Dailyhunt Logo
  • Light mode
    Follow system
    Dark mode
    • Play Story
    • App Story
'ರಾಯರೇ ಆ ಹುಡುಗಿಯಿಂದ ಕಾಪಾಡಿ..!': ರಾಘವೇಂದ್ರ ಮಠದ ಹುಂಡಿಯಲ್ಲಿ ಸಿಕ್ಕ ವಿಚಿತ್ರ ಹರಕೆ ಪತ್ರ ವೈರಲ್

'ರಾಯರೇ ಆ ಹುಡುಗಿಯಿಂದ ಕಾಪಾಡಿ..!': ರಾಘವೇಂದ್ರ ಮಠದ ಹುಂಡಿಯಲ್ಲಿ ಸಿಕ್ಕ ವಿಚಿತ್ರ ಹರಕೆ ಪತ್ರ ವೈರಲ್

AIN Kannada 3 months ago

ಬೆಳಗಾವಿ: ಸಾಮಾನ್ಯವಾಗಿ ಆರೋಗ್ಯ, ಉದ್ಯೋಗ, ಮದುವೆ, ಕುಟುಂಬದ ಸಮಸ್ಯೆಗಳ ಪರಿಹಾರಕ್ಕಾಗಿ ದೇವರಿಗೆ ಹರಕೆ ಪತ್ರ ಬರೆಯುವ ಭಕ್ತರನ್ನು ನೋಡಿದ್ದೇವೆ. ಆದರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪತ್ತೆಯಾದ ಹರಕೆ ಪತ್ರವೊಂದು ಭಕ್ತರನ್ನೇ ಅಚ್ಚರಿಗೆ ದೂಡಿದೆ.

"ರಾಯರೇ… ಆ ಹುಡುಗಿಯಿಂದ ನಮ್ಮನ್ನು ಕಾಪಾಡಿ" ಎಂದು ಅನಾಮಧೇಯ ಭಕ್ತನೊಬ್ಬ ಬರೆದ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಮಠದ ಹುಂಡಿ ಎಣಿಕೆ ವೇಳೆ ಈ ಪತ್ರ ಪತ್ತೆಯಾಗಿದೆ. ಪತ್ರದ ಆರಂಭದಲ್ಲಿ "ಶ್ರೀ ಗಣಪತಿಯೇ ನಮಃ" ಹಾಗೂ "ಓಂ ಶ್ರೀ ರಾಘವೇಂದ್ರಾಯ ನಮಃ" ಎಂದು ಬರೆದು, ಬಳಿಕ ತನ್ನ ಸಂಕಷ್ಟವನ್ನು ರಾಯರ ಮುಂದೆ ಭಕ್ತ ಮನಬಿಚ್ಚಿದ್ದಾನೆ.

"ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು… ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು… ಈ ಕಷ್ಟದಿಂದ ನಮ್ಮನ್ನು ಪಾರು ಮಾಡು… ನಮ್ಮ ಜೊತೆ ರಾಯರಿದ್ದಾರೆ ಎಂಬ ನಂಬಿಕೆಯಿಂದ ನನ್ನ ನೋವನ್ನು ಹೇಳಿಕೊಳ್ಳುತ್ತಿದ್ದೇನೆ. ಗುರುಗಳೇ, ಆದಿಶಕ್ತಿ ದೇವಿ, ತಂದೆ-ತಾಯಿ ಕಾಪಾಡಿ" ಎಂದು ಪತ್ರದಲ್ಲಿ ಭಾವನಾತ್ಮಕವಾಗಿ ಉಲ್ಲೇಖಿಸಲಾಗಿದೆ.

ಪತ್ರದಲ್ಲಿ ಹೆಸರು, ವಿಳಾಸ ಅಥವಾ ಯಾವುದೇ ವೈಯಕ್ತಿಕ ಮಾಹಿತಿ ನೀಡಲಾಗಿಲ್ಲ. ಅನಾಮಧೇಯ ಭಕ್ತನ ಈ ಮನವಿ ಮಠದ ಸಿಬ್ಬಂದಿಯನ್ನಷ್ಟೇ ಅಲ್ಲ, ಭಕ್ತರನ್ನೂ ಅಚ್ಚರಿಗೊಳಿಸಿದೆ. ವಿಚಿತ್ರ ಹರಕೆ ಪತ್ರದ ವಿಷಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News