Dailyhunt Logo
  • Light mode
    Follow system
    Dark mode
    • Play Story
    • App Story
Ram Mandir Donation Scam: ಎಸ್‌ಐಟಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

Ram Mandir Donation Scam: ಎಸ್‌ಐಟಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

AIN Kannada 4 months ago

ಅಯೋಧ್ಯೆ: ರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ಬೆಳಕಿಗೆ ಬರುವ ಮುನ್ನ ಪ್ರತಿದಿನ 6 ರಿಂದ 8 ಲಕ್ಷ ರೂಪಾಯಿ ಹಣ ವ್ಯವಸ್ಥಿತವಾಗಿ ಲೂಟಿ ಆಗಿರುವ ಬಗ್ಗೆ ಎಸ್‌ಐಟಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಎಸ್‌ಐಟಿ ತನಿಖೆಯ ಪ್ರಕಾರ, ದೇಣಿಗೆ ಎಣಿಕೆ ಹೊಣೆ ಹೊತ್ತಿದ್ದ ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದಾಗ ಈ ಅಕ್ರಮದ ವಿವರಗಳು ಬೆಳಕಿಗೆ ಬಂದಿವೆ.

ಹಗರಣ ಬಹಿರಂಗವಾಗುವ ಮೊದಲು ಟ್ರಸ್ಟ್ ಬ್ಯಾಂಕ್ ಖಾತೆಗಳಿಗೆ ದಿನವೊಂದಕ್ಕೆ ಸರಾಸರಿ 16 ರಿಂದ 18 ಲಕ್ಷ ರೂಪಾಯಿ ಠೇವಣಿ ಆಗುತ್ತಿತ್ತು. ಆದರೆ ಪ್ರಕರಣ ಬೆಳಕಿಗೆ ಬಂದ ಬಳಿಕ ನಿತ್ಯ 24 ರಿಂದ 26 ಲಕ್ಷ ರೂಪಾಯಿ ಜಮೆಯಾಗುತ್ತಿದೆ ಎಂದು ದಾಖಲೆಗಳು ತೋರಿಸುತ್ತಿವೆ.

ಇದರ ಆಧಾರದ ಮೇಲೆ ಪ್ರತಿದಿನ 6 ರಿಂದ 8 ಲಕ್ಷ ರೂಪಾಯಿ ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಘಟನೆಯ ನಂತರ ರಾಮಮಂದಿರ ಟ್ರಸ್ಟ್ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ದೇಣಿಗೆ ಎಣಿಕೆ ಸಿಬ್ಬಂದಿಗೆ ಹೊಸ ಡ್ರೆಸ್‌ಕೋಡ್ ಜಾರಿಗೆ ತಂದಿದೆ. ಜೇಬುಗಳಿಲ್ಲದ ಕಡು ನೀಲಿ ಬಣ್ಣದ ಸಮವಸ್ತ್ರ ಧರಿಸುವುದು ಕಡ್ಡಾಯ ಮಾಡಲಾಗಿದೆ. ಹಣ ಎಣಿಕೆಗೆ ಮುನ್ನ ಎರಡು ಬಾರಿ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ಕುರ್ಚಿಯಲ್ಲಿ ಕೂತು ಹಣ ಎಣಿಕೆ ಮಾಡುವ ಬದಲು ನೆಲದ ಮೇಲೆ ಕೂತು ಎಣಿಕೆ ಮಾಡಬೇಕು ಎಂಬ ನಿಯಮ ಜಾರಿಗೆ ಬಂದಿದೆ. ದೇಣಿಗೆ ಎಣಿಕೆ ಕೇಂದ್ರದಲ್ಲಿ ಶೂ ಹಾಗೂ ಚಪ್ಪಲಿ ಧರಿಸುವುದಕ್ಕೂ ನಿಷೇಧ ವಿಧಿಸಲಾಗಿದೆ.

ಇದೇ ವೇಳೆ ಚಂದಾ ಕಳ್ಳತನ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಹಾಗೂ ಸಿಎಜಿಯಿಂದ ಲೆಕ್ಕ ಪರಿಶೋಧನೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್‌ಗೆ ವಕೀಲ ಮೋಹಿತ್ ಅಶೋಕ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ ಎಂದು ತಿಳಿದುಬಂದಿದೆ.

ಅಯೋಧ್ಯೆ ಪ್ರಕರಣದಂತೆಯೇ ಬದರಿನಾಥ-ಕೇದಾರನಾಥ ದೇಗುಲಗಳಲ್ಲಿಯೂ ದೇಣಿಗೆ ಕಳ್ಳತನ ಆರೋಪಗಳು ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ದೇವಾಲಯ ಸಮಿತಿ ತನಿಖೆಗೆ ಆದೇಶಿಸಿದೆ. ಪುರಾವೆಗಳು, ಸಿಸಿಟಿವಿ ದೃಶ್ಯಗಳು ಹಾಗೂ ಸಂಬಂಧಪಟ್ಟವರ ಹೇಳಿಕೆಗಳ ಆಧಾರದ ಮೇಲೆ ತನಿಖಾ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News