Dailyhunt
ವಂಚನೆ ಆರೋಪ: ಕಾಂಗ್ರೆಸ್‌ ಮುಖಂಡ ಮದನ್‌ ರಾಜ್‌ ವಿರುದ್ಧ ದೂರು ದಾಖಲು

ವಂಚನೆ ಆರೋಪ: ಕಾಂಗ್ರೆಸ್‌ ಮುಖಂಡ ಮದನ್‌ ರಾಜ್‌ ವಿರುದ್ಧ ದೂರು ದಾಖಲು

AIN Kannada 2 weeks ago

ಮೈಸೂರು: ಜಿಲ್ಲೆಯ ಟಿ. ನರಸೀಪುರದಲ್ಲಿ ಕಾಂಗ್ರೆಸ್ ಮುಖಂಡ ಮದನ್ ರಾಜ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.

ಯುವತಿಯೊಬ್ಬಳು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಪ್ರೀತಿ ಹೆಸರಿನಲ್ಲಿ ಮೋಸ ಮಾಡಿದ್ದು ಮಾತ್ರವಲ್ಲ, ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಜೊತೆಗೆ, ಇಬ್ಬರೂ ಒಟ್ಟಿಗೆ ತೆಗೆದಿದ್ದ ಫೋಟೋಗಳಿರುವ ಮೊಬೈಲ್‌ಗಳನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನಷ್ಟು ಗಂಭೀರವಾಗಿ, ಮದುವೆಗೆ ಒತ್ತಾಯಿಸಿದಾಗ 'ಇಬ್ಬರೂ ವಿಷ ಕುಡಿಯೋಣ' ಎಂದು ಹೇಳಿ, ಯುವತಿಗೆ ಮಾತ್ರ ವಿಷ ನೀಡಿ ಕೊಲೆ ಯತ್ನ ಮಾಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

ಇದೀಗ, ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬುದೂ ದೂರಿನಲ್ಲಿ ಬಹಿರಂಗವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮದನ್ ರಾಜ್ ಪತ್ತೆಗೆ ಬಲೆ ಬೀಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: AIN Live News