Dailyhunt Logo
  • Light mode
    Follow system
    Dark mode
    • Play Story
    • App Story
ದೇಶದಲ್ಲೇ ಮೊದಲ ಬಾರಿ ಎಐ ಮೂಲಕ ಕನ್ನಡಕ್ಕೆ ಬಂದ ಐತಿಹಾಸಿಕ ಕೃತಿ

ದೇಶದಲ್ಲೇ ಮೊದಲ ಬಾರಿ ಎಐ ಮೂಲಕ ಕನ್ನಡಕ್ಕೆ ಬಂದ ಐತಿಹಾಸಿಕ ಕೃತಿ

AIN Kannada 4 months ago

ಮೈಸೂರು: ಸಂಸ್ಕೃತಿ ಮತ್ತು ತಂತ್ರಜ್ಞಾನದ ಅಪೂರ್ವ ಸಂಗಮಕ್ಕೆ ಮೈಸೂರು ಸಾಕ್ಷಿಯಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಗೊಂಡಿರುವ ಇತಿಹಾಸಾಧಾರಿತ ಕೃತಿ ಇದೀಗ ಬಿಡುಗಡೆಗೆ ಸಜ್ಜಾಗಿದೆ.

ಖ್ಯಾತ ಇತಿಹಾಸಕಾರ ವಿಕ್ರಮ್ ಸಂಪತ್ ರಚಿಸಿರುವ ಆಂಗ್ಲ ಪುಸ್ತಕ 'My Name Is Gauhar Jaan: The Life and Times of a Musician' ಈಗ ಕನ್ನಡ ಓದುಗರಿಗೆ ಲಭ್ಯವಾಗುತ್ತಿದೆ. ಈ ಕೃತಿಯನ್ನು ಅತ್ಯಾಧುನಿಕ ಎಐ ತಂತ್ರಜ್ಞಾನದ ಮೂಲಕ ಕನ್ನಡಕ್ಕೆ ಅನುವಾದಿಸಲಾಗಿದ್ದು, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಸಂಸ್ಥೆ ಅಭಿವೃದ್ಧಿಪಡಿಸಿರುವ 'TransLit' ತಂತ್ರಜ್ಞಾನ ಈ ಅನುವಾದ ಕಾರ್ಯವನ್ನು ಕೇವಲ 3 ರಿಂದ 4 ವಾರಗಳಲ್ಲಿ ಪೂರ್ಣಗೊಳಿಸಿದೆ. ಸಾಮಾನ್ಯವಾಗಿ ಇಂತಹ ಕೃತಿಗಳ ಭಾಷಾಂತರಕ್ಕೆ ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಆದರೆ ಎಐ ತಂತ್ರಜ್ಞಾನ ಶೇಕಡಾ 80 ರಷ್ಟು ನಿಖರತೆಯೊಂದಿಗೆ ಕೆಲಸ ಮುಗಿಸಿದ್ದು, ನಂತರ ಮಾನವ ಸಂಪಾದಕರು ಪ್ರೂಫ್‌ರೀಡಿಂಗ್ ಮತ್ತು ಎಡಿಟಿಂಗ್ ಕಾರ್ಯ ಮಾಡಿದ್ದಾರೆ.

ಮೂಲ ಕೃತಿಯ ಸಾಹಿತ್ಯಿಕ ಶೈಲಿ ಮತ್ತು ಭಾವನಾತ್ಮಕ ಗುಣಮಟ್ಟವನ್ನು ಸಹಜವಾಗಿಯೇ ಉಳಿಸಿಕೊಳ್ಳಲಾಗಿದೆ ಎಂದು ಲೇಖಕ ವಿಕ್ರಮ್ ಸಂಪತ್ ತಿಳಿಸಿದ್ದಾರೆ.

ಈ ಕೃತಿ ಭಾರತದ ಮೊದಲ ಗ್ರಾಮೊಫೋನ್ ರೆಕಾರ್ಡಿಂಗ್ ಕಲಾವಿದೆ ಗೌಹರ್ ಜಾನ್ ಅವರ ಜೀವನಾಧಾರಿತವಾಗಿದೆ. 1902ರಲ್ಲಿ ಭಾರತದಲ್ಲೇ ಮೊದಲ ಬಾರಿಗೆ ತಮ್ಮ ಧ್ವನಿಯನ್ನು ಗ್ರಾಮೊಫೋನ್‌ನಲ್ಲಿ ಮುದ್ರಿಸಿದ ಮಹಿಳೆ ಎಂಬ ಹೆಗ್ಗಳಿಕೆ ಗೌಹರ್ ಜಾನ್ ಅವರದ್ದು.

ಜೀವನದ ಕೊನೆಯ ದಿನಗಳಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಆಶ್ರಯ ನೀಡಿದ್ದ ಗೌಹರ್ ಜಾನ್, 1930ರಲ್ಲಿ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಇದೀಗ ಅವರ ಜೀವನ ಕಥೆ ಎಐ ತಂತ್ರಜ್ಞಾನದ ಮೂಲಕ ಕನ್ನಡದಲ್ಲಿ ಓದುಗರ ಮುಂದೆ ಬರುತ್ತಿರುವುದು ವಿಶೇಷ ಚರ್ಚೆಗೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News