Dailyhunt Logo
  • Light mode
    Follow system
    Dark mode
    • Play Story
    • App Story
ಕಳಪೆ ಕಾಮಗಾರಿಯಿಂದ ಜನರಿಗೆ ಸಮಸ್ಯೆ ಆಗದಂತೆ ವಿಶ್ವನಾಥ್ ಸೂಚನೆ

ಕಳಪೆ ಕಾಮಗಾರಿಯಿಂದ ಜನರಿಗೆ ಸಮಸ್ಯೆ ಆಗದಂತೆ ವಿಶ್ವನಾಥ್ ಸೂಚನೆ

AIN Kannada 4 years ago

ಯಲಹಂಕ ಶಾಸಕ, ಎಸ್.ಆರ್.ವಿಶ್ವನಾಥ್ ದಾಸನಪುರ ಹೋಬಳಿಯ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಭೂಮಿಪೂಜೆ ಬಳಿಕ ಮಾತನಾಡಿದ ಎಸ್.ಆರ್.ವಿಶ್ವನಾಥ್ ನಗರದ ಯಲಹಂಕ ಗ್ರಾಮಾಂತರ ವ್ಯಾಪ್ತಿಯ ದಾಸನಪುರ ಹೋಬಳಿಯ ಗ್ರಾಮಗಳ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳು ನೆರವೇರಲಿ, ಯಾವುದೇ ಕಳಪೆ ಕಾಮಗಾರಿಯಿಂದ ಜನರಿಗೆ ಸಮಸ್ಯೆ ಆಗಬಾರದು ಎಂದರು.

ಅಲ್ಲದೆ ತ್ವರಿತಗತಿಯಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಬೇಕು, ಇಂತಹ ವ್ಯವಸ್ಥೆಗಳಿದ್ದರೂ ಸರಿಪಡಿಸುವ ಕೆಲಸ ಮಾಡುತ್ತೇವೆ, ದಾಸನಪುರ ಹೋಬಳಿಯ ಗ್ರಾಮಗಳ ನಿವಾಸಿಗಳು ಹೆದರುವಂತ ಅಗತ್ಯಯಿಲ್ಲ, ನಿಮ್ಮ ಜೊತೆ ನಾವಿದ್ದೇವೆ ಎಂದು ತಿಳಿಸಿದ್ರು. ಹಾಗೂ ಇನ್ನಿತರ ಅಭಿವೃದ್ದಿ ಕೆಲಸಗಳನೇ ಇರಲಿ ಸುಲಲಿತವಾಗಿ ಕಾರ್ಯರಂಭ ನಡೆಯಲಿ ಎಂದರು.

Share

Dailyhunt
Disclaimer: This content has not been generated, created or edited by Dailyhunt. Publisher: AIN Live News