Dailyhunt Logo
  • Light mode
    Follow system
    Dark mode
    • Play Story
    • App Story
'ಡಾನ್ 3' ಬಿಟ್ಟ ರಣ್ವೀರ್‌ಗೆ ಇಂಡಸ್ಟ್ರಿ ಶಾಕ್: ಅಸಹಕಾರ ಘೋಷಿಸಿದ ಸಿನಿ ಫೆಡರೇಷನ್!

'ಡಾನ್ 3' ಬಿಟ್ಟ ರಣ್ವೀರ್‌ಗೆ ಇಂಡಸ್ಟ್ರಿ ಶಾಕ್: ಅಸಹಕಾರ ಘೋಷಿಸಿದ ಸಿನಿ ಫೆಡರೇಷನ್!

AIN Kannada 2 weeks ago

'ಧುರಂಧರ್' ಮತ್ತು 'ಧುರಂಧರ್ 2' ಸಿನಿಮಾಗಳ ಮೂಲಕ ಭಾರೀ ಯಶಸ್ಸು ಕಂಡಿದ್ದ ಬಾಲಿವುಡ್ ನಟ ರಣ್ವೀರ್ ಸಿಂಗ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. 'ಡಾನ್ 3' ಸಿನಿಮಾದಿಂದ ಹೊರಬಂದಿದ್ದಕ್ಕೆ ಫೆಡರೇಷನ್ ಆಫ್ ಇಂಡಿಯನ್ ಸಿನಿ ಎಂಪ್ಲಾಯಿಸ್ (FWICE) ಇದೀಗ ರಣ್ವೀರ್ ವಿರುದ್ಧ ಅಸಹಕಾರ ಘೋಷಿಸಿದೆ.

ರಣ್ವೀರ್ ಸಿಂಗ್ ನಟಿಸುವ ಯಾವುದೇ ಸಿನಿಮಾದಲ್ಲಿ ಕೆಲಸ ಮಾಡುವುದಿಲ್ಲ ಎಂದು ಫೆಡರೇಷನ್ ಹೇಳಿರುವುದು ಬಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. 'ಡಾನ್ 3' ಸಿನಿಮಾದಿಂದ ಅವರು ಹೊರಬಂದಿದ್ದೇ ಈ ಬೆಳವಣಿಗೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಆದರೆ ರಣ್ವೀರ್ ಸಿಂಗ್ ನಟಿಸಬೇಕಿದ್ದ ಸಿನಿಮಾ ನಿಂತು ಹೋಗಿರುವುದು ಇದೇ ಮೊದಲಲ್ಲ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಘೋಷಣೆಯಾಗಿದ್ದ 'ಬೈಜು ಬವರಾ' ಸಿನಿಮಾ ಆರಂಭವಾಗುವ ಮುನ್ನವೇ ಕೈಬಿಟ್ಟಿತ್ತು.

ಇದೇ ರೀತಿ ಕರಣ್ ಜೋಹರ್ ನಿರ್ಮಾಣದ 'ತಕ್ತ್' ಸಿನಿಮಾ ಕೂಡ ಸೆಟ್ಟೇರಲಿಲ್ಲ. ತಮಿಳಿನ ನಿರ್ದೇಶಕ ಶಂಕರ್ ಜೊತೆ 'ಅನ್ನಿಯನ್' ರೀಮೇಕ್ ಯೋಜನೆಯೂ ಮಧ್ಯದಲ್ಲೇ ನಿಂತುಹೋಯಿತು.

ತೆಲುಗಿನ ನಿರ್ದೇಶಕ ಪ್ರಶಾಂತ್ ವರ್ಮಾ ಜೊತೆ ರಣ್ವೀರ್ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಬಳಿಕ ಆ ಪ್ರಾಜೆಕ್ಟ್‌ನಿಂದ ಹಿಂದೆ ಸರಿದಿದ್ದರು. ಈಗ ಅದೇ ಕಥೆಯನ್ನು 'ಜೈ ಹನುಮಾನ್' ಹೆಸರಿನಲ್ಲಿ ರಿಷಬ್ ಶೆಟ್ಟಿಗಾಗಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ.

ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್ ಕೂಡ ರಣ್ವೀರ್‌ಗಾಗಿ 'ಶಕ್ತಿಮಾನ್' ಸಿನಿಮಾ ರೂಪಿಸಲು ಯತ್ನಿಸಿದ್ದರು. ಆದರೆ ಹಲವು ಚರ್ಚೆಗಳ ಬಳಿಕ ರಣ್ವೀರ್ ಆ ಸಿನಿಮಾಗೂ ನೋ ಹೇಳಿದ್ದರು.

ಈಗ 'ಡಾನ್ 3' ವಿಚಾರ ಮಾತ್ರ ರಣ್ವೀರ್ ಸಿಂಗ್ ಅವರನ್ನು ದೊಡ್ಡ ವಿವಾದಕ್ಕೆ ಸಿಲುಕಿಸಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದರ ಬಗ್ಗೆ ಬಾಲಿವುಡ್‌ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News