದಾಯದ ಸಮಯದಲ್ಲಿನ ಉಡುಗೊರೆಯಾಗಿ ನೀಡಲು ಉದ್ದೇಶಿಸಿದ್ದರು. ನಮ್ಮಲ್ಲಿ ಎಂದಿಗೂ ವಿದಾಯ ಅನ್ನುವುದೇ ಇಲ್ಲ! ನಾನು ಯಾವಾಗಲೂ ಅವರ ಮಗಳಾಗಿರುತ್ತೇನೆ ಮತ್ತು ನಾನು ಎಲ್ಲಿದ್ದರೂ ಅವರೊಂದಿಗೇ ಇರುತ್ತೇನೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು, ಈ ದಿನವೇ ನಾನು ದೂರ ಹೋಗುವುದಿಲ್ಲ ಎಂದು ಅವರಿಗೆ ನಾನು ಅರ್ಥಮಾಡಿಸಿದೆ. ನಾನು ಅವರೊಂದಿಗೆ ಜಂಟಿ ಖಾತೆಯನ್ನು ತೆರೆದಿದ್ದೇನೆ, ಇದರಿಂದ ಅವರು ಯಾವಾಗಲೂ ಬಯಸಿದ ಫೋಟೋಗ್ರಫಿಗಾಗಿ ತರಬೇತಿ ತೆಗೆದುಕೊಳ್ಳಬಹುದು ಮತ್ತು ಈ ವ್ಯವಹಾರೋದ್ಯಮವನ್ನು ಆರಂಭಿಸಲು ನಾನು ಅವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದೆ. ಅವರು ಇದನ್ನು ಪ್ರಾರಂಭಿಸಿ 6 ತಿಂಗಳಾಗಿದೆ ಮತ್ತು ನಾವು ಈಗಾಗಲೇ ಅವರ ಮೊದಲ ಪ್ರದರ್ಶನವನ್ನು ಆಯೋಜಿಸುತ್ತಿದ್ದೇವೆ. ಟಿ ಗಾಗಿ ನಾನೇ ಎಲ್ಲವನ್ನೂ ಯೋಜನೆ ಮಾಡಿದೆ, ನಾನು ಅಲ್ಲಿನ ನೇಮಕಗೊಂಡ ಖಜಾಂಚಿಯಾಗಿದ್ದೇನೆ. ಅವರ ಪ್ರದರ್ಶನದ ದಿನದಂದು ನಾನು ಈ ನೆಕ್ಲೆಸ್ ಅನ್ನು #MyFirstEvaraon ಧರಿಸಲು ಯೋಜಿಸುತ್ತಿದ್ದೇನೆ, ಇದರ ಮೂಲಕ ಮದುವೆಯಿಂದ ಯಾವುದೇ ಸಂಬಂಧವನ್ನು ಬದಲಾಯಿಸಬೇಕಾಗಿಲ್ಲ ಎಂದು ಅವರಿಗೆ ಮತ್ತು ನನಗೆ ಒಂದು ನೆನಪಾಗಿ ಉಳಿಸುವುದು ನನ್ನ ಉದ್ದೇಶ - ವಿಶೇಷವಾಗಿ ನಮ್ಮಿಬ್ಬರದು.

29 ವರ್ಷದ ಆಯಿಷಾ, ನಿರೂಪಿಸಲು ತನ್ನದೇ ಆದ ಸ್ಪೂರ್ತಿದಾಯಕ ಕಥೆಯೊಂದನ್ನು ಹೊಂದಿದ್ದಾಳೆ. "ನನ್ನ ಸಣ್ಣ ಮೈದುನನಾದ ನೀಲ್, ಯಾವಾಗಲೂ ನನ್ನ ಗಂಡನ ಕುಟುಂಬದ ಒಬ್ಬ ಮಗುವಾಗಿದ್ದಾನೆ! ಅವನು ವಿದೇಶದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಮುಂದುವರೆಸಲು