Dailyhunt Logo
  • Light mode
    Follow system
    Dark mode
    • Play Story
    • App Story
ಸೌರವ್ ಗಂಗೂಲಿ ಭದ್ರತೆ ಕಡಿತ: Z ನಿಂದ Y ಕೇಟಗರಿಗೆ ಇಳಿಕೆ!

ಸೌರವ್ ಗಂಗೂಲಿ ಭದ್ರತೆ ಕಡಿತ: Z ನಿಂದ Y ಕೇಟಗರಿಗೆ ಇಳಿಕೆ!

AIN Kannada 1 week ago

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ ಅವರ ಭದ್ರತಾ ಮಟ್ಟವನ್ನು ರಾಜ್ಯ ಸರ್ಕಾರ ಮರುಪರಿಶೀಲಿಸಿ Zʼ ಶ್ರೇಣಿಯಿಂದ Yʼ ಶ್ರೇಣಿಗೆ ಇಳಿಸಿರುವ ಬಗ್ಗೆ ವರದಿ ಬಂದಿದೆ. ಸಮಗ್ರ ಭದ್ರತಾ ಮೌಲ್ಯಮಾಪನದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದನ್ನು ರಾಜ್ಯದ VIP ಭದ್ರತಾ ಪ್ರೋಟೋಕಾಲ್ ಪುನರ್‌ರಚನೆಯ ಭಾಗವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ y ʼ ಶ್ರೇಣಿಯಿಂದ Zʼ ಶ್ರೇಣಿಗೆ ಏರಿಸಲಾಗಿದ್ದ ಭದ್ರತೆ ಇದೀಗ ಮತ್ತೆ ಕಡಿತಗೊಂಡಿದ್ದು, ಇನ್ನುಮುಂದೆ ಗಂಗೂಲಿ ಅವರಿಗೆ 11 ಸಿಬ್ಬಂದಿಯಿರುವ Y-ಕೇಟಗರಿ ಭದ್ರತೆ ಮುಂದುವರಿಯಲಿದೆ. ಸರ್ಕಾರದ ಪ್ರಕಾರ, ಪ್ರಸ್ತುತ ಅವರ ವಿರುದ್ಧ ಗಂಭೀರ ಬೆದರಿಕೆ ಅಂದಾಜು ಇಲ್ಲದ ಕಾರಣ ಈ ಬದಲಾವಣೆ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News