AIN Live News

265k Followers

Aadhaar card.. ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದ್ರೆ ತಕ್ಷಣ ಲಾಕ್ ಮಾಡೋದು ಹೇಗೆ..? ಇಲ್ಲಿದೆ ನೋಡಿ

02 Jan 2023.07:22 AM

ಧಾರ್ ಕಾರ್ಡ್ ಭಾರತದ ನಾಗರಿಕರಿಗೆ ಅತ್ಯಂತ ಪ್ರಮುಖವಾದ ದಾಖಲೆ. ವೈಯಕ್ತಿಕ ಮಾಹಿತಿಗಳು, ವಿಳಾಸ, ಫೋಟೋ, ಮೊಬೈಲ್ ಸಂಖ್ಯೆ ಸೇರಿದಂತೆ ಎಲ್ಲ ಮುಖ್ಯವಾದ ಮಾಹಿತಿಗಳನ್ನು ಆಧಾರ್ ಕಾರ್ಡ್ ಒಳಗೊಂಡಿದೆ.ನ್ನು ಬ್ಯಾಂಕ್ ಖಾತೆ, ವಾಹನ ಚಾಲನ ಪರವಾನಗಿ, ವಿಮೆ, ಪ್ಯಾನ್ ಕಾರ್ಡ್ ಸೇರಿದಂತೆ ಪ್ರಮುಖವಾದ ಎಲ್ಲ ದಾಖಲೆಗಳಿಗೂ ಆಧಾರ್ ಕಾರ್ಡ್ ಜೋಡಣೆಯಾಗಿರುತ್ತದೆ.

ಅಲ್ಲದೆ, ಬ್ಯಾಂಕ್ ಖಾತೆ ತೆರೆಯೋದ್ರಿಂದ ಹಿಡಿದು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಯಾಗುವ ತನಕ ಪ್ರಮುಖ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯ. ಹಾಗೆಯೇ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಕೂಡ ಅಷ್ಟೇ ಮುಖ್ಯ.

ಇಲ್ಲವಾದ್ರೆ ಅಪರಾಧ ಚಟುವಟಿಕೆಗಳು ಅಥವಾ ವಂಚನೆಗಳಿಗೆ ನಿಮ್ಮ ಆಧಾರ್ ಕಾರ್ಡ್ ಬಳಕೆಯಾಗುವ ಸಾಧ್ಯತೆಯಿದೆ. ಇದಕ್ಕೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಪ್ರಕರಣವೇ ಜ್ವಲಂತ ನಿದರ್ಶನ. ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಬೇರೆಯವರ ಆಧಾರ್ ಕಾರ್ಡ್ ಗಳನ್ನು ಬಳಸುತ್ತಿದ್ದ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಸುರಕ್ಷತೆ ಹಾಗೂ ಕಳೆದು ಹೋಗಿದ್ದರೆ ಏನು ಮಾಡಬೇಕು ಎಂಬುದರ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಕೆಲವು ಸಲಹೆಗಳನ್ನು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

ಆಧಾರ್ಕಾರ್ಡ್ಲಾಕ್, ಅನ್ಲಾಕ್ಹೇಗೆ?
ಆಧಾರ್ ಕಾರ್ಡ್ ಇಲ್ಲದೆ ಇಂದು ಯಾವುದೇ ಪ್ರಮುಖ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಎಲ್ಲ ಕಡೆ ನಿಮ್ಮ ಆಧಾರ್ ಸಂಖ್ಯೆ ಕೇಳಿಯೇ ಕೇಳುತ್ತಾರೆ. ಹೀಗಾಗಿ ಆಧಾರ್ ಕಾರ್ಡ್ ಭಾರತೀಯರ ಬಹುಮುಖ್ಯ ಗುರುತಿನ ಚೀಟಿಯಾಗಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಹಾಗೂ ಬಯೋಮೆಟ್ರಿಕ್ ಮಾಹಿತಿಗಳು ಇರುವ ಕಾರಣ ಎಚ್ಚರಿಕೆ ವಹಿಸೋದು ಅಗತ್ಯ. ಇನ್ನು ಯುಐಡಿಎಐ (UIDAI) ಆಧಾರ್ ಕಾರ್ಡ್ ಲಾಕ್ ಹಾಗೂ ಅನ್ ಲಾಕ್ ಸೌಲಭ್ಯ ಒದಗಿಸಿದೆ. ಒಂದು ವೇಳೆ ನಿಮಗೆ ನಿಮ್ಮ ಬಯೋಮೆಟ್ರಿಕ್ ಮಾಹಿತಿ ಕಳುವಾಗಿದೆ ಎಂಬ ಭಾವನೆ ಮೂಡಿದ್ರೆ ಅಥವಾ ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದ್ರೆ ತಕ್ಷಣ ಆಧಾರ್ ಕಾರ್ಡ್ ಲಾಕ್ ಮಾಡಬಹುದು. ಆಧಾರ್ ಕಾರ್ಡ್ ಲಾಕ್ ಮಾಡಿದ್ರೆ ಬಯೋಮೆಟ್ರಿಕ್ ಗೆ ಬಳಸಲು ಸಾಧ್ಯವಾಗೋದಿಲ್ಲ. ಲಾಕ್ ಹಾಗೂ ಅನ್ ಲಾಕ್ ಸೌಲಭ್ಯ ವೆಬ್ ಸೈಟ್ ನಲ್ಲೇ ಲಭ್ಯವಿದೆ.
*ಮೊದಲಿಗೆ ಯುಐಡಿಎಐ ಅಧಿಕೃತ ವೆಬ್ ಸೈಟ್ uidai.gov.in.ಭೇಟಿ ನೀಡಿ.ಅಲ್ಲಿ 'ಆಧಾರ್ ಕಾರ್ಡ್ ಸರ್ವೀಸ್' ಎಂಬ ಆಯ್ಕೆ ಸಿಗುತ್ತದೆ. ಅದರ ಅಡಿಯಲ್ಲಿ 'ಲಾಕ್/ಅನ್ ಲಾಕ್ ಬಯೋಮೆಟ್ರಿಕ್ಸ್' ಆಯ್ಕೆ ಸಿಗುತ್ತದೆ.

*ಅಲ್ಲಿ ನಿಮ್ಮ 12 ಅಂಕೆಗಳ ಆಧಾರ್ ಸಂಖ್ಯೆ ನಮೂದಿಸಿ.
*ನಂತರ ಕಾಪ್ಚಾ ಕೋಡ್ ನಮೂದಿಸಿ ಸಲ್ಲಿಕೆ (Submit) ಮಾಡಿ.
*ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ (OTP) ಬರುತ್ತದೆ.
*ಒಟಿಪಿ ನಮೂದಿಸಿ ಆ ಬಳಿಕ ಪಾಸ್ ವರ್ಡ್ ಹಾಕಿ.
*Enable biometric locking'ಪರಿಶೀಲಿಸಿ 'Enable'ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗಿರುತ್ತದೆ, ನಿಮಗೆ ಅಗತ್ಯವಿದ್ದಾಗ ಈ ವೆಬ್ ಸೈಟ್ ಮೂಲಕವೇ ಲಾಕ್ ತೆಗೆಯಬಹುದು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: AIN Live News

#Hashtags