ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಬ್ಯಾಚುಲರ್ ಜೀವನಕ್ಕೆ ಗುಡ್‌ಬೈ ಹೇಳಿ ಕಾವ್ಯ ರೆಡ್ಡಿ ಜೊತೆ ವಿವಾಹವಾಗಿದ್ದಾರೆ. ಏಪ್ರಿಲ್ 29ರಂದು ತಿರುಮಲದಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು, ಸ್ನೇಹಿತರು ಮತ್ತು ಆಪ್ತರು ಭಾಗವಹಿಸಿ ನವಜೋಡಿಗೆ ಆಶೀರ್ವಾದಿಸಿದರು.
ವಿವಾಹದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಜೋಡಿಗೆ ಶುಭಾಶಯಗಳ ಸುರಿಮಳೆ ಹರಿಸುತ್ತಿದ್ದಾರೆ. ಮೇ 1ರಂದು ಹೈದರಾಬಾದ್‌ನಲ್ಲಿ ಟಾಲಿವುಡ್ ಗಣ್ಯರಿಗಾಗಿ ಭರ್ಜರಿ ಆರತಕ್ಷತೆ ಕಾರ್ಯಕ್ರಮವೂ ಆಯೋಜಿಸಲಾಗಿದೆ.
ಕಾವ್ಯ ರೆಡ್ಡಿ ಚಿತ್ರರಂಗದವರಲ್ಲ, ಅವರು ಖ್ಯಾತ ವಕೀಲರ ಪುತ್ರಿ. ಕೆಲವು ಕಾಲದಿಂದ ಪ್ರೀತಿಸುತ್ತಿದ್ದ ಈ ಜೋಡಿ, ಕುಟುಂಬದ ಹಿರಿಯರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.
ವಯಸ್ಸಿನ ಅಂತರವೂ ಇದೀಗ ಚರ್ಚೆಗೆ ಕಾರಣವಾಗಿದ್ದು, 1993ರಲ್ಲಿ ಜನಿಸಿದ ಶ್ರೀನಿವಾಸ್ ಅವರಿಗೆ 33 ವರ್ಷವಾಗಿದ್ದು, ಕಾವ್ಯ ರೆಡ್ಡಿ ಅವರಿಗಿಂತ ಸುಮಾರು 4-5 ವರ್ಷ ಚಿಕ್ಕವರಾಗಿದ್ದಾರೆ ಎನ್ನಲಾಗಿದೆ.

