ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದ ಡೆಲ್ಲಿ ತಂಡವು ಮೊದಲಿಗೆ ಫೀಲ್ಡಿಂಗ್ ಆಯ್ದುಕೊಂಡಿದ್ದು, ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಡೆಲ್ಲಿ ತಂಡಕ್ಕೆ 163 ರನ್ ಟಾರ್ಗೆಟ್ ನೀಡಿತು.
ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಗೆಲುವು ಪಡೆದಿದೆ. ಡೆಲ್ಲಿ ತಂಡದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಈ ಬಾರಿ ನಿರಾಸೆ ಮೂಡಿಸಿದಂತೆ ಕೇವಲ 1 ರನ್ ಗಳಿಸಿ ಔಟಾದರು. ನಿತೀಶ್ ರಾಣಾ ಕೇವಲ 7 ರನ್ ಗಳಿಸಿ ರನ್‌ಔಟ್ ಆದರು. ಈ ಸಂದರ್ಭ, ಪಾತುಮ್ ನಿಸ್ಸಾಂಕ 30 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸ್ ಬಾರಿಸಿ ಒಟ್ಟು 44 ರನ್ ಗಳಿಸಿ ತಂಡಕ್ಕೆ ಚೇತರ್ ನೀಡಿದರು.
ಹೀಗೆಯೇ, ಸಮೀರ್ ರಿಜ್ವಿ 51 ಬಾಲ್‌ಗೆ 90 ರನ್ ಗಳಿಸಿ (7 ಫೋರ್, 7 ಸಿಕ್ಸರ್) ತಂಡವನ್ನು ಗೆಲುವಿನ ದಡಕ್ಕೆ ತರುವ ಪ್ರಮುಖ ಪಾತ್ರ ವಹಿಸಿದರು. ರಿಜ್ವಿ ಮತ್ತು ನಿಸ್ಸಾಂಕ ಜೋಡಣೆಯು 66 ರನ್ ಗಳಿಸಿ ತಂಡವನ್ನು ಸ್ಥಿರಗೊಂಡುವಲ್ಲಿ ನೆರವಾಯಿತು. ನಂತರ ಮಿಲ್ಲರ್ ಹಾಗೂ ರಿಜ್ವಿ 78 ರನ್‌ಗಳ ಜೊತೆಯಾಟವಾಡಿದರು.
ಮುಂಭೈ ತಂಡದ ಪರ, ಆರಂಭಿಕ ಆಟಗಾರ ರೋಹಿತ್ ಶರ್ಮಾ 26 ಬಾಲ್‌ಗಳಿಗೆ 5 ಫೋರ್ ಮತ್ತು 1 ಸಿಕ್ಸ್ ಮೂಲಕ 35 ರನ್ ಗಳಿಸಿದರು. ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 51 ರನ್ ಗಳಿಸಿ ತಂಡದ ಶ್ರೇಷ್ಠ ಆಟಗಾರರಾಗಿ ಹೊರಬಂದರು. ಕೊನೆಗೆ ನಮನ್ ಧರ್ 28 ರನ್, ಮಿಚೆಲ್ ಸ್ಯಾಂಟ್ನರ್ 18 ರನ್ ಗಳಿಸಿ ಮುಂಬೈ ತಂಡದ ಮೊತ್ತ 162 ರನ್‌ನ ಗಡಿ ಮುಟ್ಟಿತು.
ಡೆಲ್ಲಿ ಪರ ಮುಕೇಶ್ ಕುಮಾರ್ 2 ವಿಕೆಟ್, ಲುಂಗಿ ಎನ್‌ಗಿಡಿ, ಅಕ್ಷರ್ ಪಟೇಲ್, ವಿಪ್ರಾಜ್ ನಿಗಮ್ ಮತ್ತು ಟಿ.ನಟರಾಜನ್ ತಲಾ ಒಂದು ಒಂದು ವಿಕೆಟ್ ಪಡೆದರು. ಮುಂಬೈ ತಂಡದ ಪರ ದೀಪಕ್ ಚಹಾರ್, ಸ್ಯಾಂಟ್ನರ್ ಮತ್ತು ಮಯಾಂಕ್ ತಲಾ ಒಂದು ಒಂದು ವಿಕೆಟ್ ಪಡೆದರು.

