Dailyhunt Logo
  • Light mode
    Follow system
    Dark mode
    • Play Story
    • App Story
ಕರ್ನಾಟಕಕ್ಕೆ ನೀರಿನ ನಿರೀಕ್ಷೆ: ರಾಧಾನಗರಿ ಅಣೆಕಟ್ಟಿನಿಂದ 2,828 ಕ್ಯೂಸೆಕ್ ನೀರು ಬಿಡುಗಡೆ

ಕರ್ನಾಟಕಕ್ಕೆ ನೀರಿನ ನಿರೀಕ್ಷೆ: ರಾಧಾನಗರಿ ಅಣೆಕಟ್ಟಿನಿಂದ 2,828 ಕ್ಯೂಸೆಕ್ ನೀರು ಬಿಡುಗಡೆ

AIN Kannada 1 week ago

ಚಿಕ್ಕೋಡಿ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿರುವ ರಾಧಾನಗರಿ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಬಿಡುವ ಪ್ರಕ್ರಿಯೆ ಆರಂಭವಾಗಿದೆ. ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟ ತಲುಪಿದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಅಣೆಕಟ್ಟಿನ ಸ್ವಯಂಚಾಲಿತ ಗೇಟ್‌ ತೆರೆಯಲಾಗಿದ್ದು, 6ನೇ ಗೇಟ್‌ ಓಪನ್ ಮಾಡಲಾಗಿದೆ.

9 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ರಾಧಾನಗರಿ ಅಣೆಕಟ್ಟಿನಿಂದ ನಿಯಂತ್ರಿತವಾಗಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಅಣೆಕಟ್ಟಿನ ಪವರ್‌ ಹೌಸ್‌ ಮೂಲಕ 2,828 ಕ್ಯೂಸೆಕ್‌ ನೀರು ಹೊರಹರಿಯುತ್ತಿದೆ.

ಅಣೆಕಟ್ಟಿನಿಂದ ಬಿಡುಗಡೆಯಾಗುತ್ತಿರುವ ನೀರು ಪಂಚಗಂಗಾ ನದಿಯ ಮೂಲಕ ಕೃಷ್ಣಾ ನದಿ ವ್ಯವಸ್ಥೆಯನ್ನು ಸೇರುತ್ತಿದೆ. ಇದರಿಂದ ಕರ್ನಾಟಕದ ಕೃಷ್ಣಾ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಾಗುವ ನಿರೀಕ್ಷೆ ಇದೆ.

ಮಹಾರಾಷ್ಟ್ರ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಧಾನಗರಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯದ ಮೇಲೆ ನೀರಿನ ಒತ್ತಡ ಹೆಚ್ಚಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ನದಿ ತೀರದ ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆ ನೀಡಿದ್ದು, ನೀರಿನ ಹರಿವಿನ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ಇಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News