Dailyhunt
ಮೇ ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್ʼಗಳಿಗೆ ರಜೆ! ಇಲ್ಲಿದೆ ನೋಡಿ RBI ರಜಾ ದಿನಗಳ ಪಟ್ಟಿ

ಮೇ ತಿಂಗಳಲ್ಲಿ ಬರೋಬ್ಬರಿ 13 ದಿನ ಬ್ಯಾಂಕ್ʼಗಳಿಗೆ ರಜೆ! ಇಲ್ಲಿದೆ ನೋಡಿ RBI ರಜಾ ದಿನಗಳ ಪಟ್ಟಿ

AIN Kannada 1 week ago

ಬೆಂಗಳೂರು: ಮೇ ತಿಂಗಳು ಈ ಬಾರಿ ರಜೆಯಿಂದಲೇ ಆರಂಭವಾಗಿ ರಜೆಯೊಂದಿಗೇ ಮುಕ್ತಾಯಗೊಳ್ಳಲಿದ್ದು, ಕರ್ನಾಟಕದಲ್ಲಿ ಒಟ್ಟಾರೆ ಹಬ್ಬಗಳು ಮತ್ತು ವಾರಾಂತ್ಯಗಳನ್ನು ಸೇರಿಸಿ 9 ದಿನಗಳ ರಜೆಗಳು ಲಭ್ಯವಾಗಲಿವೆ. ಮೇ ತಿಂಗಳಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ.

ಇದರ ಜೊತೆಗೆ 2ನೇ ಹಾಗೂ 4ನೇ ಶನಿವಾರಗಳು, ಐದು ಭಾನುವಾರಗಳು ಸೇರಿ ಒಟ್ಟು 9 ದಿನಗಳು ರಜೆಗಳಾಗಲಿವೆ. ಈ ದಿನಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ಸಂಪೂರ್ಣವಾಗಿ ಬಂದ್ ಆಗಲಿದ್ದು, ಯಾವುದೇ ವಹಿವಾಟು ನಡೆಯುವುದಿಲ್ಲ. ಉಳಿದ 22 ದಿನಗಳು ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಮೇ ತಿಂಗಳ ಬ್ಯಾಂಕ್ ರಜಾ ಪಟ್ಟಿ ಹೀಗಿದೆ:

  • ಮೇ 1 (ಶುಕ್ರವಾರ) - ಕಾರ್ಮಿಕ ದಿನಾಚರಣೆ
  • ಮೇ 3 - ಭಾನುವಾರ
  • ಮೇ 9 - 2ನೇ ಶನಿವಾರ
  • ಮೇ 10 - ಭಾನುವಾರ
  • ಮೇ 17 - ಭಾನುವಾರ
  • ಮೇ 23 - 4ನೇ ಶನಿವಾರ
  • ಮೇ 24 - ಭಾನುವಾರ
  • ಮೇ 28 (ಗುರುವಾರ) - ಬಕ್ರೀದ್
  • ಮೇ 31 - ಭಾನುವಾರ

ಇನ್ನೂ, ಸರಣಿ ರಜೆ ಪಡೆಯಲು ಸಹ ಅವಕಾಶವಿದೆ. ಮೇ 1ರಂದು ಶುಕ್ರವಾರ ಸಾರ್ವತ್ರಿಕ ರಜೆ ಇರುವುದರಿಂದ, ಶನಿವಾರ ಒಂದು ದಿನ ರಜೆ ತೆಗೆದುಕೊಂಡರೆ ಭಾನುವಾರ ಸೇರಿ ಮೂರು ದಿನಗಳ ಸರಣಿ ರಜೆ ಸಿಗಲಿದೆ. ಇದೇ ರೀತಿ ಬಕ್ರೀದ್ ಗುರುವಾರ ಬಂದಿರುವುದರಿಂದ, ಅದರ ನಂತರ ಎರಡು ದಿನ ರಜೆ ತೆಗೆದುಕೊಂಡರೆ ನಾಲ್ಕು ದಿನಗಳ ದೀರ್ಘ ರಜೆ ಪಡೆಯಬಹುದು. ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಶುಕ್ರವಾರ ಒಂದು ದಿನ ರಜೆ ಹಾಕಿದರೆ ನಾಲ್ಕು ದಿನಗಳ ರಜೆ ಸೌಲಭ್ಯವನ್ನು ಪಡೆಯಬಹುದು.

ಇನ್ನು ಜೂನ್ ಮತ್ತು ಜುಲೈ ತಿಂಗಳಲ್ಲಿ ಯಾವುದೇ ಪ್ರಮುಖ ರಾಷ್ಟ್ರೀಯ ಅಥವಾ ಧಾರ್ಮಿಕ ಹಬ್ಬಗಳು ಇಲ್ಲದ ಹಿನ್ನೆಲೆ, ಸಾರ್ವತ್ರಿಕ ರಜೆಗಳು ಶೂನ್ಯವಾಗಲಿವೆ. ಜೂನ್ 26ರಂದು ಮೊಹರಾಂ ಇರುವುದನ್ನು ಹೊರತುಪಡಿಸಿದರೆ, ಉಳಿದ ದಿನಗಳಲ್ಲಿ ವಾರಾಂತ್ಯಗಳು ಹಾಗೂ 2ನೇ ಮತ್ತು 4ನೇ ಶನಿವಾರಗಳನ್ನೇ ಅವಲಂಬಿಸಬೇಕಾಗುತ್ತದೆ. ಆದರೆ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಬ್ಬಗಳ ಹಿನ್ನೆಲೆ ಮತ್ತೆ ಸಾಲು ರಜೆಗಳು ಲಭ್ಯವಾಗಲಿವೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News