Tuesday, 04 Aug, 6.00 am All Indian News 24x7

ತಂತ್ರಜ್ಞಾನ
ಅಮೆರಿಕಾದಲ್ಲಿ ಟಿಕ್ಟಾಕ್ ಖರೀದಿಯ ಮಾತುಕತೆಯನ್ನು ಮತ್ತೆ ಮುಂದುವರೆಸಿದ ಮೈಕ್ರೋಸಾಫ್ಟ್

ಅಮೆರಿಕ : ಅಮೆರಿಕದಲ್ಲಿನ ಚೀನಾ ಮೂಲದ ಪ್ರಸಿದ್ಧ ವಿಡಿಯೋ ಅಪ್ಲಿಕೇಷನ್​ ಟಿಕ್​​ಟಾಕ್​ ಅನ್ನು ಖರೀದಿಸುವ ಮಾತುಕತೆಗೆ ಮತ್ತೆ ಮೈಕ್ರೋಸಾಫ್ಟ್​ ಮುಂದಾಗಿದ್ದು, ಬಹುತೇಕ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಹೇಳಲಾಗುತ್ತಿದೆ.

ಸೆಪ್ಟೆಂಬರ್ 15ರ ವೇಳೆಗೆ ಈ ಮಾತುಕತೆಗಳು ಪೂರ್ಣಗೊಳ್ಳಲಿವೆ ಎಂದು ಮೈಕ್ರೋಸಾಫ್ಟ್​ ದೃಢಪಡಿಸಿದೆ. ಕೆಲವು ದಿನಗಳ ಹಿಂದಷ್ಟೇ ಮೈಕ್ರೋಸಾಫ್ಟ್​ ಚೀನಾ ಮೂಲದ ಟಿಕ್​ಟಾಕ್​ ಅನ್ನು ಕೊಂಡುಕೊಳ್ಳಲು ಮುಂದಾಗಿತ್ತು. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಎಚ್ಚರಿಕೆಯ ಮೇರೆಗೆ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು.

ಅಮೆರಿಕದ ವಾಲ್​ಸ್ಟ್ರೀಟ್ ಜರ್ನಲ್ ಹೇಳುವಂತೆ ಟಿಕ್​ ಟಾಕ್​ನ ಮಾತೃಸಂಸ್ಥೆ ಬೈಟ್​ಡಾನ್ಸ್​​ ಹಾಗೂ ಮೈಕ್ರೋಸಾಫ್ಟ್​ನೊಂದಿಗೆ ಮಾತುಕತೆಗಳು ನಡೆದಿದ್ದು, ಒಪ್ಪಂದದ ಹಂತಕ್ಕೆ ಬಂದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಎಚ್ಚರಿಕೆಯಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಸಂದೇಹ ಎಂದು ಸ್ಪಷ್ಟಪಡಿಸಿದೆ.

ಇದೇ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್​ ಅಮೆರಿಕ ಸರ್ಕಾರದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ. ಈ ವೇಳೆ ಅಮೆರಿಕ ಅಧ್ಯಕ್ಷರ ಹಿತಾಸಕ್ತಿಯನ್ನು ನಾವು ಮೆಚ್ಚಿಕೊಳ್ಳುತ್ತೇವೆ. ಆದರೆ ಅಮೆರಿಕನ್ನರ ಮಾಹಿತಿ, ಖಾಸಗಿತನ ರಕ್ಷಣೆಯೊಂದಿಗೆ ಆರ್ಥಿಕತೆಗೆ ನೆರವಾಗುತ್ತೇವೆ ಎಂದು ಹೇಳಿಕೊಂಡಿದೆ.

ಇದರ ಜೊತೆಯಲ್ಲಿ ಸೆಪ್ಟೆಂಬರ್ 15ರ ನಂತರ ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಮುಕ್ತಾಯವಾಗಲಿದ್ದು, ಅಮೆರಿಕ ಸೇರಿ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್​​ ರಾಷ್ಟ್ರಗಳಲ್ಲಿ ಟಿಕ್​ಟಾಕ್​ ಅನ್ನು ಕಂಪನಿ ಕಾರ್ಯಾಚರಣೆ ಮಾಡುವ ನಿಟ್ಟಿನಲ್ಲಿ ಗಮನ ಹರಿಸಲಿದೆ ಎಂದು ಮೈಕ್ರೋಸಾಫ್ಟ್​ ಸ್ಪಷ್ಟಪಡಿಸಿದೆ. ಅಮೆರಿಕದಲ್ಲಿ ತಿಂಗಳಿಗೆ 20 ಮಿಲಿಯನ್​ ಮಂದಿ ಟಿಕ್​ಟಾಕ್​ ಅನ್ನು ಬಳಸುತ್ತಿದ್ದು, ಅತಿ ಹೆಚ್ಚು ಆದಾಯ ದೇಶದಿಂದ ಹೊರ ಹೋಗುತ್ತಿದೆ. ಇದರ ಬೆನ್ನಲ್ಲೇ ಚೀನಾ ಅಪ್ಲಿಕೇಷನ್​ಗಳನ್ನು ಬ್ಯಾನ್​ ಮಾಡುವ ಎಚ್ಚರಿಕೆಯೂ ಕೂಡಾ ಟಿಕ್​ ಟಾಕ್​ ಅನ್ನು ನಿದ್ದೆಗೆಡಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top