Dailyhunt
RCB ವಿರುದ್ದ ಮೋಸ ನಡೀತಾ!? ರಜತ್ ಕ್ಯಾಚ್ ಔಟೋ-ನಾಟೌಟೋ? ನಿಯಮ ಏನು ಹೇಳುತ್ತೆ?

RCB ವಿರುದ್ದ ಮೋಸ ನಡೀತಾ!? ರಜತ್ ಕ್ಯಾಚ್ ಔಟೋ-ನಾಟೌಟೋ? ನಿಯಮ ಏನು ಹೇಳುತ್ತೆ?

AIN Kannada 2 weeks ago

ಜಿಟಿ-ಆರ್‌ಸಿಬಿ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಹಿಡಿದ ರಜತ್ ಪಟಿದಾರ್ ಅವರ ಕ್ಯಾಚ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಸಿಕ್ಸ್ ಬಾರಿಸಲು ಯತ್ನಿಸಿದ ಪಟಿದಾರ್ ಹೊಡೆದ ಚೆಂಡನ್ನು ಹೋಲ್ಡರ್ ಹಿಡಿದರೂ, ಬಳಿಕ ಅದು ನೆಲಕ್ಕೆ ಉಜ್ಜಿದಂತಾಗಿದೆ ಎಂಬ ದೃಶ್ಯ ಗೊಂದಲ ಸೃಷ್ಟಿಸಿದೆ.

ಕ್ಯಾಚ್ ಹಿಡಿದ ನಂತರ ಹೋಲ್ಡರ್ ನೆಲಕ್ಕೆ ಬಿದ್ದರೂ, ಚೆಂಡಿನ ಮೇಲಿನ ನಿಯಂತ್ರಣ ಹೊಂದಿದ್ದರು ಎಂಬ ಕಾರಣಕ್ಕೆ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಈ ನಿರ್ಧಾರಕ್ಕೆ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದು, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಇದು ನಾಟ್ ಔಟ್ ಆಗಬೇಕಿತ್ತು ಎಂದು ಹೇಳಿದ್ದಾರೆ.

ಆದರೆ ಅಂಪೈರ್‌ಗಳು ಮೆರಿಲಿಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ನಿಯಮ 33.2.1 ಆಧಾರದಲ್ಲಿ ತೀರ್ಪು ನೀಡಿದ್ದಾರೆ. ಈ ನಿಯಮದ ಪ್ರಕಾರ, ಫೀಲ್ಡರ್ ಕ್ಯಾಚ್ ಹಿಡಿದ ಬಳಿಕ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೆ, ನಂತರ ಅದು ನೆಲಕ್ಕೆ ತಗುಲಿದರೂ ಔಟ್ ಎಂದೇ ಪರಿಗಣಿಸಲಾಗುತ್ತದೆ.

ಥರ್ಡ್ ಅಂಪೈರ್ ಹೋಲ್ಡರ್ ಚೆಂಡಿನ ಮೇಲೆ ನಿಯಂತ್ರಣ ಹೊಂದಿದ್ದರು ಎಂದು ಕಂಡು ಈ ತೀರ್ಪು ನೀಡಿದ್ದಾರೆ ಎನ್ನಲಾಗಿದೆ. ಆದರೆ, ಅವರು ಸಂಪೂರ್ಣ ನಿಯಂತ್ರಣದಲ್ಲಿ ಇರಲಿಲ್ಲ ಎಂಬ ವಾದವೂ ಕೇಳಿಬರುತ್ತಿದೆ.

ಒಟ್ಟಾರೆ, ಈ ಕ್ಯಾಚ್ ವಿವಾದ ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News