Dailyhunt Logo
  • Light mode
    Follow system
    Dark mode
    • Play Story
    • App Story
ರಾತ್ರಿ ಅತಿಯಾಗಿ ಯೋಚಿಸುತ್ತಿದ್ದೀರಾ? ನಿದ್ರೆಯಷ್ಟೇ ಅಲ್ಲ, ಆರೋಗ್ಯಕ್ಕೂ ಅಪಾಯ ಎನ್ನುತ್ತಾರೆ ತಜ್ಞರು!

ರಾತ್ರಿ ಅತಿಯಾಗಿ ಯೋಚಿಸುತ್ತಿದ್ದೀರಾ? ನಿದ್ರೆಯಷ್ಟೇ ಅಲ್ಲ, ಆರೋಗ್ಯಕ್ಕೂ ಅಪಾಯ ಎನ್ನುತ್ತಾರೆ ತಜ್ಞರು!

AIN Kannada 3 months ago

ಇತ್ತೀಚಿನ ದಿನಗಳಲ್ಲಿ ಒತ್ತಡ, ಆತಂಕ, ಆರ್ಥಿಕ ಹಾಗೂ ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ರಾತ್ರಿ ಮಲಗುವ ವೇಳೆ ಅತಿಯಾಗಿ ಯೋಚಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಅಭ್ಯಾಸವು ಕೇವಲ ನಿದ್ರೆಯ ಮೇಲೆ ಮಾತ್ರವಲ್ಲ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ತಜ್ಞರ ಪ್ರಕಾರ, ಮಲಗುವ ಸಮಯದಲ್ಲಿ ನಿರಂತರವಾಗಿ ನಕಾರಾತ್ಮಕ ಆಲೋಚನೆಗಳಲ್ಲಿ ಮುಳುಗಿದ್ದರೆ ನಿದ್ರಾಹೀನತೆ ಉಂಟಾಗಬಹುದು. ಸಮರ್ಪಕ ನಿದ್ರೆ ಇಲ್ಲದಿದ್ದರೆ ಮರುದಿನ ಆಯಾಸ, ಏಕಾಗ್ರತೆಯ ಕೊರತೆ ಹಾಗೂ ದೈನಂದಿನ ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗುವ ಸಾಧ್ಯತೆ ಇದೆ.

ಅತಿಯಾದ ಯೋಚನೆ ಹೃದಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೃದಯ ಬಡಿತ ಹೆಚ್ಚಾಗುವುದು, ಕೈಕಾಲುಗಳಲ್ಲಿ ನಡುಕ, ಹೊಟ್ಟೆ ನೋವು, ಮಲಬದ್ಧತೆ ಮತ್ತು ವಾಕರಿಕೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಇದೇ ವೇಳೆ ನಿರಂತರ ಚಿಂತೆಯಿಂದ ಆತಂಕದ ಮಟ್ಟ ಹೆಚ್ಚಾಗಿ, ಕೆಲವರಲ್ಲಿ ಪ್ಯಾನಿಕ್ ಅಟ್ಯಾಕ್‌ಗೂ ಕಾರಣವಾಗಬಹುದು. ದೀರ್ಘಕಾಲ ಈ ಸ್ಥಿತಿ ಮುಂದುವರಿದರೆ ಖಿನ್ನತೆ (ಡಿಪ್ರೆಶನ್) ಉಂಟಾಗುವ ಅಪಾಯವೂ ಹೆಚ್ಚಿರುತ್ತದೆ. ಮಾನಸಿಕವಾಗಿ ದಣಿವು ಮತ್ತು ನಿರುತ್ಸಾಹವೂ ಕಾಡಬಹುದು.

ಅತಿಯಾಗಿ ಯೋಚಿಸುವುದನ್ನು ಕಡಿಮೆ ಮಾಡುವುದು ಹೇಗೆ?

ತಜ್ಞರ ಸಲಹೆಯಂತೆ, ಮಲಗುವ ಮೊದಲು 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡುವುದು, ಆಳವಾದ ಉಸಿರಾಟದ ಮೇಲೆ ಗಮನಹರಿಸುವುದು ಹಾಗೂ ದೇಹವನ್ನು ಸಂಪೂರ್ಣವಾಗಿ ಸಡಿಲಗೊಳಿಸುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ಇದಲ್ಲದೆ, ಸಮಸ್ಯೆಗಳ ಬಗ್ಗೆ ಸ್ಪಷ್ಟವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು, ಎಡಮಗ್ಗುಲಾಗಿ ಮಲಗುವುದು ಹಾಗೂ ಅಗತ್ಯವಿದ್ದರೆ ಮನೋವೈದ್ಯರು ಅಥವಾ ಆರೋಗ್ಯ ತಜ್ಞರ ಸಲಹೆ ಪಡೆಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ರಾತ್ರಿ ಅತಿಯಾಗಿ ಯೋಚಿಸುವ ಅಭ್ಯಾಸವನ್ನು ನಿರ್ಲಕ್ಷಿಸದೆ ಆರಂಭದಲ್ಲೇ ನಿಯಂತ್ರಣಕ್ಕೆ ತಂದರೆ, ಉತ್ತಮ ನಿದ್ರೆಯೊಂದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News