ನಿರ್ಧರಿಸಿದಾಗ, ಅವನು ತುಂಬಾ ಹಿಂಜರಿಯುತ್ತಿದ್ದನು, ಏಕೆಂದರೆ ಇದಕ್ಕೂ ಮುಂಚೆ ಆತ ಎಂದಿಗೂ ಮನೆ ಬಿಟ್ಟು ಹೋಗಿರಲಿಲ್ಲ ಮತ್ತು ಅವನ ಹೆತ್ತವರ ಆರ್ಥಿಕ ಸ್ಥಿತಿ ಅಷ್ಟೇನು ಸಹಕಾರಿಯಾಗಿಲ್ಲ ಎಂಬ ಆಲೋಚನೆಯು ಅವನನ್ನು ಚಿಂತೆಗೀಡು ಮಾಡಿತ್ತು. ನಾವು ಮಾತನಾಡಿದ ಆ ಕ್ಷಣದಲ್ಲಿ, ನಾನು ಆತನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ, ಆತನ ಸಲಹೆಗಾರನಾದೆ… ಅವನ ಅಕ್ಕನ ಪಾತ್ರವನ್ನು ವಹಿಸಿಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ!" ಒಂದು ದಿನ ಸಂಜೆ ನಾವು ಮನೆಯವರೆಲ್ಲಾ ಒಟ್ಟಿಗೆ ಕುಳಿತುಕೊಂಡಿದ್ದಾಗ, ನಾನು ನೀಲ್‌ನನ್ನು ಪ್ರೋತ್ಸಾಹಿಸಿ ಅವರ ಯೋಜನೆಗಳ ಬಗ್ಗೆ ಎಲ್ಲರಿಗೂ ತಿಳಿಸುವಂತೆ ಮಾಡಿದ್ದನ್ನು ಈಗಲೂ ನೆನಪಿಸಿಕೊಳ್ಳುತ್ತೇನೆ." ನಾನು ಕಾಲೇಜಿಗೆ ಹೋಗುವುದಕ್ಕಾಗಿ ಮನೆ ಬಿಟ್ಟಾಗ ಆದ ನನ್ನ ಸ್ವಂತ ಅನುಭವದ ಉದಾಹರಣೆಗಳ ಮೂಲಕ ಆತನ ಮನ ಸೆಳೆದೆ. ವಿದ್ಯಾಭ್ಯಾಸ ಮತ್ತು ಕೆಲಸ ಮಾಡುವುದು ಹೇಗೆ ಒಂದು ಸಾಮಾನ್ಯ ವಿದ್ಯಮಾನ ಎಂದು ಅವನಿಗೆ ವಿವರಿಸಿದೆ ಮತ್ತು ಹೆಚ್ಚು ವಿದ್ಯಾಭ್ಯಾಸ ಮಾಡುವುದರಿಂದ ಹೆಚ್ಚು ಸಂಪಾದಿಸಲು ಇದು ದಾರಿ ಮಾಡಿಕೊಡುತ್ತದೆ ಎಂದು ತಿಳಿ ಹೇಳಿದೆ. ಆತ ಕಳೆದ ವಾರ ಭೇಟಿ ಮಾಡಿದ್ದನು, ಮತ್ತು ನನಗೆ "ಪ್ಲಾಟಿನಂ ಬ್ರೇಸ್‌ಲೇಟ್ - #MyFirstEvara ನನಗೆ ಉಡುಗೊರೆಯಾಗಿ ನೀಡಿದ್ದಾನೆ". ಅವನು ನನ್ನ ಸಲಹೆಯಂತೆ ನಡೆದುಕೊಂಡ ಕಾರಣದಿಂದಾಗಿಯೇ ಇಂದು ನನ್ನ ಹೆತ್ತವರು ಆರ್ಥಿಕ ಹೊರೆ ಅನುಭವಿಸದಿರಲು ಸಹಾಯ ಮಾಡಿರುವುದು" ಎಂದು ಆತ ಹೇಳಿದನು. ಆ ಕ್ಷಣದಿಂದಲೇ ನಾವಿಬ್ಬರು ಅಕ್ಕ ತಮ್ಮಂದಿರ ಬಂಧನದಲ್ಲಿ ಬೆಸೆದಿದ್ದೆವು.

