Dailyhunt Logo
  • Light mode
    Follow system
    Dark mode
    • Play Story
    • App Story
ಕಿರಿದಾದ ಬಂಡೆ ಸಂದಿಯಲ್ಲಿ ಸಿಲುಕಿದ ಬಾಲಕ, ಎದುರಿಗೇ ವಿಷಪೂರಿತ ಹಾವು!

ಕಿರಿದಾದ ಬಂಡೆ ಸಂದಿಯಲ್ಲಿ ಸಿಲುಕಿದ ಬಾಲಕ, ಎದುರಿಗೇ ವಿಷಪೂರಿತ ಹಾವು!

AIN Kannada 2 weeks ago

ಯಾಗಢ: ಒಡಿಶಾದ ನಯಾಗಢ ಜಿಲ್ಲೆಯಲ್ಲಿ ಜೇನುತುಪ್ಪ ಸಂಗ್ರಹಿಸಲು ಹೋದ ಶಿಬಾ ಪ್ರಧಾನ್ ಎಂಬ ಬಾಲಕನಿಗೆ ಕಾಡಿನಲ್ಲಿ ಭೀಕರ ಅನುಭವವಾಗಿದೆ.

ಬಂಡೆಯ ಕಿರಿದಾದ ಬಿರುಕಿನೊಳಗೆ ಜೇನುಗೂಡು ತೆಗೆಯಲು ಹೋದ ವೇಳೆ ಬಾಲಕನ ತಲೆ ಆ ಸಂದುಗೆ ಸಿಲುಕಿಕೊಂಡಿದೆ. ಅದೇ ಸಂದರ್ಭದಲ್ಲಿ ಎದುರಿನಲ್ಲೇ ವಿಷಪೂರಿತ ಹಾವು ಹೆಡೆ ಎತ್ತಿ ಕುಳಿತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿತ್ತು.

ಅತ್ತ ಕದಲಲು ಸಾಧ್ಯವಿಲ್ಲ, ಇತ್ತ ಹಾವಿನ ಭಯದಿಂದ ಬಾಲಕ ಸುಮಾರು ಎಂಟು ಗಂಟೆಗಳ ಕಾಲ ಅದೇ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾನೆ.

ಸ್ಥಳಕ್ಕೆ ತಕ್ಷಣ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಎರಡು ತಂಡಗಳು ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ, ಹಾವಿನ ಸವಾಲನ್ನು ಮೀರಿ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಅದೃಷ್ಟವಶಾತ್ ಬಾಲಕನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಣಾ ತಂಡದ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News