
ರಾಮನಗರ: ಭಾಷಣದ ಮೂಲಕ ಜನರನ್ನು ಆಕರ್ಷಣೆಯನ್ನು ಮಾಡ್ಲಿಕ್ಕೆ ಕಾಂಗ್ರೆಸ್ ನಾಯಕರು ಇಬ್ರಾಹಿಂರವರು ಕೇವಲ ಭಾಷಣಕ್ಕಾಗಿ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೂ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕುವುದು ಕಾಂಗ್ರೆಸ್ ಅಭ್ಯರ್ಥಿ ಸೋಲಿಸುವುದಕ್ಕೆ ಅಂತ ಹೇಳಿ ಪದೇ ಪದೇ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
2012ರ ಚುನಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಮ್ ಅಂತಾ ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೊಟ್ಟಂತಹ ಒಂದು ಹೇಳಿಕೆಯನ್ನೇ ಆಧರಿಸಿ ರೋಷನ್ ಬೇಗ್ ಅವರಿಗೆ ನೋಟಿಸ್ ನೀಡದೆ 6 ವರ್ಷ ಸಸ್ಪೆಂಡ್ ಮಾಡಿಬಿಟ್ಟರು. ಇನ್ನು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಬಗ್ಗೆ ಯಾವ ರೀತಿ ಪದ ಬಳಕೆಯನ್ನು ಮಾಡಿದ್ರು ಅನ್ನೋದನ್ನ ಹೇಳಬೇಕು. ಅಲ್ಲದೆ ವಿಧಾನಸೌಧದ ಮುಂದೆ ಸಿದ್ದರಾಮಯ್ಯನವರು ಭಾಷಣ ಮಾಡಿದ್ರಲ್ಲ ರೋಷನ್ ಬೇಗ್ ಏನೆಲ್ಲ ಪದಬಳಕೆ ಮಾಡಿದ್ರು ಎಂಬುದು ಗೊತ್ತಿದೆ. ಆರು ಬಾರಿ ಸಂಸದರಾಗಿದ್ದ ಕೋಲಾರದ ಮುನಿಯಪ್ಪರವರ ಸೋಲಿಗೂ ಕೂಡ ಸಿದ್ದರಾಮಯ್ಯನವರ ಹಿಂದೆ ಮುಂದೆ ಇದ್ದ ನಾಯಕರೇ ಕಾರಣ ಎಂದು ಆರೋಪಿದ್ದಾರೆ. ನಾನು ಪದ ಬಳಕೆಯಲ್ಲಿ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿ ಮಾತನಾಡಿಲ್ಲ. ನಾನು ಯಾರ ಬಗ್ಗೆಯೂ ಲಘುವಾಗಿ ಪದ ಬಳಕೆಗಳನ್ನು ಮಾಡಿಲ್ಲ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕೆ. ಹೇಳಿದರು.
Share
Continue Reading