ಬೆಳಗಾವಿ: ವಿಧಾನ ಪರಿಷತ್ ಸಚಿವಾಲಯದಲ್ಲಿ ಎಂಟು ಜನರನ್ನು ಅಕ್ರಮವಾಗಿ ನೇರ ನೇಮಕಾತಿ ಮಾಡಲಾಗಿದೆ ಎಂಬ ಆರೋಪಗಳು ಸಭಾಪತಿ ಬಸವರಾಜ ಹೋರಟ್ಟಿ ಅವರ ವಿರುದ್ಧ ಕೇಳಿಬಂದಿರುವ ಹಿನ್ನೆಲೆಯಲ್ಲಿ, ನೈತಿಕ ಹೊಣೆ ಹೊತ್ತು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ನಿಷ್ಪಕ್ಷಪಾತ ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಸಮಾಜ ಸೇವಕ ಬಾಳು ತೇರದಾಳ ಆಗ್ರಹಿಸಿದ್ದಾರೆ.
ಬೆಳಗಾವಿ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ್ ಅವರು, ವಿಧಾನ ಪರಿಷತ್ ಸಚಿವಾಲಯದಲ್ಲಿನ ಅಕ್ರಮ ನೇರ ನೇಮಕಾತಿ ಕುರಿತು ಸಭಾಪತಿ ಬಸವರಾಜ ಹೋರಟ್ಟಿ ಅವರಿಗೆ ಬಹಿರಂಗವಾಗಿ ಪ್ರಶ್ನೆಗಳನ್ನು ಎತ್ತಿ, ಈ ವಿಷಯದ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವೇ ಎಂದು ನಾಗರಾಜ್ ಯಾದವ್ ಸವಾಲು ಹಾಕಿದ್ದರು. ಅಲ್ಲದೆ, "ಸವಾಲು ಸ್ವೀಕರಿಸಿ, ನಾನು ಚರ್ಚೆಗೆ ಬರುತ್ತೇನೆ" ಎಂದು ನಾಗರಾಜ ಯಾದವ್ ಹೇಳಿಕೆ ನೀಡಿದ್ದರು ನಾನು ಸ್ಪಷ್ಟವಾಗಿ ಉಲ್ಲೇಖಿಸಿದ್ದೆನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಅವರ ತಾತ್ಕಾಲಿಕ ಆಪ್ತ ಸಹಾಯಕ ಎಲ್ ಜಯಲಿಂಗೇಗೌಡ ಮಾತನಾಡಿರುವ ವಿಡಿಯೋ ಪೆನ್ ಡ್ರೈವ್ ಹಾಕಿ ಪೋಲಿಸ್ ಇಲಾಖೆಯ ಹಾಗೂ ಸಂಬಂದಪಟ್ಟ ಇಲಾಖೆಗೆ ದೂರನ್ನು ನೀಡಿದ್ದೆನೆ. ಆದರೆ ತನಿಖೆ ವಿಳಂಬವಾಗುತ್ತಿದೆ ಹಾಗೂ ತನಿಖೆ ನಡೆಸುವಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಈ ಕುರಿತು ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳು ಸ್ಪಷ್ಟನೆ ನೀಡಬೇಕು ಎಂದು ಬಾಳು ತೇರದಾಳ ಅವರು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಹುದ್ದೆಯಲ್ಲಿರುವವರ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಾಗ, ಅವುಗಳ ಸತ್ಯಾಸತ್ಯತೆ ಹೊರಬರಲು ಸ್ವತಂತ್ರ, ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯುವುದು ಅತ್ಯಗತ್ಯ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ತನಿಖೆಯ ವಿಶ್ವಾಸಾರ್ಹತೆಯನ್ನು ಕಾಪಾಡುವ ಉದ್ದೇಶದಿಂದ ಸಭಾಪತಿ ಬಸವರಾಜ ಹೋರಟ್ಟಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಾಳು ತೇರದಾಳ ಆಗ್ರಹಿಸಿದ್ದಾರೆ.

