BBMP ಮುಖ್ಯ ಆಯುಕ್ತಾರ ಗೌರವ್ ಗುಪ್ತಾ ಅವರು ನಗರದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ರು. ರಾಜರಾಜೇಶ್ವರಿ ನಗರ ವಲಯ ಮತ್ತು ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ವಿವಿಧ ಭಾಗಗಳಲ್ಲಿ ಮಳೆಯಿಂದ ಆದ ಅನಾಹುತ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ, ರಾಜಕಾಲುವೆ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾರ್ಯಗಳ ಪರಿಶೀಲನೆ ನಡೆಸಿದರು.
ಮೈಸೂರು ಹೆದ್ದಾರಿಯ ರಸ್ತೆ (ಬಿ.ಡಿ.ಎ ಸಂಕೀರ್ಣದ ಹತ್ತಿರ) ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ:
ರಾಜರಾಜೇಶ್ವರಿ ವಲಯ ಯಶವಂತಪುರ ವಿಧಾನಸಭಾ ಕ್ಷೇತ್ರ ಹೆಮ್ಮಿಗೆಪುರ ವಾಡ್೯- 198 ವ್ಯಾಪ್ತಿಯ ಮೈಸೂರು ಹೆದ್ದಾರಿ ರಸ್ತೆಯ ಬಿಡಿಎ ಸಂಕೀರ್ಣದ ಹತ್ತಿರ 19.20 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಯ ತಡೆಗೋಡೆ ನಿರ್ಮಾಣ ಹಾಗೂ ಕಲ್ವರ್ಟ್ ಮೂಲಕ ನೀರು ಸರಾಗವಾಗಿ ಹರಿಯುವ ಸಲುವಾಗಿ ಕಾಲುವೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಕಾಮಗಾರಿಯನ್ನು ಇನ್ನಷ್ಟು ಚುರುಕು ಗೊಳಿಸಿ ತ್ವರಿತವಾಗಿ ಕಲ್ವರ್ಟ್ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ವಲಯ ಆಯುಕ್ತರು, ವಿಶೇಷ ಆಯುಕ್ತರು(ಯೋಜನೆ) ಹಾಗೂ ಸಂಬಂಧಿಸಿದ ಮುಖ್ಯ ಅಭಿಯಂತರರು ರವರಿಗೆ ತಿಳಿಸಿದರು.
ವಾಡ್೯-160 ರ ಅಕ್ಕಮಹಾದೇವಿ ಕಲ್ಯಾಣ ಮಂಟಪದ ಹಿಂಭಾಗದ ಪ್ರದೇಶ ಪರಿಶೀಲನೆ:
ರಾಜರಾಜೇಶ್ವರಿ ವಾಡ್ ೯ - 160 ವ್ಯಾಪ್ತಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದ ಹಿಂಭಾಗದ ಇತ್ತೀಚಿನ ಮಳೆಯಲ್ಲಿ ಜಾನುವಾರುಗಳು ಕೊಚ್ಚಿ ಹೋಗಿದ್ದ ಪ್ರದೇಶದಲ್ಲಿನ ರಾಜಕಾಲುವೆಗೆ ಮತ್ತೆ ಯಾವುದೇ ರೀತಿ ತೊಂದರೆಯಾಗದ ಹಾಗೆ ತಡೆಗೋಡೆ ನಿರ್ಮಾಣ ಕೈಗೊಳ್ಳಲು ಶೀಘ್ರವಾಗಿ ಟೆಂಡರ್ ಕರೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಾಡ್೯-160ರ ಪ್ರಮೋದ ಬಡಾವಣೆ ಪರಿಶೀಲನೆ
ವಾಡ್೯ -160ರ ವ್ಯಾಪ್ತಿಯ ಪ್ರಮೋದ ಬಡಾವಣೆಯಲ್ಲಿ ಮಳೆಯಿಂದ ಅಕ್ಕಪಕ್ಕದ ಪ್ರದೇಶಗಳಲ್ಲಿ ನ ಬಡಾವಣೆಯ ಮನೆಗಳಿಗೆ ನೀರು ಹರಿದು ಸಾಕಷ್ಟು ಹಾನಿ ಆಗಿದ್ದು, ಸದರಿ ಬಡಾವಣೆಯಲ್ಲಿರುವ ರಾಜಕಾಲುವೆಗೆ ಶೀಘ್ರವಾಗಿ ತಡೆಗೋಡೆ ನಿರ್ಮಿಸುವ ಸಲುವಾಗಿ ಟೆಂಡರ್ ಕರೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸಂಭಂದಿಸಿದ ಅಧಿಕಾರಿಗಳಿಗೆ ಆದೇಶಿಸಿದರು.
ದಕ್ಷಿಣ ವಲಯದ ವಾಡ್೯-165ರ ರಾಜಕಾಲುವೆ ಪರಿಶೀಲನೆ
ದಕ್ಷಿಣ ವಲಯ ಪದ್ಮನಾಭ ನಗರ ವಿಧಾನ ಸಭಾ ಕ್ಷೇತ್ರ ಗಣೇಶ ಮಂದಿರ ವಾಡ್೯- 165 ವ್ಯಾಪ್ತಿಯಲ್ಲಿ ರಾಜಕಾಲುವೆ ಪರಿಶೀಲನೆ ನಡೆಸಿ ಸದರಿ ರಾಜಕಾಲುವೆಯಲ್ಲಿ ಅನುಪಯುಕ್ತ ವಸ್ತುಗಳು ಸೇರ್ಪಡೆಗೊಂಡು ನೀರು ಸರಾಗವಾಗಿ ಹರಿಯದೆ ನೀರು ಕಲ್ಮಷಗೊಂಡು ಅಕ್ಕ ಪಕ್ಕದ ಪ್ರದೇಶದಲ್ಲಿ ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ, ಕೂಡಲೇ ಸದರಿ ರಾಜಕಾಲುವೆಯಲ್ಲಿ ಶೇಖರಣೆಗೊಂಡಿರುವ ಅನುಪಯುಕ್ತ ವಸ್ತುಗಳನ್ನು ಶೀಘ್ರವಾಗಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ 2-3 ದಿನದ ಒಳಗಾಗಿ ಕ್ರಮ ಕೈಗೊಂಡು ವರದಿ ನೀಡುವಂತೆ ಬೃಹತ್ ನೀರುಗಾಲುವೆಯ ಮುಖ್ಯ ಅಭಿಯಂತರರು ರವರಿಗೆ ಸೂಚಿಸಿದರು.
ಜಯದೇವ ಆಸ್ಪತ್ರೆ ಜಂಕ್ಷನ್ ನ ಸುತ್ತ ಮುತ್ತ ಪ್ರದೇಶದಲ್ಲಿ ಪರಿಶೀಲನೆ:
ದಕ್ಷಿಣ ವಲಯದ ವ್ಯಾಪ್ತಿಯಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಜಂಕ್ಷನ್ ಸುತ್ತ ಮುತ್ತ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಸುರಿದ ಮಳೆಯಿಂದಾಗಿ ರಸ್ತೆ ಗಳು ಮತ್ತಷ್ಟು ಹಾಳಾಗಿದ್ದು ರಸ್ತೆ ಗುಂಡಿ ಮುಚ್ಚುವ ಕಾರ್ಯಗಳನ್ನು ಮತ್ತಷ್ಟು ಚುರುಕಾಗಿ ಕೈಗೆತ್ತಿಕೊಳ್ಳುವಂತೆ ವಲಯ ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರುಗಳಿಗೆ ಸೂಚನೆ ನೀಡಿದರು.
Share
Continue Reading

