Dailyhunt Logo
  • Light mode
    Follow system
    Dark mode
    • Play Story
    • App Story
ರಾಂಚಿಯಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣ: ದತ್ತು ಮಗಳೇ ತಾಯಿಗೆ ಕುತ್ತು!

ರಾಂಚಿಯಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣ: ದತ್ತು ಮಗಳೇ ತಾಯಿಗೆ ಕುತ್ತು!

AIN Kannada 2 weeks ago

ರಾಂಚಿ, ಏಪ್ರಿಲ್ 30: ಜಾರ್ಖಂಡ್‌ನ ರಾಂಚಿಯಲ್ಲಿ ಮನಕಲುಕುವ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳಿಲ್ಲದ ದಂಪತಿ ಪ್ರೀತಿಯಿಂದ ದತ್ತು ಪಡೆದಿದ್ದ 17 ವರ್ಷದ ಬಾಲಕಿ, ತನ್ನ ತಾಯಿಯನ್ನೇ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ.

ಮೃತ ಮಹಿಳೆ ನಹಿದಾ ಪರ್ವೀನ್ ತನ್ನ ಪತಿಯ ನಿಧನದ ಬಳಿಕ 45 ಲಕ್ಷ ರೂ.

ಪರಿಹಾರ ಪಡೆದಿದ್ದರು. ಆ ಹಣಕ್ಕೆ ದತ್ತು ಮಗಳೇ ನಾಮಿನಿಯಾಗಿದ್ದಳು. ಆದರೆ ಆಕೆ ಆಗಾಗ ಬ್ಯಾಂಕ್ ಖಾತೆಯಿಂದ ಹಣ ತೆಗೆದು ತನ್ನ ಪ್ರೇಮಿಗೆ ನೀಡುತ್ತಿದ್ದಳು ಎನ್ನಲಾಗಿದೆ.

ಈ ವಿಚಾರ ತಿಳಿದ ತಾಯಿ ಹಣ ನೀಡುವುದನ್ನು ನಿಲ್ಲಿಸಿದ್ದರಿಂದ ಅಸಮಾಧಾನಗೊಂಡ ಬಾಲಕಿ, ತನ್ನ 20 ವರ್ಷದ ಪ್ರೇಮಿ ಅರ್ಬಾಜ್ ಹಾಗೂ ಇತರ ಇಬ್ಬರ ಜೊತೆ ಸೇರಿ ಕೊಲೆ ಯೋಜನೆ ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 24ರಂದು ಪರ್ವೀನ್ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲಲಾಗಿದ್ದು, ಬಳಿಕ ದೇಹವನ್ನು ಮನೆಯಲ್ಲೇ ಮರೆಮಾಡಲಾಗಿದೆ. ನಂತರ ಸ್ನಾನಗೃಹದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ನಾಟಕ ಮಾಡಲಾಗಿದೆ. ಈ ಮಾಹಿತಿ ಕುಟುಂಬಕ್ಕೆ ನೀಡಿದ ಬಳಿಕ ಅಂತ್ಯಕ್ರಿಯೆಯೂ ನಡೆಸಲಾಗಿದೆ.

ಆದರೆ ಮೃತದೇಹದ ಕುತ್ತಿಗೆಯಲ್ಲಿದ್ದ ಗಾಯದ ಗುರುತುಗಳು ಅನುಮಾನಕ್ಕೆ ಕಾರಣವಾಗಿದ್ದು, ಕುಟುಂಬದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಂತರ ಶವವನ್ನು ಅಗೆದು ಪರಿಶೀಲಿಸಿದಾಗ ಕೊಲೆ ನಡೆದಿರುವುದು ದೃಢಪಟ್ಟಿದೆ.

ಪೊಲೀಸರು ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಪ್ರೇಮಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಹಣ ಮತ್ತು ಆಸ್ತಿ ಲಾಭಕ್ಕಾಗಿ ನಡೆದ ಈ ಕೊಲೆ ಪ್ರಕರಣವು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News