ಬೆಂಗಳೂರು ನಗರ
ದೊಡ್ಡವರ ಮಕ್ಕಳ ವೀಕೆಂಡ್ ಮಸ್ತಿ: ಜನರಿಗೆ ತೊಂದರೆಯಾದ್ರೂ ಇವರು ಆಡಿದ್ದೆ ಆಟ, ವಿಡಿಯೋ ನೋಡಿ
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ದೊಡ್ಡವರ ಮಕ್ಕಳ ವೀಕೆಂಡ್ ಮೋಜು, ಮಸ್ತಿ ಇನ್ನೂ ನಿಂತೇ ಇಲ್ಲ. ಬದಲಿಗೆ ಎಷ್ಟೇ ಅನಾಹುತಗಳಾದರೂ ನಗರದ ಹೈಫೈ ಏರಿಯಾಗಳಲ್ಲಿ ವೀಕೆಂಡ್ ಪಾರ್ಟಿ ಮಾಡಲಾಗುತ್ತಿದೆ.
ಅಲ್ಲದೇ ಮಸ್ತಿ ಮಾಡಿಕೊಂಡು ಐಷಾರಾಮಿ ಕಾರುಗಳಲ್ಲಿ ಪುಂಡಾಟ ಮೆರೆಯಲಾಗುತ್ತಿದೆ. ಮರ್ಸಿಡಿಸ್ ಬೆಂಜ್ ಕಾರ್ನಲ್ಲಿ ಯುವಕ-ಯುವತಿಯರು ಪುಂಡಾಟ ಮೆರೆದಿದ್ದಾರೆ. ಕೆಎ-04 ಎಂವೈ-0450 ನಂಬರ್ನ ಮರ್ಸಿಡಿಸ್ ಬೆಂಜ್ ಕಾರು ಇದಾಗಿದೆ. ಕಾರಿನ ಎರಡು ಕಡೆ ಡೋರ್, ರೂಫ್ ಟಾಪ್ ಓಪನ್ ಮಾಡಿಕೊಂಡು ಬಿಂದಾಸ್ ಆಗಿ ಸುತ್ತಾಡಿದ್ದಾರೆ. ಭಾರೀ ಮ್ಯೂಸಿಕ್ ಹಾಕಿಕೊಂಡು ಮೂವಿಂಗ್ ಕಾರ್ನಲ್ಲೇ ಡ್ಯಾನ್ಸ್ ಮಾಡಿದ್ದಾರೆ. ರೆಸಿಡೆನ್ಶಿಯಲ್ ಏರಿಯಾದಲ್ಲಿ ರ್ಯಾಷ್ ಆಗಿ ಡ್ರೈವಿಂಗ್ ಮಾಡಿ ಸುತ್ತಾಟ ನಡೆಸಿದ್ದಾರೆ. ಪೊಲೀಸರ ಎದುರು ತಿರುಗಾಡಿದ್ದರು ಕೂಡಾ ಅವರು ಫುಲ್ ಸೈಲೆಂಟ್ ಆಗಿದ್ದಾರೆ.
ಅಲ್ಲದೇ ಕೋರಮಂಗಲ ಅಪಘಾತದ ಬಳಿಕವೂ ವೀಕೆಂಡ್ ಪಾರ್ಟಿ ಹುಚ್ಚಾಟ ಮುಂದುವರಿದಿದೆ. ಸದಾಶಿವನಗರದಲ್ಲಿ ಮೋಜು, ಮಸ್ತಿ ಮಾಡಿದರೂ ಕೇಳೋರು ದಿಕ್ಕಿಲ್ಲದಂತಾಗಿದೆ. ದೊಡ್ಡವರ ಮಕ್ಕಳು ಎಂದು ಪೊಲೀಸರು ಸೈಲೆಂಟ್ ಆಗಿದ್ದಾರೆ. ಸಾಮಾನ್ಯ ಜನರಿಗೊಂದು, ದೊಡ್ಡವರ ಮಕ್ಕಳಿಗೊಂದು ಕಾನೂನಾ? ಎಂಬ ಪ್ರಶ್ನೆ ಶುರುವಾಗಿದೆ.
Share
Continue Reading