Dailyhunt Logo
  • Light mode
    Follow system
    Dark mode
    • Play Story
    • App Story
ಗೂಗಲ್‌ನ ಟ್ರಿಪಲ್ ಬ್ಲಾಸ್ಟ್! Google Pay AI, SBI Flex Card ಮತ್ತು Gemini Spark ಭಾರತದಲ್ಲಿ ಲಾಂಚ್

ಗೂಗಲ್‌ನ ಟ್ರಿಪಲ್ ಬ್ಲಾಸ್ಟ್! Google Pay AI, SBI Flex Card ಮತ್ತು Gemini Spark ಭಾರತದಲ್ಲಿ ಲಾಂಚ್

AIN Kannada 1 week ago

ವದೆಹಲಿ: ಭಾರತೀಯ ಬಳಕೆದಾರರಿಗೆ ಗೂಗಲ್ ಭರ್ಜರಿ ಸರ್ಪ್ರೈಸ್ ನೀಡಿದ್ದು, ಒಂದೇ ವೇದಿಕೆಯಲ್ಲಿ ಮೂರು ಮಹತ್ವದ ಸೇವೆಗಳನ್ನು ಅನಾವರಣಗೊಳಿಸಿದೆ. ಗೂಗಲ್ ಪೇನಲ್ಲಿ AI ಆಧಾರಿತ 'Ask Google Pay' ಚಾಟ್ ಫೀಚರ್, SBI ಜೊತೆಗೂಡಿ ಹೊಸ ಡಿಜಿಟಲ್ ಕ್ರೆಡಿಟ್ ಕಾರ್ಡ್, ಹಾಗೂ 24/7 ಪರ್ಸನಲ್ AI ಏಜೆಂಟ್ 'Gemini Spark' ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಈ ಘೋಷಣೆಯೊಂದಿಗೆ ಗೂಗಲ್ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಮತ್ತು AI ಸೇವೆಗಳನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

ಗೂಗಲ್ ಪೇಗೆ ಸೇರಿಸಿರುವ Ask Google Pay ಫೀಚರ್ ಜೆಮಿನಿ AI ಮಾದರಿಯ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಎಲ್ಲಿ, ಎಷ್ಟು ಹಣ ಖರ್ಚು ಮಾಡಿದ್ದಾರೆ, ಯಾವ ವಿಭಾಗದಲ್ಲಿ ಹೆಚ್ಚು ವೆಚ್ಚವಾಗಿದೆ, ಹೇಗೆ ಉಳಿತಾಯ ಮಾಡಬಹುದು ಎಂಬುದನ್ನು ಚಾಟ್ ಮೂಲಕವೇ ತಿಳಿದುಕೊಳ್ಳಬಹುದು. ಬಜೆಟ್ ಪ್ಲಾನಿಂಗ್, ಖರ್ಚಿನ ವಿಶ್ಲೇಷಣೆ, ಉಳಿತಾಯ ಸಲಹೆಗಳು ಹಾಗೂ ಸೂಕ್ತ ಕ್ರೆಡಿಟ್ ಕಾರ್ಡ್ ಶಿಫಾರಸುಗಳನ್ನೂ ಈ AI ನೀಡಲಿದೆ.

ಈ ಫೀಚರ್ SIP, ಕ್ರೆಡಿಟ್ ಸ್ಕೋರ್, ತೆರಿಗೆ ವ್ಯವಸ್ಥೆ, ಚಕ್ರಬಡ್ಡಿಯಂತಹ ಹಣಕಾಸು ವಿಷಯಗಳನ್ನು ಸರಳ ಭಾಷೆಯಲ್ಲಿ ವಿವರಿಸುತ್ತದೆ. 10 ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಈ ಸೇವೆಯಲ್ಲಿ ವಾಯ್ಸ್ ಕಮಾಂಡ್ ಮೂಲಕವೂ ಪ್ರಶ್ನೆಗಳನ್ನು ಕೇಳಬಹುದು. ಬಳಕೆದಾರರ ಅನುಮತಿಯಿದ್ದರೆ (Opt-in) ಅವರ ಟ್ರಾನ್ಸಾಕ್ಷನ್ ಹಿಸ್ಟರಿ ಹಾಗೂ ಕ್ರೆಡಿಟ್ ಮಾಹಿತಿಯನ್ನು ವಿಶ್ಲೇಷಿಸಿ ವೈಯಕ್ತಿಕ ಹಣಕಾಸು ಸಲಹೆಗಳನ್ನೂ ನೀಡಲಿದೆ.

