Dailyhunt Logo
  • Light mode
    Follow system
    Dark mode
    • Play Story
    • App Story
ನೆಲಗದರನಹಳ್ಳಿಯಲ್ಲಿ ಒರಿಸ್ಸಾ ಮೂಲದ ಮನೋಜ್ ಕುಮಾರ್ ನೇಣಿಗೆ ಶರಣು

ನೆಲಗದರನಹಳ್ಳಿಯಲ್ಲಿ ಒರಿಸ್ಸಾ ಮೂಲದ ಮನೋಜ್ ಕುಮಾರ್ ನೇಣಿಗೆ ಶರಣು

AIN Kannada 4 years ago

ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಒರಿಸ್ಸಾ ಮೂಲದ ಮನೋಜ್ ಕುಮಾರ್ ನೇಣಿಗೆ ಶರಣಾದ ಮೃತ ದುರ್ದೈವಿಯಾಗಿದ್ದಾನೆ. ನೆಲಗದರನಹಳ್ಳಿಯ ಶಿವಪುರದ ಮನೆಯಲ್ಲಿ ಮನೋಜ್ ಕುಮಾರ್ ನೇಣಿಗೆ ಶರಣಾಗಿದ್ದಾನೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಮನೋಜ್ ಕುಮಾರ್, ಇತ್ತಿಚೆಗೆ ಪತ್ನಿಯನ್ನ ತವರು ಮನೆಗೆ ಕಳುಹಿಸಿದ್ದನಂತೆ. ಮನೆಯಲ್ಲಿ ಒಬ್ಬಂಟಿಯಾಗಿರುತ್ತಿದ್ದ ಮೃತನು ಅಕ್ಕಪಕ್ಕದ ಮನೆಯವರ ಜೊತೆ ಹೆಚ್ಚು ಮಾತನಾಡುತ್ತಿರಲಿಲ್ಲವಂತೆ. ಕೌಟುಂಬಿಕ ಕಲಹವೆ ಆತ್ಮಹತ್ಯೆಗೆ ಕಾರಣ ಇರಬಹುದು ಎಂದು ಶಂಕಿಸಿದ್ದು, ಆತ್ಮಹತ್ಯೆಗೆ ಇನ್ನು ನಿಖರ ಕಾರಣ ತಿಳಿದು ಬಂದಿಲ್ಲ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ..

Share

Dailyhunt
Disclaimer: This content has not been generated, created or edited by Dailyhunt. Publisher: AIN Live News