Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದ 58 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ! ಕಾರಣ ಏನು ಗೊತ್ತಾ?

ಭಾರತದ 58 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ! ಕಾರಣ ಏನು ಗೊತ್ತಾ?

AIN Kannada 1 week ago

ವದೆಹಲಿ: ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಭಾರಿ ಕುಸಿತ ಹಾಗೂ ಅಗತ್ಯ ಶೈಕ್ಷಣಿಕ ಮತ್ತು ಮೂಲಸೌಕರ್ಯ ಮಾನದಂಡಗಳನ್ನು ಪೂರೈಸದ ಹಿನ್ನೆಲೆಯಲ್ಲಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE) 2025-26ನೇ ಶೈಕ್ಷಣಿಕ ಸಾಲಿನಲ್ಲಿ ದೇಶಾದ್ಯಂತ 58 ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹಂತ ಹಂತವಾಗಿ ಮುಚ್ಚಲು ಅನುಮತಿ ನೀಡಿದೆ.

ಈ ನಿರ್ಧಾರದಿಂದ ಪಟ್ಟಿಯಲ್ಲಿರುವ ಕಾಲೇಜುಗಳು 2025-26ನೇ ಸಾಲಿನಿಂದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತಿಲ್ಲ. ಆದರೆ ಈಗಾಗಲೇ ಈ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಪೂರ್ಣಗೊಳಿಸುವವರೆಗೆ ಕಾಲೇಜುಗಳು ಕಾರ್ಯನಿರ್ವಹಿಸಲಿವೆ ಎಂದು AICTE ಸ್ಪಷ್ಟಪಡಿಸಿದೆ.

ಈ ಕ್ರಮವನ್ನು 'ಪ್ರೋಗ್ರೆಸ್ಸಿವ್ ಕ್ಲೋಸರ್' ಎಂದು ಕರೆಯಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಂತ ಹಂತವಾಗಿ ಕಾಲೇಜುಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುತ್ತಿದೆ.

ಕಾಲೇಜುಗಳು ಮುಚ್ಚಲು ಕಾರಣವೇನು?

AICTE ಪ್ರಕಾರ, ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಕಡಿಮೆಯಾಗಿರುವುದು, ಕೆಲವು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಬೇಡಿಕೆ ಕುಸಿದಿರುವುದು, ಅರ್ಹ ಉಪನ್ಯಾಸಕರ ಕೊರತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಅಭಾವ ಪ್ರಮುಖ ಕಾರಣಗಳಾಗಿವೆ.

ತಾಂತ್ರಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ, ನಿಯಮಗಳನ್ನು ಪೂರೈಸದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಕರ್ನಾಟಕದ 2 ಕಾಲೇಜುಗಳು ಪಟ್ಟಿಯಲ್ಲಿ:

ರಾಜ್ಯವಾರು ಪಟ್ಟಿಯಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕಾಲೇಜುಗಳು ಮುಚ್ಚುವ ಪಟ್ಟಿಯಲ್ಲಿವೆ. ಎರಡೂ ರಾಜ್ಯಗಳಲ್ಲಿ ತಲಾ 12 ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.

ಇನ್ನು ಕರ್ನಾಟಕದಲ್ಲಿ 2 ಎಂಜಿನಿಯರಿಂಗ್ ಕಾಲೇಜುಗಳು ಈ ಪಟ್ಟಿಯಲ್ಲಿವೆ.

ರಾಜ್ಯವಾರು ವಿವರ:

  • ಉತ್ತರ ಪ್ರದೇಶ - 12
  • ಮಹಾರಾಷ್ಟ್ರ - 12
  • ಮಧ್ಯಪ್ರದೇಶ - 8
  • ತೆಲಂಗಾಣ - 4
  • ಪಂಜಾಬ್ - 4
  • ಆಂಧ್ರಪ್ರದೇಶ - 3
  • ರಾಜಸ್ಥಾನ - 3
  • ಗುಜರಾತ್ - 2
  • ಕರ್ನಾಟಕ - 2
  • ತಮಿಳುನಾಡು - 2
  • ಹರಿಯಾಣ - 2
  • ಒಡಿಶಾ - 2
  • ಉತ್ತರಾಖಂಡ - 2
  • ಪಶ್ಚಿಮ ಬಂಗಾಳ - 2
  • ಪುದುಚೇರಿ - 1

ಖಾಸಗಿ ಕಾಲೇಜುಗಳಿಗೆ ದೊಡ್ಡ ಸವಾಲು

ಮುಚ್ಚುವ ಪಟ್ಟಿಯಲ್ಲಿರುವ 58 ಸಂಸ್ಥೆಗಳಲ್ಲಿ ಕೇವಲ 3 ಸರ್ಕಾರಿ ಅನುದಾನಿತ ಕಾಲೇಜುಗಳಾಗಿದ್ದು, ಉಳಿದ ಬಹುತೇಕ ಸಂಸ್ಥೆಗಳು ಖಾಸಗಿ ಆಡಳಿತದ ಅಡಿಯಲ್ಲಿವೆ.

ವಿದ್ಯಾರ್ಥಿಗಳ ಕೊರತೆ, ಹೆಚ್ಚುತ್ತಿರುವ ನಿಯಮಗಳು ಹಾಗೂ ಗುಣಮಟ್ಟದ ಮಾನದಂಡಗಳನ್ನು ಪೂರೈಸುವ ಸವಾಲುಗಳಿಂದ ಹಲವು ಖಾಸಗಿ ತಾಂತ್ರಿಕ ಸಂಸ್ಥೆಗಳು ಸಂಕಷ್ಟ ಎದುರಿಸುತ್ತಿವೆ.

AICTE ಕಾಲೇಜುಗಳ ಬೋಧನಾ ಸಿಬ್ಬಂದಿ, ಮೂಲಸೌಕರ್ಯ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುತ್ತದೆ. ಮಾನದಂಡಗಳನ್ನು ನಿರಂತರವಾಗಿ ಪೂರೈಸದ ಸಂಸ್ಥೆಗಳ ವಿರುದ್ಧ ಇಂತಹ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News