Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು-ಮಂಗಳೂರು AQI ಸುಧಾರಣೆ: ಆದರೆ ಇನ್ನೂ ಆರೋಗ್ಯ ಆತಂಕ

ಬೆಂಗಳೂರು-ಮಂಗಳೂರು AQI ಸುಧಾರಣೆ: ಆದರೆ ಇನ್ನೂ ಆರೋಗ್ಯ ಆತಂಕ

AIN Kannada 3 weeks ago

ಬೆಂಗಳೂರು, ಮೇ 07: ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಇಂದು ವಾಯು ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಕೆಲ ನಗರಗಳಲ್ಲಿ ಇನ್ನೂ ಆರೋಗ್ಯದ ಮೇಲೆ ಪರಿಣಾಮ ಬೀರುವ ಮಟ್ಟದಲ್ಲಿ ಏರ್ ಕ್ವಾಲಿಟಿ ಉಳಿದಿದೆ ಎಂಬ ಆತಂಕವೂ ವ್ಯಕ್ತವಾಗಿದೆ.

ಬೆಂಗಳೂರು ನಗರದಲ್ಲಿ ಇಂದಿನ ಏರ್ ಕ್ವಾಲಿಟಿ ಇಂಡೆಕ್ಸ್ (AQI) 122ಕ್ಕೆ ದಾಖಲಾಗಿದ್ದು, ಹಿಂದಿನ ದಿನಗಳಿಗೆ ಹೋಲಿಸಿದರೆ ಸುಧಾರಣೆ ಕಂಡಿದ್ದರೂ, ಇದು ಇನ್ನೂ "ಅನಾರೋಗ್ಯಕರ" ಮಟ್ಟದಲ್ಲಿಯೇ ಇದೆ ಎಂದು ಪರಿಸರ ತಜ್ಞರು ಹೇಳಿದ್ದಾರೆ.

ಇದಕ್ಕು ಪಕ್ಕವಾಗಿ ಮಂಗಳೂರು ನಗರದಲ್ಲಿ ಗಾಳಿಯ ಗುಣಮಟ್ಟ ಭಾರೀ ಸುಧಾರಣೆ ಕಂಡಿದ್ದು, ಇಂದಿನ AQI 63ಕ್ಕೆ ಇಳಿದಿದೆ. ಕೆಲ ತಿಂಗಳ ಹಿಂದೆ 200ಕ್ಕೂ ಹೆಚ್ಚು ಮಟ್ಟ ತಲುಪಿದ್ದ ಮಂಗಳೂರು ವಾಯು ಗುಣಮಟ್ಟ ಈಗ ಉತ್ತಮ ಸ್ಥಿತಿಗೆ ಮರಳಿರುವುದು ಗಮನಾರ್ಹವಾಗಿದೆ.

ರಾಜ್ಯದ ಇತರ ನಗರಗಳ ಇಂದಿನ AQI ಸ್ಥಿತಿ ಹೀಗಿದೆ:

ಬೆಂಗಳೂರು - 122
ಮಂಗಳೂರು - 63
ಮೈಸೂರು - 82
ಬೆಳಗಾವಿ - 62
ಕಲಬುರ್ಗಿ - 64
ಶಿವಮೊಗ್ಗ - 66
ಬಳ್ಳಾರಿ - 86
ಹುಬ್ಬಳ್ಳಿ - 87
ಉಡುಪಿ - 64
ವಿಜಯಪುರ - 67

ತಜ್ಞರ ಪ್ರಕಾರ, ಕೆಲವು ನಗರಗಳಲ್ಲಿ ಸುಧಾರಣೆ ಕಂಡಿದ್ದರೂ WHO ಮಾನದಂಡಗಳ ಪ್ರಕಾರ ಇನ್ನೂ ಹಲವು ಪ್ರದೇಶಗಳ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ. ಜನರು ಮಾಸ್ಕ್ ಬಳಕೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News