Dailyhunt Logo
  • Light mode
    Follow system
    Dark mode
    • Play Story
    • App Story
20 ಕೋಟಿ ಆಸ್ತಿ ವರ್ಗಾಯಿಸಲು ಒತ್ತಡ: ಪತಿ ವಿರುದ್ಧ ಸೆಲೀನಾ ಜೇಟ್ಲಿ ಗಂಭೀರ ಆರೋಪ

20 ಕೋಟಿ ಆಸ್ತಿ ವರ್ಗಾಯಿಸಲು ಒತ್ತಡ: ಪತಿ ವಿರುದ್ಧ ಸೆಲೀನಾ ಜೇಟ್ಲಿ ಗಂಭೀರ ಆರೋಪ

AIN Kannada 3 days ago

ಮುಂಬೈ: ಕನ್ನಡದ 'ಶ್ರೀಮತಿ' ಸೇರಿದಂತೆ ಬಾಲಿವುಡ್ ಹಾಗೂ ಟಾಲಿವುಡ್ ಚಿತ್ರಗಳಲ್ಲಿ ನಟಿಸಿ ಬಳಿಕ ಮದುವೆಯಾದ ನಂತರ ಚಿತ್ರರಂಗದಿಂದ ದೂರವಾಗಿದ್ದ ನಟಿ ಸೆಲೀನಾ ಜೇಟ್ಲಿ ಇದೀಗ ತಮ್ಮ ವೈವಾಹಿಕ ಜೀವನದ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಪತಿ ಪೀಟರ್ ಹಾಗ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ವಿಚ್ಛೇದನ ಹೋರಾಟದ ವೇಳೆ ತಮ್ಮ ಆಸ್ತಿಯನ್ನು ವರ್ಗಾಯಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೆಲೀನಾ ಜೇಟ್ಲಿ, ಪತಿಯೊಂದಿಗೆ ನಡೆಯುತ್ತಿರುವ ಕಾನೂನು ಹೋರಾಟ ಇನ್ನೂ ಮುಂದುವರಿದಿದ್ದು, ಜೀವನಾಂಶವೂ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಬಳಿಯಿರುವ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತಿ ತಮ್ಮ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ವೇಳೆ ಮಹಿಳೆಯರಿಗೆ ಮಹತ್ವದ ಸಲಹೆಯನ್ನೂ ನೀಡಿದ ನಟಿ, ಮದುವೆಯಾಗುವ ಮುನ್ನ ವಿವಾಹಪೂರ್ವ ಒಪ್ಪಂದ (Prenuptial Agreement) ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು. ಮಹಿಳೆಯರು ತಮ್ಮ ಹೆಸರಿನಲ್ಲಿರುವ ಆಸ್ತಿ ಮತ್ತು ಆರ್ಥಿಕ ಹಕ್ಕುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು. ಇದೇ ಮುಂದಿನ ದಿನಗಳಲ್ಲಿ ಸುರಕ್ಷತೆಯ ಮಾರ್ಗವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಜರ್ಮನಿಯ ಉದ್ಯಮಿ ಪೀಟರ್ ಹಾಗ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಸೆಲೀನಾ ಜೇಟ್ಲಿಗೆ ಮೂವರು ಮಕ್ಕಳಿದ್ದಾರೆ. ಹಲವು ವರ್ಷಗಳ ಬಳಿಕ ಅವರು ಮತ್ತೆ ಚಿತ್ರರಂಗಕ್ಕೆ ಮರಳಿದ್ದು, 'ಸಿಸ್ಟರ್ ನಿವೇದಿತಾ' ಸಿನಿಮಾದ ಮೂಲಕ ಅಭಿನಯ ಮುಂದುವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News