ಇದರ ಜೊತೆಗೆ ಗೂಗಲ್, SBI Card ಜೊತೆಗೂಡಿ Google Pay Flex SBI Card ಅನ್ನು ಪರಿಚಯಿಸಿದೆ. ವಾರ್ಷಿಕ ಶುಲ್ಕವಿಲ್ಲದ ಈ ಡಿಜಿಟಲ್ ಕ್ರೆಡಿಟ್ ಕಾರ್ಡ್ ಮೂಲಕ ನೇರ UPI ಪಾವತಿ ಮಾಡಬಹುದಾಗಿದೆ. ಈಗ RuPay ಜೊತೆಗೆ VISA ನೆಟ್‌ವರ್ಕ್‌ ಕೂಡ ಲಭ್ಯವಿದ್ದು, Axis Bank ಹಾಗೂ SBI Card ಎರಡೂ ಪಾಲುದಾರ ಬ್ಯಾಂಕ್‌ಗಳಾಗಿವೆ.

ಗೂಗಲ್ ಪೇ ಆಯಪ್‌ನಲ್ಲೇ ಯಾವುದೇ ದಾಖಲೆಗಳಿಲ್ಲದೆ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಖರೀದಿಗಳ ಮೇಲೆ 'Stars' ರಿವಾರ್ಡ್ ಸಿಗಲಿದ್ದು, 1 Star = ₹1 ಮೌಲ್ಯ ಹೊಂದಿರುತ್ತದೆ. ಜೊತೆಗೆ Google AI Plus ಸದಸ್ಯತ್ವದ ಮೇಲೆ ಒಂದು ವರ್ಷದವರೆಗೆ 50% ರಿಯಾಯಿತಿ ಹಾಗೂ Pixel ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌ಗಳನ್ನೂ ಗೂಗಲ್ ಘೋಷಿಸಿದೆ.

ಇದರೊಂದಿಗೆ Gemini Spark ಎನ್ನುವ 24/7 AI ಏಜೆಂಟ್ ಭಾರತಕ್ಕೂ ಕಾಲಿಟ್ಟಿದೆ. Gmail, Docs, Sheets ಸೇರಿದಂತೆ Google Workspace ಸೇವೆಗಳೊಂದಿಗೆ ಸಂಪರ್ಕ ಸಾಧಿಸಿ ಇಮೇಲ್‌ಗಳಿಗೆ ಉತ್ತರಿಸುವುದು, ಕ್ಯಾಲೆಂಡರ್ ಬುಕ್ ಮಾಡುವುದು, ರಿಮೈಂಡರ್‌ಗಳನ್ನು ಸೃಷ್ಟಿಸುವುದು, ಟ್ರಾವೆಲ್ ಹಾಗೂ ಶಾಪಿಂಗ್ ಯೋಜನೆಗಳನ್ನು ನಿರ್ವಹಿಸುವುದು ಸೇರಿದಂತೆ ಹಲವು ಕೆಲಸಗಳನ್ನು ಸ್ವಯಂಚಾಲಿತವಾಗಿ ಪೂರ್ಣಗೊಳಿಸಲಿದೆ. ಬಳಕೆದಾರರ ಲ್ಯಾಪ್‌ಟಾಪ್ ಅಥವಾ ಫೋನ್ ಆಫ್ ಇದ್ದರೂ ಕ್ಲೌಡ್ ಮೂಲಕ ಬ್ಯಾಕ್‌ಗ್ರೌಂಡ್‌ನಲ್ಲಿ ಕೆಲಸ ಮುಗಿಸುವ ಸಾಮರ್ಥ್ಯವನ್ನು ಈ AI ಹೊಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News