Dailyhunt Logo
  • Light mode
    Follow system
    Dark mode
    • Play Story
    • App Story
61ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಆಮೀರ್ ಖಾನ್: ಗೌರಿ ಸ್ಪ್ರ್ಯಾಟ್ ಕೈಹಿಡಿದ ನಟನಿಗೆ ಮಾಜಿ ಪತ್ನಿಯರ ಸಾಥ್

61ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಆಮೀರ್ ಖಾನ್: ಗೌರಿ ಸ್ಪ್ರ್ಯಾಟ್ ಕೈಹಿಡಿದ ನಟನಿಗೆ ಮಾಜಿ ಪತ್ನಿಯರ ಸಾಥ್

AIN Kannada 3 months ago

ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಹಾಗೂ ಬೆಂಗಳೂರಿನ ಮೂಲದ ಗೌರಿ ಸ್ಪ್ರ್ಯಾಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಮುಂಬೈನ ಬಾಂದ್ರಾದಲ್ಲಿರುವ ಆಮಿರ್ ಖಾನ್ ನಿವಾಸದಲ್ಲಿ ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ವಿವಾಹ ಸಮಾರಂಭದಲ್ಲಿ ಸುಮಾರು 150 ಮಂದಿ ಮಾತ್ರ ಭಾಗವಹಿಸಿದ್ದರು. ಕುಟುಂಬದ ಸದಸ್ಯರು, ವಿದೇಶಗಳಿಂದ ಆಗಮಿಸಿದ್ದ ಕೆಲ ಬಂಧುಗಳು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗದ ಆಯ್ದ ಗಣ್ಯರು ಈ ಖಾಸಗಿ ಸಮಾರಂಭಕ್ಕೆ ಸಾಕ್ಷಿಯಾದರು. ಮದುವೆಯ ಬಳಿಕ ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ವಿವಾಹ ನೋಂದಣಿಗೆ ಅಗತ್ಯ ದಾಖಲೆಗಳಿಗೆ ಸಹಿ ಹಾಕುವ ಮೂಲಕ ತಮ್ಮ ದಾಂಪತ್ಯವನ್ನು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡಿದ್ದಾರೆ.

ಆಮಿರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಸುಮಾರು 25 ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಅವರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಮಿರ್ ಖಾನ್ ಮೊದಲ ಬಾರಿಗೆ ಗೌರಿಯನ್ನು ಸಾರ್ವಜನಿಕವಾಗಿ ಪರಿಚಯಿಸಿದ್ದರು. ಬಳಿಕ ಜೂನ್ 4ರಂದು ತಮ್ಮ ವಿವಾಹದ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದರು.

ಈ ವಿವಾಹ ಸಮಾರಂಭದಲ್ಲಿ ಆಮಿರ್ ಖಾನ್ ಅವರ ಮೂವರು ಮಕ್ಕಳಾದ ಜುನೈದ್, ಇರಾ ಹಾಗೂ ಆಜಾದ್ ಭಾಗವಹಿಸಿದ್ದರು. ಗೌರಿ ಸ್ಪ್ರ್ಯಾಟ್ ಅವರ ಆರು ವರ್ಷದ ಮಗ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದನು. ಆಮಿರ್ ಖಾನ್ ಈ ಹಿಂದೆ ರೀನಾ ದತ್ತಾ ಹಾಗೂ ಕಿರಣ್ ರಾವ್ ಅವರನ್ನು ವಿವಾಹವಾಗಿದ್ದು, ಇದು ಅವರ ಮೂರನೇ ವಿವಾಹವಾಗಿದೆ.

ಗೌರಿ ಸ್ಪ್ರ್ಯಾಟ್ ಮೂಲತಃ ಬೆಂಗಳೂರಿನವರಾಗಿದ್ದು, ಅವರ ತಾಯಿ ರೀಟಾ ಸ್ಪ್ರ್ಯಾಟ್ ನಗರದಲ್ಲಿ ಸಲೂನ್ ನಡೆಸುತ್ತಿದ್ದರು. ಗೌರಿ ಬೆಂಗಳೂರಿನ ಬ್ಲೂ ಮೌಂಟೇನ್ಸ್ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, ಬಳಿಕ ಲಂಡನ್ ಯೂನಿವರ್ಸಿಟಿ ಆಫ್ ಆರ್ಟ್ಸ್‌ನಲ್ಲಿ ಫ್ಯಾಷನ್ ಸ್ಟೈಲಿಂಗ್ ಹಾಗೂ ಫೋಟೋಗ್ರಫಿ ಅಭ್ಯಾಸ ಮಾಡಿದ್ದಾರೆ. ಪ್ರಸ್ತುತ ಅವರು ಮುಂಬೈನ ಬಿಬ್ಲಂಟ್ ಸಲೂನ್‌ನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News