Dailyhunt
ಗ್ಲಾಮರಸ್ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್‌ ಕೊಟ್ಟ ರಶ್ಮಿಕಾ ಮಂದಣ್ಣ

ಗ್ಲಾಮರಸ್ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್‌ ಕೊಟ್ಟ ರಶ್ಮಿಕಾ ಮಂದಣ್ಣ

AIN Kannada 4 days ago

ಬಾಲಿವುಡ್‌ನ ಬಹುನಿರೀಕ್ಷಿತ 'ಕಾಕ್ಟೇಲ್ 2' ಸಿನಿಮಾ ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಹೊಸ ಪೋಸ್ಟರ್‌ಗಳ ಬಿಡುಗಡೆಯೊಂದಿಗೆ ಚಿತ್ರದ ಹೈಪ್ ಇನ್ನಷ್ಟು ಗಗನಕ್ಕೇರಿದ್ದು, ವಿಶೇಷವಾಗಿ ರಶ್ಮಿಕಾ ಮಂದಣ್ಣ ಅವರ ಗ್ಲಾಮರಸ್ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

ದಕ್ಷಿಣದಿಂದ ಬಾಲಿವುಡ್ ವರೆಗೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡಿರುವ ರಶ್ಮಿಕಾ, ಈ ಸಿನಿಮಾದಲ್ಲಿ ಸಂಪೂರ್ಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್, ಸ್ಟೈಲ್ ಮತ್ತು ಅಟಿಟ್ಯೂಡ್-all in one ಆಗಿ ಅವರು ಪೋಸ್ಟರ್‌ಗಳಲ್ಲಿ ಮಿಂಚಿದ್ದಾರೆ.

ಇನ್ನೊಂದೆಡೆ, ಕೃತಿ ಸನನ್ ಕೂಡ ಈ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಡ್ಡೆ ಹುಡುಗರ ಹೃದಯ ಕದ್ದುಕೊಳ್ಳುವಂತೆ ಕೃತಿ ಕಾಣಿಸಿಕೊಂಡಿರುವುದು ಚಿತ್ರದ ಗ್ಲಾಮರ್ ಕ್ವೋಷಿಯೆಂಟ್‌ನ್ನು ಮತ್ತಷ್ಟು ಹೆಚ್ಚಿಸಿದೆ.

ಚಿತ್ರದಲ್ಲಿ ಶಾಹಿದ್ ಕಪೂರ್ ಹೀರೋ ಆಗಿದ್ದು, ಇವರಿಬ್ಬರ ನಡುವಿನ ರಿಲೇಶನ್, ಲವ್ ಟ್ರೈಯಾಂಗಲ್ ಹಾಗೂ ಇಮೋಶನಲ್ ಡ್ರಾಮಾ ಹೇಗಿರಲಿದೆ ಎಂಬ ಕುತೂಹಲ ಫ್ಯಾನ್ಸ್‌ನಲ್ಲಿ ಹೆಚ್ಚಾಗಿದೆ.

ಇದಲ್ಲದೆ, 'ಕಾಕ್ಟೇಲ್ 2' ಸಿನಿಮಾದಿಂದ ಹೊಸ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಅದು ಚಿತ್ರದ ಹೈಪ್ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿ ತೆರೆಕಾಣಲಿರುವ ಈ ಸಿನಿಮಾ, ಈ ವರ್ಷದ ಹಾಟ್ ಬಾಲಿವುಡ್ ಎಂಟರ್ಟೈನರ್ ಆಗಿ ಹೊರಹೊಮ್ಮುವ ನಿರೀಕ್ಷೆ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News