Dailyhunt
ಗಿಲ್ ಔಟ್ ಆಗುತ್ತಿದ್ದಂತೆ ವಿರಾಟ್ ವಿಚಿತ್ರ ಸೆಲೆಬ್ರೇಷನ್; ಕಿಂಗ್ ಕೊಹ್ಲಿ ನಡೆಗೆ ವ್ಯಾಪಕ ವಿರೋಧ!

ಗಿಲ್ ಔಟ್ ಆಗುತ್ತಿದ್ದಂತೆ ವಿರಾಟ್ ವಿಚಿತ್ರ ಸೆಲೆಬ್ರೇಷನ್; ಕಿಂಗ್ ಕೊಹ್ಲಿ ನಡೆಗೆ ವ್ಯಾಪಕ ವಿರೋಧ!

AIN Kannada 1 week ago

ಪಿಎಲ್ 2026ರ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಸೋಲು ಎದುರಾಗಿದ್ದು, ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿದ್ದು, ಪರಿಣಾಮ ಜಿಟಿ ಸುಲಭವಾಗಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತು.

ಆದರೆ ಪಂದ್ಯದಲ್ಲಿ ಒಂದು ವಿಚಿತ್ರ ಘಟನೆ ಕೂಡ ಗಮನಸೆಳೆದಿತು. ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ ವಿವಾದಕ್ಕೆ ಕಾರಣವಾದರೆ, ವಿರಾಟ್ ಕೊಹ್ಲಿ ಅವರ ಸೆಲೆಬ್ರೇಷನ್ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಗುಜರಾತ್ ಟೈಟಾನ್ಸ್ ಪರ ಶುಭ್‌ಮನ್ ಗಿಲ್ ಸ್ಫೋಟಕ ಆರಂಭ ನೀಡುತ್ತಿದ್ದ ವೇಳೆ, ಭುವನೇಶ್ವರ್ ಕುಮಾರ್ ಎಸೆತದಲ್ಲಿ ಗಿಲ್ ಕ್ಯಾಚ್ ನೀಡಿದರು. ಈ ವೇಳೆ ಕವರ್‌ನಲ್ಲಿ ಕ್ಯಾಚ್ ಹಿಡಿದ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದ್ದು, ಕೆಲ ಕ್ಷಣ ಗಿಲ್ ಕಡೆ ತೀವ್ರವಾಗಿ ನೋಡುವುದು ಹಾಗೂ ಚೆಂಡನ್ನು ನೆಲಕ್ಕೆ ಹೊಡೆದು ಸಂಭ್ರಮಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಶಾಂತ ಸ್ವಭಾವದ ಆಟಗಾರನಾಗಿ ಕಾಣಿಸಿಕೊಂಡಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಮತ್ತೆ ಹಳೆಯ ಆಕ್ರಮಣಶೀಲತೆಯನ್ನು ಪ್ರದರ್ಶಿಸಿದಂತೆ ಕಂಡಿತು. ದೇಶೀಯ ಪಂದ್ಯದಲ್ಲಿ ಭಾರತೀಯ ಆಟಗಾರ ಔಟಾದಾಗ ಈ ರೀತಿಯ ವರ್ತನೆ ಸರಿಯಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನೊಂದೆಡೆ, ಈ ಸೋಲಿನ ನಡುವೆಯೂ ಆರ್‌ಸಿಬಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಒಂಬತ್ತು ಪಂದ್ಯಗಳಲ್ಲಿ ಆರು ಗೆಲುವು ಮತ್ತು ಮೂರು ಸೋಲು ಕಂಡಿರುವ ತಂಡ +1.420 ರ ಉತ್ತಮ ನೆಟ್ ರನ್ ರೇಟ್ ಹೊಂದಿದೆ.

ಗುಜರಾತ್ ಟೈಟಾನ್ಸ್ ತಂಡ ಈ ಗೆಲುವಿನೊಂದಿಗೆ 10 ಅಂಕಗಳನ್ನು ಸಂಪಾದಿಸಿದ್ದು, ಐದು ಗೆಲುವುಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯಗಳಲ್ಲಿ ರನ್ ರೇಟ್ ಸುಧಾರಣೆ ಮೂಲಕ ಅಗ್ರ ನಾಲ್ಕರ ಪೈಕಿ ಸ್ಥಾನ ಪಡೆಯಲು ತಂಡ ಪ್ರಯತ್ನಿಸಲಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News