Dailyhunt Logo
  • Light mode
    Follow system
    Dark mode
    • Play Story
    • App Story
ಶೂಟಿಂಗ್ ಮಧ್ಯೆ ಚಿನ್ನದ ಸರ ಕಳವು: ಕೊಡಿಗೇಹಳ್ಳಿ ಪೊಲೀಸರಿಂದ ಆರೋಪಿ ಬಂಧನ!

ಶೂಟಿಂಗ್ ಮಧ್ಯೆ ಚಿನ್ನದ ಸರ ಕಳವು: ಕೊಡಿಗೇಹಳ್ಳಿ ಪೊಲೀಸರಿಂದ ಆರೋಪಿ ಬಂಧನ!

AIN Kannada 2 weeks ago

ಬೆಂಗಳೂರು: ಶಾರ್ಟ್ ಮೂವಿ ಶೂಟಿಂಗ್ ವೇಳೆ ಕಳ್ಳತನ ನಡೆದ ಘಟನೆ ಸಹಕಾರನಗರದಲ್ಲಿ ಬೆಳಕಿಗೆ ಬಂದಿದೆ.

ನಟ ಲಿಖಿತ್ ರಾಜ್ (Short Movie "ಫ್ಲಾಟ್ F01" ನಿರ್ದೇಶಕ) ಅವರ ಫ್ಲಾಟ್‌ನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಚಿನ್ನದ ಸರ ಕಳವಾಗಿತ್ತು ಎಂದು ತಿಳಿದುಬಂದಿದೆ.

ಜೂನ್ 28ರಿಂದ ಸಹಕಾರನಗರದಲ್ಲಿರುವ ಅವರ ಫ್ಲಾಟ್‌ನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ, "ಅಭಿಷೇಕ್" ಎಂಬಾತ ಅವಕಾಶ ಕೇಳಿಕೊಂಡು ತಂಡಕ್ಕೆ ಸೇರಿಕೊಂಡಿದ್ದಾನೆ ಎಂದು ಮಾಹಿತಿ ಇದೆ.

ಶೂಟಿಂಗ್ ಮಧ್ಯೆಯೇ ದೇವರ ಮನೆಯಲ್ಲಿದ್ದ ಚಿನ್ನದ ಸರ ಕಳವಾಗಿದ್ದು, ಬಳಿಕ ನಟನ ತಾಯಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ ಅಭಿಷೇಕ್ ಎಂಬಾತನನ್ನು ಬಂಧಿಸಿದ್ದಾರೆ.

ಬಂಧಿತನಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News