Dailyhunt Logo
  • Light mode
    Follow system
    Dark mode
    • Play Story
    • App Story
ಶಿಕಾರಿಪುರದಲ್ಲಿ ಬಿ.ವೈ. ರಾಘವೇಂದ್ರ ಭೇಟಿ ಮಾಡಿದ ಶ್ರೀಲಂಕಾ ಸಂಸದ ಶ್ರೀಧರನ್ ಶಿವಜ್ಞಾನಂ!

ಶಿಕಾರಿಪುರದಲ್ಲಿ ಬಿ.ವೈ. ರಾಘವೇಂದ್ರ ಭೇಟಿ ಮಾಡಿದ ಶ್ರೀಲಂಕಾ ಸಂಸದ ಶ್ರೀಧರನ್ ಶಿವಜ್ಞಾನಂ!

AIN Kannada 1 week ago

ಶಿವಮೊಗ್ಗ: ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಶಿಕಾರಿಪುರ ನಿವಾಸಕ್ಕೆ ಶ್ರೀಲಂಕಾದ ಜಾಫ್ನಾ ಮತ್ತು ಕಿಲಿನೊಚ್ಚಿ ಜಿಲ್ಲೆಯ ಸಂಸದ ಶ್ರೀಧರನ್ ಶಿವಜ್ಞಾನಂ ಭೇಟಿ ನೀಡಿದರು.

ಭೇಟಿ ವೇಳೆ ಉಭಯ ನಾಯಕರು ಭಾರತ ಮತ್ತು ಶ್ರೀಲಂಕಾ ನಡುವಿನ ಸುದೀರ್ಘ ಸಾಂಸ್ಕೃತಿಕ ಬಾಂಧವ್ಯ, ಉಭಯ ದೇಶಗಳ ರಾಜಕೀಯ ಬೆಳವಣಿಗೆಗಳು ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ಶ್ರೀಧರನ್ ಶಿವಜ್ಞಾನಂ ಅವರನ್ನು ಸನ್ಮಾನಿಸಿ ಗೌರವಿಸಿದರು.

ಭೇಟಿಯ ವೇಳೆ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: AIN Live News