Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರಿನಲ್ಲಿ ಭಾರೀ ಡ್ರಗ್ ಜಾಲ ಪತ್ತೆ: ಪೆಡ್ಲರ್ ಮನೆಯಲ್ಲಿ 7 ಲಾಂಗು, 230 ಮೊಬೈಲ್ ಜಪ್ತಿ

ಬೆಂಗಳೂರಿನಲ್ಲಿ ಭಾರೀ ಡ್ರಗ್ ಜಾಲ ಪತ್ತೆ: ಪೆಡ್ಲರ್ ಮನೆಯಲ್ಲಿ 7 ಲಾಂಗು, 230 ಮೊಬೈಲ್ ಜಪ್ತಿ

AIN Kannada 1 week ago

ಬೆಂಗಳೂರು: ಡ್ರಗ್ ಪೆಡ್ಲರ್‌ನನ್ನು ಬಂಧಿಸಲು ತೆರಳಿದ್ದ ಬ್ಯಾಟರಾಯನಪುರ ಪೊಲೀಸರಿಗೆ ದಿಢೀರ್ ಶಾಕ್ ಎದುರಾಗಿರುವ ಘಟನೆ ನಡೆದಿದೆ. ಆರೋಪಿ ಮನೆಯ ಮೇಲೆ ದಾಳಿ ನಡೆಸಿದ ವೇಳೆ 17 ಮಾರಕಾಸ್ತ್ರಗಳು, 230 ಕಳವು ಮೊಬೈಲ್‌ಗಳು ಹಾಗೂ ಸುಮಾರು 600-700 ಗ್ರಾಂ ಗಾಂಜಾ ಪತ್ತೆಯಾಗಿದೆ.

ಜುಲೈ 1ರಂದು ರಾತ್ರಿ ಸುಮಾರು 10.50ಕ್ಕೆ ಬ್ಯಾಟರಾಯನಪುರ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 37 ವರ್ಷದ ಅಕ್ಬರ್ ಶರೀಫ್‌ನನ್ನು ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆತನ ಮನೆ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಈ ವೇಳೆ ಮನೆಯ ವಿವಿಧ ಭಾಗಗಳಲ್ಲಿ 17 ಲಾಂಗ್ ಹಾಗೂ ಮಚ್ಚು ಸೇರಿದಂತೆ ಹಲವು ಮಾರಕಾಸ್ತ್ರಗಳು ಪತ್ತೆಯಾಗಿವೆ. ಜೊತೆಗೆ 230 ಕಳವು ಮೊಬೈಲ್‌ಗಳು ಹಾಗೂ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯಲ್ಲಿ ಅಕ್ಬರ್ ಶರೀಫ್ ಹಲವು ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಎಂಬುದು ಬೆಳಕಿಗೆ ಬಂದಿದೆ. ಮತ್ತೊಂದು ಅಚ್ಚರಿಯ ಸಂಗತಿ ಎಂದರೆ, ಆತನ ತಾಯಿ ಮೆಹರ್ ಉನ್ನಿಸಾ ಕೂಡ ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದು, 2024ರಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ತಾಯಿ ಬಂಧನದ ಬಳಿಕ ಅವರ ಡ್ರಗ್ಸ್ ಜಾಲವನ್ನು ಅಕ್ಬರ್ ನಿರ್ವಹಿಸುತ್ತಿದ್ದಾನೆ ಎಂದು ಶಂಕಿಸಲಾಗಿದ್ದು, ಬ್ಯಾಟರಾಯನಪುರ ರೈಲ್ವೆ ಹಳಿ ಸುತ್ತಮುತ್ತ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡ್ರಗ್ಸ್ ಜಾಲದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News