Dailyhunt Logo
  • Light mode
    Follow system
    Dark mode
    • Play Story
    • App Story
RCB ಗೆಲುವಿಗೆ ಡಿಕೆಶಿ ಅಭಿನಂದನೆ: 'ನಮ್ಮ ಸ್ಟೇಡಿಯಂ ಮತ್ತು ಯುವಕರಿಗೆ ಅನ್ಯಾಯವಾಗಿದೆ' ಎಂದ ಡಿ.ಕೆ. ಶಿವಕುಮಾರ್

RCB ಗೆಲುವಿಗೆ ಡಿಕೆಶಿ ಅಭಿನಂದನೆ: 'ನಮ್ಮ ಸ್ಟೇಡಿಯಂ ಮತ್ತು ಯುವಕರಿಗೆ ಅನ್ಯಾಯವಾಗಿದೆ' ಎಂದ ಡಿ.ಕೆ. ಶಿವಕುಮಾರ್

AIN Kannada 1 week ago

ಬೆಂಗಳೂರು: ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಾಗಿತ್ತು. ಆದರೆ ಗುಜರಾತ್ ತನ್ನ ಪ್ರಭಾವ ಬಳಸಿ ಪಂದ್ಯವನ್ನು ಬೇರೆಡೆಗೆ ಕೊಂಡೊಯ್ದಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ಆಯೋಜನೆ ಆಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಫೈನಲ್ ಪಂದ್ಯಕ್ಕೆ ಕರ್ನಾಟಕ ಸರ್ಕಾರ ಅಗತ್ಯ ಅನುಮತಿಗಳನ್ನು ನೀಡಿತ್ತು.

ಆದರೂ ಪಂದ್ಯ ನಮ್ಮಿಂದ ಕೈತಪ್ಪಿದ್ದು, ಇದರಿಂದ ನಮ್ಮ ಕ್ರೀಡಾಂಗಣಕ್ಕೂ ಹಾಗೂ ರಾಜ್ಯದ ಯುವಕರಿಗೂ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಮರುಕಳಿಸದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ರಾಜ್ಯದ ಕ್ರೀಡಾ ಮೂಲಸೌಕರ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಐಪಿಎಲ್ ಸೀಸನ್-19ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಡಿ.ಕೆ. ಶಿವಕುಮಾರ್, "ಆರ್‌ಸಿಬಿ ಕರ್ನಾಟಕದ ಹೆಸರನ್ನು ಹೊತ್ತಿರುವ ತಂಡ. ರಾಜ್ಯದ ಆಟಗಾರರು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಕೋಟ್ಯಂತರ ಅಭಿಮಾನಿಗಳ ಪರವಾಗಿ ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳು" ಎಂದರು.

"ಆರ್‌ಸಿಬಿ ಸಾಧನೆ ಕರ್ನಾಟಕಕ್ಕೆ ಹೆಮ್ಮೆ ತರುವಂತದ್ದು. ತಂಡದ ಈ ಐತಿಹಾಸಿಕ ಗೆಲುವು ರಾಜ್ಯದ ಕ್ರೀಡಾಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ" ಎಂದು ಅವರು ಪ್ರಶಂಸಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: AIN Live News