Saturday, 25 Sep, 11.20 am AIN Live News

ರಾಷ್ಟೀಯ
Amarinder Singh.. ನನಗೇ ಹೀಗಾದರೆ, ಕಾರ್ಯಕರ್ತರು ಏನೆಲ್ಲ ಅನುಭವಿಸಬೇಕಾಗಬಹುದು: ಅಮರಿಂದರ್ ಸಿಂಗ್

ಚಂಡಿಗಢ್​ : ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರಿಂದರ್ ಸಿಂಗ್ ಇದೀಗ ಕಾಂಗ್ರೆಸ್​ ಪಕ್ಷದ ಮೇಲೆಯೇ ಮುನಿಸಿ ಕೊಂಡಂತೆ ಇದೆ. ತಾವು ಅವಮಾನವನ್ನು ಸಹಿಸಲಾಗದೆ ಮುಖ್ಯಮಂತ್ರಿ ಹುದ್ದೆಯನ್ನು ತೊರೆಯುತ್ತಿರುವುದಾಗಿ ಹೇಳಿಕೊಂಡಿದ್ದ ಕ್ಯಾಪ್ಟನ್​, ಈಗ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಮಾತನಾಡಿದ್ದ ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಶ್ರೀನೇತ್​ ಮತ್ತು ಪಂಜಾಬ್​ ಕಾಂಗ್ರೆಸ್​ ಪ್ರದೇಶ ಸಮಿತಿ ಮುಖ್ಯಸ್ಥ ನವಜೋತ್​ ಸಿಂಗ್​ ಮತ್ತು ಇಡೀ ಗಾಂಧಿ ಕುಟುಂಬಕ್ಕೆ ತಿರುಗೇಟು ನೀಡಿದ್ದಾರೆ.

'ರಾಜಕಾರಣದಲ್ಲಿ ಸಿಟ್ಟಿಗೆ ಅವಕಾಶ ಇಲ್ಲ. ಕೋಪ ಮಾಡಿಕೊಂಡರೆ ನಡೆಯುವುದಿಲ್ಲ ಎಂಬುದು ನನಗೆ ಗೊತ್ತಿದೆ. ಆದರೆ ಕಾಂಗ್ರೆಸ್​​ನಂಥ ಹಳೆಯ ಮತ್ತು ದೊಡ್ಡ ಪಕ್ಷದಲ್ಲಿ ಅವಮಾನ, ಅಗೌರವಕ್ಕೆ ಅವಕಾಶ ಇದೆಯೇ? ನನ್ನಂಥ ಹಿರಿಯ ನಾಯಕನನ್ನು ಕಾಂಗ್ರೆಸ್​ ಹೀಗೆ ಅವಮಾನಯುತವಾಗಿ ನಡೆಸಿಕೊಳ್ಳಬಹುದೇ? ನನಗೇ ಹೀಗಾದರೆ, ಕಾರ್ಯಕರ್ತರು ಏನೆಲ್ಲ ಅನುಭವಿಸಬೇಕಾಗಬಹುದು' ಎಂದು ಇಡೀ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share

Continue Reading

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: AIN Live News
Top