Tuesday, 27 Apr, 8.20 am All Indian News 24x7

ಅಂತಾರಾಷ್ಟ್ರೀಯ
ಬೈಡನ್​​ ಜೊತೆ ಪ್ರಧಾನಿ ಮೋದಿ ಮಾತುಕಥೆ

ನವದೆಹಲಿ: ಕೋವಿಶೀಲ್ಡ್​ ಕಚ್ಚಾ ವಸ್ತು ತಕ್ಷಣವೇ ಭಾರತಕ್ಕೆ ಕಳುಹಿಸಲು ಈಗಾಗಲೇ ಅಮೆರಿಕ ಒಪ್ಪಿಕೊಂಡಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡನ್​​​ ಜೊತೆ ಫೋನ್​​ ಮೂಲಕ ಚರ್ಚೆ ನಡೆಸಿದರು.

ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ. ಬೈಡನ್​​ ಅವರೊಂದಿಗೆ ಫಲಪ್ರದವಾದ ಸಂಭಾಷಣೆ ನಡೆಸಿದ್ದು, ಎರಡು ದೇಶಗಳು ಅನುಭವಿಸುತ್ತಿರುವ ಕೋವಿಡ್ ಪರಿಸ್ಥಿತಿ ವಿಚಾರವಾಗಿ ವಿವರವಾಗಿ ಚರ್ಚಿಸಿದ್ದೇವೆ. ಯುನೈಟೆಡ್​ ಸ್ಟೇಟ್ಸ್​​ ಭಾರತಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ನಾನು ಅಧ್ಯಕ್ಷ ಬೈಡನ್​​​​​ ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ ಎಂದಿದ್ದಾರೆ

Share

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: allindiannews.com
Top