Friday, 10 Sep, 9.20 am AIN Live News

ರಾಷ್ಟೀಯ
10 ಟೀ ಶರ್ಟ್ ಕದ್ದು ರೆಡ್ ಹ್ಯಾಂಡ್ ಆಗಿ ಮಾಲೀಕರ ಕೈಗೆ ಸಿಕ್ಕಿಬಿದ್ದ.! ಮುಂದೇನಾಯ್ತು ಗೊತ್ತಾ..?

ಚೆನ್ನೈ : ಯುವಕನೊಬ್ಬ ಪಂಚೆಯೊಳಗೆ 10 ಟೀ ಶರ್ಟ್ ಕದ್ದು, ಅಂಗಡಿ ಮಾಲೀಕನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಹಾಕಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇನ್ನೂ ಈ ವೀಡಿಯೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದೆ. ಆರೋಪಿಯನ್ನು ತುತುಕುಡಿಯ ಸೆಲ್ವಮಧನ್ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ತಿಸಾಯನವಿಲೈ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಹಬ್ಬ ಇದ್ದ ಕಾರಣ ಹೆಚ್ಚು ಜನ ತುಂಬಿದ ಅಂಗಡಿಗೆ ನುಗ್ಗಿ ಲಾಭ ಗಳಿಸಲು ಪ್ರಯತ್ನಿಸಿದ ಆರೋಪಿ ಅಂಗಡಿಯ ಕೆಲಸಗಾರರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಮೊದಲಿಗೆ ಅಂಗಡಿಯ ಕೆಲಸಗಾರರಿಗೆ ಟೀ ಶರ್ಟ್ ಕೇಳಿ ನಂತರ ಅದನ್ನು ಟ್ರಯಲ್ ರೂಮ್‍ನಲ್ಲಿ ಧರಿಸಿ ಪರಿಶೀಲಿಸುವುದಾಗಿ ಹೇಳಿ ಹೋಗಿದ್ದಾನೆ. ಆದರೆ ಬಳಿಕ ಟೀ ಶರ್ಟ್ ಇಲ್ಲದೇ ಟ್ರಯಲ್ ರೂಮ್‍ನಿಂದ ಹೊರಗೆ ಬಂದಾಗ, ಆರೋಪಿಯನ್ನು ಅಂಗಡಿಯವರು ಟೀಶರ್ಟ್ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಟೀ ಶರ್ಟ್ ಸೈಜ್ ಸರಿ ಇಲ್ಲ ಎಂದು ಅದನ್ನು ಟ್ರಯಲ್ ರೂಮ್‍ನಲ್ಲಿಯೇ ಬಿಟ್ಟಿರುವುದಾಗಿ ಸೆಲ್ವಂ ಮಧನ್ ಹೇಳಿದ್ದಾನೆ.

ಈ ಬಗ್ಗೆ ಅನುಮಾನಗೊಂಡ ಅಂಗಡಿಯವರು ಕೂಡಲೆ ಮಾಲೀಕರಿಗೆ ತಿಳಿಸಿದ್ದಾರೆ. ನಂತರ ಮಾಲೀಕರು ಆರೋಪಿಗೆ ಬಟ್ಟೆಯನ್ನು ತೆಗೆಯುವಂತೆ ಸೂಚಿಸಿದ್ದಾರೆ. ಆಗ ಆರೋಪಿ 5 ಟೀಶರ್ಟ್ ಧರಿಸಿದ್ದು, ಪಂಚೆಯೊಳಗೆ 5 ಟೀ ಶರ್ಟ್ ಬಚ್ಚಿಟ್ಟಿಕೊಂಡಿರುವುದು ಪತ್ತೆಯಾಗಿದೆ. ಆದರೆ ಈ ಘಟನೆ ಸಂಬಂಧ ಮಾಲೀಕರು ಯಾವುದೇ ದೂರು ನೀಡದೇ ಯುವಕನನ್ನು ಹಾಗೆಯೇ ಬಿಟ್ಟು ಕಳುಹಿಸಿಕೊಟ್ಟಿದ್ದಾರೆ.

Share

Continue Reading

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: AIN Live News
Top