28 ವರ್ಷದ ತಾರಾ, ತನ್ನ ಅತ್ತೆಯೊಂದಿಗಿನ ಸಂಬಂಧದ ಬಗ್ಗೆ ಹೃದಯ ಕರಗಿಸುವ ಕಥೆಯನ್ನು ಹಂಚಿಕೊಳ್ಳುತ್ತಾರೆ. ಆಕೆ ಹೀಗೆ ನೆನಪಿಸಿಕೊಳ್ಳುತ್ತಾಳೆ, "ನಾವು ಮೊದಲ ಬಾರಿಗೆ ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದ ರಾತ್ರಿಯ ಊಟ ನನಗೆ ಇನ್ನೂ ನೆನಪಿದೆ - ಅಲ್ಲಿ ನನ್ನ ಅತ್ತೆಯನ್ನು ಹೊರತುಪಡಿಸಿ ನಾವೆಲ್ಲರೂ ಊಟದ ಮೇಜಿನ ಸುತ್ತಲೂ ಕುಳಿತದ್ದೆವು. ಅಂದು ನಾವೆಲ್ಲರೂ ಊಟ ಮಾಡುತ್ತಿದ್ದರೆ, ನಮ್ಮ ಅತ್ತೆಯವರು ಸಹಾಯಕರೊಂದಿಗೆ ಸೇರಿ ನಮಗೆಲ್ಲಾ ಬಿಸಿ ಬಿಸಿ ಚಪಾತಿಯನ್ನು ಮಾಡಿ ಬಡಿಸುತ್ತಿದ್ದರು. ಎಲ್ಲಾರೂ ಊಟ ಮುಗಿಸಿ ಎದ್ದು ಹೋದ ನಂತರ, ಅತ್ತೆ ತಾನಾಗಿಯೇ ಬಡಿಸಿಕೊಂಡು ಒಬ್ಬರೇ ಊಟ ಮಾಡುತ್ತಿದ್ದರು. ನಾನು ಅವರ ಪಕ್ಕದಲ್ಲಿ ಕುಳಿತುಕೊಂಡು, ಇದು ಪ್ರತಿದಿನ ಹೀಗೆಯೇ ಅಥವಾ ಇವತ್ತು ಮಾತ್ರವೇ ಎಂದು ಕೇಳಿದೆ. ಅವರು ಸಾಮಾನ್ಯವಾಗಿ ನಗುತ್ತಾ, ಯಾರ ಮೇಲೂ ಬೇಸರಿಸಿಕೊಳ್ಳದೆ "ಇದು ಯಾವಾಗಲೂ ಹೀಗೆಯೇ" ಎಂದು ಹೇಳಿದರು. ನನಗೆ ತೊಂಬಾ ಬೇಸರವಾಯಿತು. ಮರುದಿನ ಊಟದ ಮೇಜಿನ ಬಳಿ, ಬಿಸಿ ಚಪಾತಿಗಳನ್ನು ಮೊದಲೇ ತಯಾರಿಸಲಾಗಿದೆಯೇ ಮತ್ತು ಅತ್ತೆಗೂ ಊಟದ ತಟ್ಟೆಯನ್ನು ಇಡಲಾಗಿದೆಯೇ ಎಂದು ನಾನು ಖಚಿತಪಡಿಸಿಕೊಂಡೆ. ಇದರಿಂದಾಗಿ ನಮ್ಮ ಮನೆಯವರೆಲ್ಲರಿಗೂ ಆಶ್ಚರ್ಯವಾಯಿತು, ಏನೇ ಆದರೂ, ಅವರಿಗೆ ನನ್ನ ಉದ್ದೇಶ ಅರ್ಥವಾಗಿತ್ತು. ಅಭ್ಯಾಸ ಬಲದಂತೆ ಆಕೆ ಅಡುಗೆಮನೆ ಕಡೆಗೆ ಹೋಗುತ್ತಿದ್ದ ಅತ್ತೆಯನ್ನು ಕರೆದು ಊಟಕ್ಕೆ ಕುಳಿತುಕೊಳ್ಳುವಂತೆ ಹೇಳಿದೆ. ಅವರು ಮೊದಲಿಗೆ ಹಿಂಜರಿದರು ಆದರೆ ನಾವು ಒಂದು ನೋಟವನ್ನು ವಿನಿಮಯ ಮಾಡಿಕೊಂಡೆವು - ಅದು ಹೇಗಿತ್ತೆಂದರೆ ನಿಮಗಿದು ಸಾಧ್ಯ, ನೀವು ಕುಳಿತುಕೊಳ್ಳಲೇಬೇಕು ಎಂಬಂತಿತ್ತು. ಮರುದಿನ ಅತ್ತೆ ನನ್ನನ್ನು ಆಕೆಯ ಕೋಣೆಗೆ ಕರೆದು, ನನಗೆ ಈ ಸುಂದರವಾದ  Platinum Evara ಸೆಟ್ - #MyFirstEvara ಉಡುಗೊರೆಯಾಗಿ ನೀಡಿದರು ಮತ್ತು "ನನ್ನ ಸೊಸೆಯಲ್ಲಿ ನಾನೊಬ್ಬ ಗೆಳತಿಯನ್ನು ಕಾಣುತ್ತಿದ್ದೇನೆ" ಎಂದು ಹೇಳಿದರು. ಆ ಒಂದು ಕ್ಷಣದಿಂದ ನಾವ್ಬಿಬ್ಬರೂ ತಾಯಿ ಮಗಳಾದೆವು ಎಂದು ನಾನು ಭಾವಿಸುತ್ತೇನೆ.

ಹೆಚ್ಚಿನ ವಿವರಗಳಿಗಾಗಿ ಮತ್ತು ಮಾಹಿತಿಗಾಗಿ ಲಿಂಕ್ ಕ್ಲಿಕ್ ಮಾಡಿ, ನೀವು ನಮಗೆ ಕರೆಯನ್ನೂ ಮಾಡಬಹುದು, #MyFirstEvara.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Promoted
Top