Dailyhunt Logo
  • Light mode
    Follow system
    Dark mode
    • Play Story
    • App Story
ತಂದೆ ಕಣ್ಣೆದುರೇ ದುರಂತ ಅಂತ್ಯ: ಡಿಆರ್‌ಡಿಒ ಹಿರಿಯ ವಿಜ್ಞಾನಿ ಸಾವು!

ತಂದೆ ಕಣ್ಣೆದುರೇ ದುರಂತ ಅಂತ್ಯ: ಡಿಆರ್‌ಡಿಒ ಹಿರಿಯ ವಿಜ್ಞಾನಿ ಸಾವು!

AIN Kannada 1 hr ago

ಬೆಂಗಳೂರು: ಡಿಆರ್‌ಡಿಒ ಇಲಾಖೆಯ ಹಿರಿಯ ವಿಜ್ಞಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸೀಗೇಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 21ರ ಸಂಜೆ ನಡೆದ ಈ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಎಡಿಎ ಸಂಸ್ಥೆಯ ಗ್ರೇಡ್‌ ಎಫ್ ವಿಜ್ಞಾನಿಯಾಗಿದ್ದ 47 ವರ್ಷದ ಶರದ್ ಕಟಿಯಾರ್ ಮೃತಪಟ್ಟವರು.

ಸಂಸ್ಥೆಯ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶರದ್, ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ನಿಮ್ಹಾನ್ಸ್‌ನಲ್ಲೂ ಚಿಕಿತ್ಸೆ ಪಡೆಯುತ್ತಿದ್ದರು. ಘಟನೆ ನಡೆದ ದಿನವೂ ನಿಮ್ಹಾನ್ಸ್‌ಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು ಎನ್ನಲಾಗಿದೆ.

ತಂದೆಯ ಮುಂದೆಯೇ ದುರಂತ

ಘಟನೆ ನಡೆದ ದಿನ ಶರದ್ ಅವರ ಚಲನವಲನವನ್ನು ಕುಟುಂಬಸ್ಥರು ಗಮನಿಸುತ್ತಿದ್ದರು. ಈ ವೇಳೆ ಅವರು ಏಕಾಏಕಿ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳ ಮೂಲಕ ನಾಲ್ಕನೇ ಮಹಡಿಗೆ ತೆರಳಿದ್ದಾರೆ. ಅನುಮಾನಗೊಂಡ ತಂದೆ ಅವರನ್ನು ತಡೆಯಲು ಹಿಂಬಾಲಿಸಿದ್ದಾರೆ. ಆದರೆ, ವಯಸ್ಸಿನ ಕಾರಣದಿಂದ ಮೆಟ್ಟಿಲುಗಳನ್ನು ಹತ್ತಲು ತಂದೆಗೆ ಸಾಧ್ಯವಾಗದೆ ವಿಳಂಬವಾಗಿದೆ ಎನ್ನಲಾಗಿದೆ.

ತಂದೆ ತಲುಪುವಷ್ಟರಲ್ಲಿ ಶರದ್ ಮೇಲಿನಿಂದ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಲಾಯಿತಾದರೂ, ಅಷ್ಟರಲ್ಲೇ ಮೃತಪಟ್ಟಿದ್ದರು.

ಘಟನೆ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಕೆ.ಆರ್.ಪುರಂ ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News