Dailyhunt Logo
  • Light mode
    Follow system
    Dark mode
    • Play Story
    • App Story
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೃಹತ್ ಪ್ರತಿಭಟನೆ; ಪರಿಸ್ಥಿತಿ ಉದ್ವಿಗ್ನ!

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೃಹತ್ ಪ್ರತಿಭಟನೆ; ಪರಿಸ್ಥಿತಿ ಉದ್ವಿಗ್ನ!

AIN Kannada 1 week ago

ಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ಹಣದುಬ್ಬರ ಹಾಗೂ ಆಡಳಿತಾತ್ಮಕ ದಬ್ಬಾಳಿಕೆ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಭಾನುವಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಾವಿರಾರು ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರು ನಿರ್ಬಂಧಗಳನ್ನು ತೆರವುಗೊಳಿಸುವುದು, ಸಂವಹನ ಸೇವೆಗಳನ್ನು ಪುನಃಸ್ಥಾಪಿಸುವುದು, ಆಹಾರ ಮತ್ತು ಔಷಧಗಳ ನಿರಂತರ ಪೂರೈಕೆ ಖಚಿತಪಡಿಸುವುದು ಹಾಗೂ ಬಂಧಿತ ನಾಯಕರ ಬಿಡುಗಡೆ ಸೇರಿದಂತೆ ಒಟ್ಟು 38 ಅಂಶಗಳ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸುತ್ತಿದ್ದಾರೆ.

ಮುಜಫರಾಬಾದ್, ರಾವಲಕೋಟ್ ಮತ್ತು ಮಿರ್ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನಸಮೂಹ ಜಮಾಯಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅನ್ಬಾರ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಹಾಗೂ ಪಾಕ್ ರೇಂಜರ್‌ಗಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾರೆ.

ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಪ್ರತಿಭಟನಾಕಾರಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ವಿವಿಧ ಸ್ಥಳಗಳಲ್ಲಿ ನಡೆದ ಗಲಾಟೆಗಳಲ್ಲಿ ನಾಲ್ವರು ಯುವಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನೀಡಿದ್ದ ಕರೆ ಮೇರೆಗೆ ನಡೆದ ಪ್ರತಿಭಟನೆ ವೇಳೆ ದಡಿಯಾಲ್ ಪ್ರದೇಶದಲ್ಲಿ ಜನರು ಭದ್ರತಾ ಪಡೆಗಳನ್ನು ಹಿಮ್ಮೆಟ್ಟಿಸಿ ಕೆಲವು ಭಾಗಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.

ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪಾಕ್ ಭದ್ರತಾ ಪಡೆಗಳು ಜೆಎಎಸಿ ನಾಯಕ ಶೌಕತ್ ನವಾಜ್ ಮಿರ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಇದೇ ವೇಳೆ ಪ್ರತಿಭಟನೆ ಹರಡುವುದನ್ನು ತಡೆಯಲು ಮತ್ತು ಮಾಹಿತಿ ಸೋರಿಕೆಯನ್ನು ನಿಯಂತ್ರಿಸಲು ಪಾಕ್ ಸರ್ಕಾರ ಪಿಒಕೆ ಹಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News