ಪೋಷಕರು ಬದುಕಿರುವಾಗಲೇ ಮಕ್ಕಳನ್ನು ಕಳೆದುಕೊಳ್ಳುವುದು ಅತಿದೊಡ್ಡ ದುಃಖ. ಇದೇ ನೋವು ಇದೀಗ ಖ್ಯಾತ ನಟ ಡೇನಿಯಲ್ ಬಾಲಾಜಿ ಅವರ ಕುಟುಂಬವನ್ನು ಕಾಡುತ್ತಿದೆ. ಅವರ ನಿಧನದ ಬಳಿಕ ತಾಯಿ ರಾಜಲಕ್ಷ್ಮಿ ಅವರ ಪರಿಸ್ಥಿತಿ ಅಭಿಮಾನಿಗಳ ಕಣ್ಣೀರನ್ನು ತರಿಸಿದೆ.
ಕನ್ನಡ ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಡೇನಿಯಲ್ ಬಾಲಾಜಿ , ಕಿರಾತಕ ಮತ್ತು ಶಿವಾಜಿನಗರ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದರು.
2024ರಲ್ಲಿ ಕೇವಲ 48ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತ ನೀಡಿತ್ತು.
ತಮ್ಮ ತಾಯಿಗಾಗಿ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ಬಂಗಲೆಯಲ್ಲಿ ರಾಜಲಕ್ಷ್ಮಿ ವಾಸಿಸುತ್ತಿದ್ದರು. ಆದರೆ ಮಗನ ನೆನಪು ತಾಳಲಾರದೆ ಆ ಬಂಗಲೆ ತೊರೆದು ಈಗ ಸಣ್ಣ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ.
ಚೆನ್ನೈನ ಆವಡಿಯಲ್ಲಿ ಮಗ ಕಟ್ಟಿಸಿದ್ದ ದೇವಸ್ಥಾನದ ಸಮೀಪದ ಪುಟ್ಟ ಗುಡಿಸಲಿನಲ್ಲಿ ವಾಸವಾಗಿರುವ ಈ ತಾಯಿಯ ಬದುಕು, ಮಗನ ಮೇಲಿನ ಅಪಾರ ಪ್ರೀತಿಯ ದರ್ಶನವಾಗಿದೆ.

